ತೇರದಾಳ ಪಟ್ಟಣದಲ್ಲಿ ಕಳೆದ ಒಂದು ವಾರದ ಹಿಂದೆ ಪಟ್ಟಣದ ಹಿರಿಯರು ಸೇರಿ ಸ್ವಯಂ ಘೋಷಿತವಾಗಿ, ಕೊರೊನಾ ವೈರಸ್ ತಡೆಗಟ್ಟುವ ಉದ್ದೇಶದಿಂದ ಸುಮಾರು ಒಂದು ವಾರದವರೆಗೆ ತೇರದಾಳ ಪಟ್ಟಣ ವನ್ನು ಲಾಕ್ ಡೌನ ಮಾಡಿದ್ದರು.ಈಗ ವಾರಕಳೆದುಹೋಗಿದ್ದು ಕಾರಣ ಸಾರ್ವಜನಿಕರ ಹಿತಷ್ಟಿಯಿಂದ ಪುನ್ಹ ನಾಳೆ ದಿನಾಂಕ 30-07-2020 ರ ಗುರುವಾರದಿಂದ ಸರಕಾರದ ಈಗಿರುವ ಆದೇಶದ ಪ್ರಕಾರ ಪಟ್ಟಣದ ಎಲ್ಲ ವ್ಯಾಪಾರಸ್ಥರು ನಾಗರೀಕರು ತಮ್ಮೆಲ್ಲ ದಿನನಿತ್ಯದ ವ್ಯಾಪಾರ ವಹಿವಾಟು ಮಾಡಿಕೊಳ್ಳಬಹುದು ಎಂದು ಪಟ್ಟಣದ ನಾಡಗೌಡರಾದ ಪ್ರವೀಣ್ ನಾಡಗೌಡರು ತಿಳಿಸಿದರು.
ಇಂದು ಪಟ್ಟಣದ ಪುರಸಭೆಯ ಆವರಣದಲ್ಲಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಹಾಗೂ ಊರ ಪ್ರಮುಖರು ಸೇರಿ ಈ ಹಿಂದೆ ಸ್ವಯಂಪ್ರೇರಿತರಾಗಿ ಕೈಕೊಂಡ ಲಾಕ್ ಡೌನನ್ನು ತೆರವುಗೊಳಿಸುವ ಬಗ್ಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ನಾಡಗೌಡರು ಲಾಕ್ ಡೌನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರಲ್ಲದೆ ಮಹಾಮಾರಿ ಕೊರೊನಾ ವಿರುದ್ಧ ನಾವೆಲ್ಲ ಇಂತಹ ನಿರ್ಧಾರವನ್ನು ತೆಗೆದುಕೊಳ್ಳುವ ಅನಿವಾರ್ಯತೆ ಇತ್ತು ಹೀಗಾಗಿ ತಮ್ಮೆಲ್ಲರ ಈ ಸಹಕಾರದಿಂದ ಇಂದು ನಾವು ಸುರಕ್ಷಿತವಾಗಿದ್ದೇವೆ ಎಂದು ಹೇಳಿದರು.ನಾಳೆಯಿಂದ ಎಲ್ಲರು ತಮ್ಮ ತಮ್ಮ ದಿನನಿತ್ಯದ ವ್ಯವಹಾರ ಮಾಡಿಕೊಳ್ಳಿ ಆದರೆ ಮರೆಯದೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಿ ನಿಮ್ಮ ರಕ್ಷಣೆಯೊಂದಿಗೆ ಇತರರ ರಕ್ಷಣೆಯನ್ನು ಮಾಡಿ.ನಿಮ್ಮ ನಿಮ್ಮ ರಕ್ಷಣೆ ನಿಮ್ಮ ಕೈಯಲ್ಲಿದೆ ಎಂದರು. ಈ ಸಂದರ್ಭದಲ್ಲಿ ಅನೇಕ ಹಿರಿಯರಾದ ಅಪ್ಪು ಮಂಗಸೂಳಿ, ಯು. ಜಿ.ಮುಜಾವರ, ಶಂಕರ ಕುಂಬಾರ, ಮುಂತಾದವರು ತಮ್ಮ ತಮ್ಮ ಅಭಿಪ್ರಾಯ ತಿಳಿಸಿದರು.ಕೊನೆಗೆ ಎಲ್ಲಾ ಪ್ರಮುಖರು ಸೇರಿ ಪ್ರತಿದಿನ ಮುಂಜಾನೆ 6 ರಿಂದ ಮದ್ಯಾಹ್ನ 2 ರ ವರೆಗೆ ಮಾತ್ರ ವ್ಯಾಪಾರ ವಹಿವಾಟು ಮಾಡಲು ತೀರ್ಮಾನ ತಗೆದುಕೊಂಡರು.ಕಾರಣ ಪಟ್ಟಣದ ಸಾರ್ವಜನಿಕರು ಇನ್ನುಮುಂದೆ ತಮ್ಮೆಲ್ಲ ದಿನನಿತ್ಯದ ವಸ್ತುಗಳನ್ನು ತರಕಾರಿ ಹೀಗೆ ಯಾವುದೇ ವಸ್ತುಗಳನ್ನು ನಿಗದಿತ ಸಮಯದಲ್ಲಿ ಖರೀದಿಸಿ ಸಹಕರಿಸಬೇಕು ಎಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಹಣಮಂತ ರೋಡನ್ನವರ ಪ್ರಾಸ್ತಾವೀಕ ಮಾತಾನಾಡಿದರು.ಪುರಸಭೆ ಸದಸ್ಯ ವಿನಾಯಕ ಬಂಕಾಪುರ್ ಸಚಿನ್ ಕೊಡತೆ ಸೇರಿದಂತೆ ಸಾಕಷ್ಟ ಜನ ಉಪಸ್ಥಿತರಿದ್ದರು.

Social Plugin