ಬನಹಟ್ಟಿಯ ಮಂಗಳವಾರ ಪೇಟೆಯಲ್ಲಿ ಕಂಟೈನ್ಮೆಂಟ್ ವಲಯ ನಿರ್ಮಿಸಿರುವದು.
ರಬಕವಿ-ಬನಹಟ್ಟಿ: 9 ಜನರಿಗೆ ಕೊರೊನಾ
ಸ್ವಯಂ ಅರ್ಧ ಲಾಕ್‍ಡೌನ್ ಹಿಂಪಡೆತ: ಸ್ಪಂದಿಸದ ಜನತೆ
ರಬಕವಿ-ಬನಹಟ್ಟಿ,ಜು29: ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಬುಧವಾರ ಮತ್ತೇ 9 ಜನರಿಗೆ ಕೊರೊನಾ ವೈರಸ್ ಒಕ್ಕರಿಸಿದೆ. ಪ್ರಾಥಮಿಕ ಸಂಪರ್ಕ ಹೊಂದಿದವರೇ ಹೆಚ್ಚಾಗಿ ಸೋಂಕಿತರಾಗಿದ್ದಾರೆ.
ರಬಕವಿ-ಬನಹಟ್ಟಿ ಸಮುದಾಯ ಆಸ್ಪತ್ರೆಯಲ್ಲಿ ರ್ಯಾಪಿಡ್ ಪರೀಕ್ಷೆ ಸಂದರ್ಭ ಬನಹಟ್ಟಿ ನೀರಿನ ಟಾಕಿ ಹತ್ತಿರದ 54 ವರ್ಷದ, 48 ವರ್ಷದ ಹಾಗು 21 ವರ್ಷದ ವ್ಯಕ್ತಿಗೆ ಪಾಜಿಟಿವ್ ಬಂದಿದ್ದು, ಕರೋಳಿ ಗಲ್ಲಿಯ 62 ವರ್ಷದ ವ್ಯಕ್ತಿ ಹಾಗು ರಬಕವಿಯ ಬಸವ ನಗರದ 53 ವರ್ಷದ ವ್ಯಕ್ತಿಗೆ ಕೊರೊನಾ ಒಕ್ಕರಿಸಿದೆ. ಇನ್ನೂಳಿದ ನಾಲ್ವರಿಗೆ ಸ್ವ್ಯಾಬ್ ಮೂಲಕ ಸೋಂಕು ದೃಢಪಟ್ಟ ವರದಿಯಾಗಿದೆ.
ಸ್ಪಂದಿಸದ ಜನತೆ: ಸರ್ಕಾರದ ಆದೇಶದಂತೆ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಅಧಿಕೃತ ಲಾಕ್‍ಡೌನ್‍ಗೆ ಪೂರಕವಾಗಿ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿರುವ ಕೊರೊನಾ ವೈರಸ್ ಕಾಟಕ್ಕೆ ಮಧ್ಯಾಹ್ನ 2 ಗಂಟೆವರೆಗೆ ಸ್ವಯಂಪ್ರೇರಿತ ಲಾಕ್‍ಡೌನ್‍ಗೆ ಶರಣಾಗಿತ್ತು. ಕಳೆದ ವಾರದಿಂದ ಮಾಡಿಕೊಂಡ ಈ ನಿಯಮ ಸಾರ್ವಜನಿಕರು ಹಾಗು ವರ್ತಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಸದ್ಯದ ಪರಿಸ್ಥಿತಿಯಲ್ಲಿ ಪಟ್ಟಣದಾದ್ಯಂತ ಮತ್ತಷ್ಟು ಗಂಭೀರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಕೆಲ ಜನ ಸ್ಪಂದಿಸದ ಕಾರಣ ಸ್ವಯಂಪ್ರೇರಿತ ಲಾಕ್‍ಡೌನ್ ಹಿಂಪಡೆಯಲಾಗಿದೆ.
ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ನಾಗಾಲೋಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸ್ವಯಂಪ್ರೇರಿತ ಲಾಕ್‍ಡೌನ್ ಅನಿವಾರ್ಯವಾಗಿದ್ದು, ಯಾವ ರೀತಿ ಜನತೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕು.
ಹೆಚ್ಚಾಗುತ್ತಿರುವ ಕಂಟೈನ್ಮೆಂಟ್ ವಲಯ: ದಿನದಿಂದ ದಿನಕ್ಕೆ ರಬಕವಿ-ಬನಹಟ್ಟಿ ನಗರಾದ್ಯಂತ ಕಂಟೈನ್ಮೆಂಟ್ ವಲಯಗಳು ಹೆಚ್ಚಾಗುತ್ತಿರುವ ಹಿನ್ನಲೆ ಜನತೆ ತೀವ್ರ ಆತಂಕಪಡುವಲ್ಲಿ ಕಾರಣವಾಗಿದೆ.
ವೈದ್ಯರ ಸೇವೆ ಸ್ಥಗಿತ: ಸ್ಥಳೀಯ ಬಹುತೇಕ ವೈದ್ಯರು ಸ್ವಯಂಪ್ರೇರಿತವಾಗಿ ತಮ್ಮ ಸೇವೆ ಸ್ಥಗಿತಗೊಳಿಸಿದ್ದರ ಹಿನ್ನಲೆ ರೋಗಿಗಳು ಪರದಾಡುವಂತಾಗಿದೆ.

Social Plugin