ಬನಹಟ್ಟಿಯ ಶಾರದಾ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಶ್ರೀರಾಮಸೇನೆ ಬಾಗಲಕೋಟೆ ಜಿಲ್ಲಾ ಅಧ್ಯಕ್ಷ ಆನಂದ ಜಂಬಗಿಮಠ...
ಜು. 5 ರಿಂದ ಶ್ರೀ ಗುರುದೇವದತ್ತ ಕೋಟಿ ಜಪಯಜ್ಞ
ರಬಕವಿ-ಬನಹಟ್ಟಿ,ಜು3: ಶ್ರೀರಾಮಸೇನೆ ವತಿಯಿಂದ ಕೋವಿಡ್-19 ನಿಗ್ರಹ, ಸಮಸ್ತ ಹಿಂದೂಗಳ ಕಲ್ಯಾಣಕ್ಕೆ ಹಾಗೂ ಚಿಕ್ಕಮಂಗಳೂರಿನ  ಚಂದ್ರದ್ರೋಣ ಪರ್ವತದಲ್ಲಿಯ ದತ್ತಪೀಠ ಮುಕ್ತಿಗಾಗಿ  ಶ್ರೀ ಗುರುದೇವದತ್ತ ನಾಮದ ಒಂದು ಕೋಟಿ ಜಪಯಜ್ಞ ನಡೆಸಲು ನಿಶ್ಚಯಿಸಲಾಗಿದೆ ಎಂದು ಶ್ರೀರಾಮ ಸೇನೆ ರಾಜ್ಯ ಉಪಾಧ್ಯಕ್ಷ ಬಸವರಾಜ ಗಾಯಕವಾಡ ಹೇಳಿದರು. 
ನಗರದ ಶಾರದಾ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರಲ್ಲಿ ರಾಜ್ಯದ ಸಾವಿರಾರು ಶ್ರೀರಾಮಸೇನೆ ಕಾರ್ಯಕರ್ತರು ತಮ್ಮ ಮನೆಯಲ್ಲಿಯೇ ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮಸೇನೆ ಬಾಗಲಕೋಟೆ ಜಿಲ್ಲಾ ಅಧ್ಯಕ್ಷ ಆನಂದ ಜಂಬಗಿಮಠ, ಇದೇ ಜು. 5 ರವಿವಾರ ಗುರುಪೂರ್ಣಿಮೆಯಂದು ಕೋಟಿ ಜಪಯಜ್ಞ ರಾಜ್ಯಾದ್ಯಂತ ಪ್ರಾರಂಭವಾಗಲಿದ್ದು, ರಾಜ್ಯದಲ್ಲಿ 70 ರಿಂದ 80 ಸಾವಿರ ಕಾರ್ಯಕರ್ತರು ಹಾಗೂ ಜಿಲ್ಲೆಯಲ್ಲಿ 1500ಕ್ಕೂ ಹೆಚ್ಚು ಶ್ರೀರಾಮ ಸೇನೆ ಕಾರ್ಯಕರ್ತರು ಈ ಕೋಟಿ ಜಪಯಜ್ಞ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರವಿವಾರ ಲಾಕಡೌನ ನಿಂದಾಗಿ ಕಾರ್ಯಕರ್ತರು ತಮ್ಮ ತಮ್ಮ ಮನೆಯಲ್ಲಿಯೇ ಜಪಯಜ್ಞ ನಡೆಸಲಿದ್ದಾರೆ. ಲೋಕ ಕಲ್ಯಾಣಕ್ಕಾಗಿ ದತ್ತಪೀಠ ಅತಿಕ್ರಮಣ ಶೀಘ್ರ ಮುಕ್ತಿಗಾಗಿ ಶ್ರೀ ಗುರುದೇವ ದತ್ತ ತಾರಕ ಮಂತ್ರವನ್ನು ದತ್ತ ಭಕ್ತರ ಮೂಲಕ ರಾಜ್ಯಾದ್ಯಂತ ಒಂದು ಕೋಟಿ ಜಪದ ಅನುಷ್ಠಾನ ಹಮ್ಮಿಕೊಳ್ಳಲಾಗಿದೆ ಎಂದರು. 
ಈ ಸಂದರ್ಭದಲ್ಲಿ ರಬಕವಿ-ಬನಹಟ್ಟಿ ತಾಲ್ಲೂಕು ಶ್ರೀರಾಮ ಸೇನೆ ಅಧ್ಯಕ್ಷ ಪ್ರದೀಪ ದೇಶಪಾಂಡೆ ಇದ್ದರು.

- ನಿಮ್ಮ ಜಾಹೀರಾತುಗಳಿಗಾಗಿ ಸಂಪರ್ಕಿಸಿ +91 9902523698