ಬನಹಟ್ಟಿಯ ಎಸ್‍ಆರ್‍ಎ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಕ್ಕಿ, ಬೇಳೆ, ಹಾಲಿನ ಪೌಡರ ವಿತರಣೆ ಮಾಡಲಾಯಿತು.
ಶಾಲಾ ವಿದ್ಯಾರ್ಥಿಗಳಿಗೆ ಅಕ್ಕಿ ಬೇಳೆ ವಿತರಣೆ
ರಬಕವಿ-ಬನಹಟ್ಟಿ,ಜು28: ಕೋವಿಡ್-19 ನಿಂದಾಗಿ ಶಾಲೆಗಳು ಪ್ರಾರಂಭವಾಗದ ಹಿನ್ನಲೆಯಲ್ಲಿ ಸರಕಾರ ಕೊಡಮಾಡುವ ಅಕ್ಕಿ, ಬೇಳೆ ಮತ್ತು ಹಾಲಿನ ಪುಡಿಯನ್ನು ಸ್ಥಳೀಯ ಎಸ್‍ಆರ್‍ಎ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಉಪ ಪ್ರಾಚಾರ್ಯ ಎಂ.ಎಂ. ಬೊಂಬರಡಿ ಪತ್ರಿಕೆಯ ಜೊತೆಗೆ ಮಾತನಾಡಿ, ಶಾಲೆಯ 6 ರಿಂದ 10 ತರಗತಿಯವರೆಗಿನ ಅನುದಾನಿತ ವಿದ್ಯಾರ್ಥಿಗಳಿಗೆ ಅಕ್ಕಿ, ಬೇಳೆ ಮತ್ತು ಹಾಲಿನ ಪುಡಿಯನ್ನು ವಿತರಣೆ ಮಾಡಲಾಗುತ್ತಿದೆ. ಒಬ್ಬ ವಿದ್ಯಾರ್ಥಿಗೆ 5 ವರೆ ಕೆಜಿ ಅಕ್ಕಿ, 1ವರೆ ಕೆಜಿ ಬೇಳೆ, ಅರ್ದ ಪಾಕೀಟ್ ಹಾಲಿನ ಪೌಡರ ವಿತರಣೆ ಮಾಡಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಲಣದಲ್ಲಿ ಶಿಕ್ಷಕರ ಸಹಾಯದಿಂದ ಮಾಹಿತಿಯನ್ನು ನೀಡಲಾಗಿದೆ. ಅಕ್ಕಿ ಮತ್ತು ಬೇಳೆಯನ್ನು ವಿತರಣೆ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮತ್ತು ಮುಖಕ್ಕೆ ಮಾಸ್ಕ್ ಹಾಕುವಂತೆ ತಿಳಿಸಲಾಗಿದೆ ಎಂದು ಎಂ.ಎಂ. ಹೊಂಬರಡಿ ತಿಳಿಸಿದರು.
ಈ ಸಂದರ್ಭದಲ್ಲಿ ಆರ್. ಡಿ. ಪಾಠಕ, ಬಿ. ಎಸ್. ಬಳ್ಳೂರ, ಬಿ. ಜೆ. ಜೋರಾಪೂರ, ಎಸ್. ಜಿ. ಕಲಕಂಬ, ಎಂ. ಎಸ್. ದೂಪದಾಳ, ಎಂ. ಬಿ. ಶೆಟ್ಟಿ ಸೇರಿದಂತೆ ಅನೇಕರು ಇದ್ದರು.

Social Plugin