ಸಾತ್ವಿಕ ಹಾಗು ವೈಜ್ಞಾನಿಕ ಆಹಾರ ಸೇವಿಸಿ
ರಬಕವಿ-ಬನಹಟ್ಟಿ,ಜೂ10: ಕೊರೊನಾ ವೈರಸ್ ಸದ್ಯ ಜಗತ್ತಿನಾದ್ಯಾಂತ ಸಾಂಕ್ರಾಮಿಕ ರೋಗವಾಗಿ ಸಾವಿರಾರು ಕೋಟಿ ಜನರನ್ನು ಕಾಡುತ್ತಿದೆ. ಈ ರೋಗದ ಮಧ್ಯ ಆಯಾ ವೃತ್ತಿ ಸೇವೆ ಅನಿವಾರ್ಯವಾಗಿದ್ದು, ಸಾತ್ವಿಕ ಹಾಗು ವೈಜ್ಞಾನಿಕ ಆಹಾರ ಸೇವನೆಯಿಂದ ರೋಗ ದೂರವಿಡಲು ಸಾಧ್ಯವೆಂದು ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.
ಬುಧವಾರ ಸ್ಥಳಿಯ ವಕೀಲರ ಭವನದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರದಷ್ಟೇ ಮಹತ್ವ ಸಾತ್ವಿಕ ಆಹಾರದ ಬಳಕೆಯಾಗಿದೆ. ಇದೇ ಕಾರಣದಿಂದ ಭಾರತಾಂಬೆಯಲ್ಲಿ ಕೊರೊನಾ ವೈರಸ್‍ಗಾಗಿ ಸಾವಿನ ಪ್ರಮಾಣ ಕಡಿಮೆಯಿದ್ದು, ರೋಗ ನಿರೋಧಕ ಶಕ್ತಿಯನ್ನು ಸಸ್ಯಾಹಾರಿಗಳಾದ ನಾವೆಲ್ಲ ಹೆಚ್ಚಿನಮಟ್ಟದಲ್ಲಿ ಪಡೆದಿದ್ದೇವೆ. ವಿದೇಶದಲ್ಲಿ ಮಾಂಸಾಹಾರಿಗಳಿಂದಾಗಿ ಸಾವಿನ ಸಂಖ್ಯೆ ಗಣನೀಯವಾಗಿ ಏರುತ್ತಿದೆ ಎಂದರು.
ವೇದಿಕೆ ಮೇಲೆ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಪುಟಾಣಿ, ಈಶ್ವರಚಂದ್ರ ಭೂತಿ, ಸಿ.ಎನ್. ಸುತಾರ, ಬಸವರಾಜ ದಲಾಲ ಇದ್ದರು.
ಎಸ್.ವಿ. ಸತ್ತಿಕರ, ಜಿ.ಡಿ. ಪಾಟೀಲ, ಎಸ್.ಎ. ಪಾಟೀಲ, ಆರ್.ಎ. ಹೂಗಾರ, ಮುಕುಂದ ಕೋಪರ್ಡೆ, ಪ್ರಸನ್ನ ಬಾಣಕಾರ, ರವಿ ಸಂಪಗಾಂವಿ, ದಾನಪ್ಪ ಶೆಟ್ಟರ ಸೇರಿದಂತೆ ಅನೇಕರಿದ್ದರು.


- FOR ADVERTISEMENT CONTACT -
               9902523698