ಬನಹಟ್ಟಿಯಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಾಯಿತು.
ಹುತಾತ್ಮ ಯೋಧರಿಗೆ ನಮನ
ರಬಕವಿ-ಬನಹಟ್ಟಿ,ಜೂ19: ಇಂಡೋ-ಚೀನಾ ಸಂಘರ್ಷದಲ್ಲಿ ಹುತಾತ್ಮರಾದ ವೀರ ಸೇನಾನಿಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಬಿಜೆಪಿ ಯುವ ಮುಖಂಡ ವಿದ್ಯಾಧರ ಸವದಿ ಸಂತಾಪ ಸೂಚಿಸಿದರು.
ಬನಹಟ್ಟಿ ಬಸ್ ನಿಲ್ದಾಣ ಬಳಿ ಹುತಾತ್ಮ ಯೋಧರಿಗೆ ನಮನ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಮಾತನಾಡಿದ ಅವರು, ದೇಶದ ರಕ್ಷಣೆಗಾಗಿ ತಮ್ಮ ಅಮೂಲ್ಯ ಜೀವವನ್ನು ಸಮರ್ಪಣೆ ಮಾಡಿದ ಯೋಧರಿಗೆ ದೇಶದ ನಾವೆಲ್ಲರೂ ನಮನ  ಸಲ್ಲಿಸಬೇಕು, ಯೋಧರ ಗುಣಗಾನ ಮಾಡಬೇಕೆ ಹೊರತು ಹುತಾತ್ಮ ಯೋಧರ ಅಂತ್ಯಕ್ರಿಯೆಯ ವೇಳೆ ಸೆಲ್ಪೀ ತೆಗೆದುಕೊಳ್ಳಲು ಮುಂದಾಗಬಾರದು, ವೀರ  ಮರಣವನ್ನಪ್ಪಿದ ಯೋಧರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ನೀಡಲೆಂದರು.
ರಾಜು ಬಾಣಕಾರ, ಜಿಪಂ ಸದಸ್ಯ ಪರಶುರಾಮ ಬಸವ್ವಗೋಳ, ಶ್ರೀಶೈಲ ಬೀಳಗಿ, ಭೀಮಶಿ ಹಂದಿಗುಂದ, ಮಿಲನ್ ಚುರಮುರಿ, ಕುಮಾರ ಕದಂ, ಪ್ರವೀಣ ಕೋಲಾರ, ವಿಶ್ವನಾಥ ಮಿಳ್ಳಿ, ಪ್ರಕಾಶ ಬಂದಿ, ಅಶೋಕ ಹಳ್ಳೂರ, ಮಹಾಲಿಂಗ ಅವರಾದಿ, ಆನಂದ ಬಾಡಗಂಡಿ, ಶಂಕರ ಅಂಗಡಿ, ಮನೋಜ ಬಾಗೇವಾಡಿ, ಮುಂತಾದವರಿದ್ದರು. 

       - FOR ADVERTISEMENT CONTACT -
                        - 9902523698 -