ರಬಕವಿ-ಬನಹಟ್ಟಿ ತಹಶೀಲ್ದಾರ್ ಪ್ರಶಾಂತ ಚನಗೊಂಡರಿಗೆ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಸದಸ್ಯರು ದುರ್ಮರಣ ಹೊಂದಿದೆ ಮತ್ತು ಆತ್ಮಹತ್ಯೆಗೆ ಒಳಗಾದ ನೇಕಾರರಿಗೆ ರೂ.10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ನೇಕಾರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ.
ರಬಕವಿ-ಬನಹಟ್ಟಿ,ಜೂ19: ಕೋವಿಡ್-19 ಸಂದರ್ಭದಲ್ಲಿ ನೇಕಾರಿಕೆ ಉದ್ಯೋಗವು ನಿಂತು ಹೋದ ಸಂದರ್ಭದಲ್ಲಿ ಬೇರೆ ಉದ್ಯೋಗದಲ್ಲಿ ನಿರತರಾಗಿದ್ದ ನೇಕಾರ ಮಲ್ಲಿಕಾರ್ಜುನ ಮೋಪಗಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮೃತ ನೇಕಾರ ಕುಟುಂಬಕ್ಕೆ ರೂ.10 ಲಕ್ಷ ಪರಿಹಾರ ನೀಡಬೇಕು. ರಾಜ್ಯದಲ್ಲಿ ಆದಷ್ಟು ಬೇಗನೆ ನೇಕಾರ ಅಭಿವೃದ್ಧಿ ಯೋಜನೆ ಸ್ಥಾಪನೆಯಾಗಬೇಕು ಎಂದ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು.
ಅವರು ಶುಕ್ರವಾರ ನೇಕಾರರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ತಹಶೀಲ್ದಾರ್ ಪ್ರಶಾಂತ ಚನಗೊಂಡರಿಗೆ ಮನವಿ ಸಲ್ಲಿಸಿ ಪತ್ರಿಕೆಯ ಜೊತೆಗೆ ಮಾತನಾಡಿದರು.
ವೃತ್ತಿಪರ ನೇಕಾರರನ್ನು ಕಾರ್ಮಿಕರೆಂದು ಪರಿಗಣಿಸಿ ಕಟ್ಟಡ ಕಾರ್ಮಿಕರಿಗಿರುವ ಸೌಲಭ್ಯಗಳನ್ನು ಒದಗಿಸಬೇಕು, ನೇಕಾರರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಬೇಕು, 55 ವರ್ಷ ಮೇಲ್ಪಟ ನೇಕಾರರಿಗೆ ರೂ. 5000 ಮಾಸಾಶನ ನೀಡಬೇಕು, ನೇಕಾರ ಸಮ್ಮಾನ ಯೋಜನೆಯ ಅಡಿಯಲ್ಲಿ ವಿದ್ಯತ್ ಚಾಲಿನ ಮಗ್ಗಗಳ ನೇಕಾರರನ್ನು ಒಳಪಡಿಸಿ ವರ್ಷಕ್ಕೆ ರೂ.10000 ಜಾರಿ ಮಾಡಬೇಕು, ನೇಕಾರರಿಗೂ ಕೂಡಾ ಶೂನ್ಯ ಬಡ್ಡಿ ದರದಲ್ಲಿ ದುಡಿಯುವ ಬಂಡವಾಳ ದೊರೆಯುವ ವ್ಯವಸ್ಥೆ ಮಾಡಿಕೊಡಬೇಕು ಎಂದು ಶಿವಲಿಂಗ ಟಿರಕಿ ತಿಳಿಸಿದರು.
ಮನವಿ ಸ್ವೀಕರಿಸಿ ಪ್ರಶಾಂತ ಚನಗೊಂಡ ಮಾತನಾಡಿ, ಮನವಿಯನ್ನು ಮೇಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಆದಷ್ಟು ಬೇಗನೆ ತಲುಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಚನ್ನಪ್ಪ ಹುಣಶ್ಯಾಳ, ಮಲ್ಲಪ್ಪ ಗುಳೇದಗುಡ್ಡ ಮತ್ತು ರಾಜಶೇಖರ ಬೀಳಗಿ ಸೇರಿದಂತೆ ಅನೇಕರು ಇದ್ದರು.
- FOR ADVERTISEMENT CONTACT -
- 9902523698 -

Social Plugin