ಹುತಾತ್ಮರಾದ ವೀರ ಸೇನಾನಿಗಳಿಗೆ ನಮನ....
ತೇರದಾಳ ,ಜೂ19: ಇಂಡೋ-ಚೀನಾ ಸಂಘರ್ಷದಲ್ಲಿ ಹುತಾತ್ಮರಾದ ವೀರ ಸೇನಾನಿಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸಂತಾಪ ಸೂಚಿಸಿದರು.
ತೇರದಾಳದ ಕನ್ನಡ ಗಂಡುಮಕ್ಕಳ ಶಾಲೆಯ ಬಳಿ ಹುತಾತ್ಮ ಯೋಧರಿಗೆ ನಮನ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಮಾತನಾಡಿದ ವಕೀಲರಾದ ಶ್ಯಾಮ್ ಸತ್ತಿಕರ್ ಅವರು ಭಾರತೀಯ ಸೈನಿಕರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೂ ಅವುಗಳನ್ನ ಬಳಸದೆ ವೀರ ಮರಣವನ್ನು ಹೊಂದಿದ್ದಾರೆ. ಯಾಕೆಂದರೆ1996 ರ ಒಪ್ಪಂದದ ಮೇರೆಗೆ ಗಡಿಪ್ರದೇಶಗಳಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸಬಾರದೆಂಬ ನಿಯಮ ವಿರುವುದರಿಂದ ಶಸ್ತ್ರಾಸ್ತ್ರಗಳನ್ನು ಬಳಸಿರುವದಿಲ್ಲ , ದೇಶದ ರಕ್ಷಣೆಗಾಗಿ ತಮ್ಮ ಅಮೂಲ್ಯ ಜೀವವನ್ನು ಸಮರ್ಪಣೆ ಮಾಡಿದ ಯೋಧರಿಗೆ ದೇಶದ ನಾವೆಲ್ಲರೂ ನಮನ ಸಲ್ಲಿಸಬೇಕು, ಯೋಧರ ಗುಣಗಾನ ಮಾಡಬೇಕು. ವೀರ ಮರಣವನ್ನಪ್ಪಿದ ಯೋಧರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ನೀಡಲೆಂದರು.
ರೇವಣೇಶ ಹಿರೇಮಠ, ರಾಮಣ್ಣ ಹಿಡಕಲ್, ರಮೇಶ ಧರೆನ್ನವರ್, ಶ್ಯಾಮ್ ಸತ್ತಿಕರ್, ಶಂಕರ ಕುಂಬಾರ, ಸಂತೋಷ ಜಮಖಂಡಿ, ಸಚಿನ್ ಕೊಡತೆ , ಮಹಾವೀರ ಕೋಕಟನೂರ, ವೀರಾಜ ಬಂಕಾಪುರ್, ವರ್ಧಮಾನ್ ಕಡಹಟ್ಟಿ, ಶೀತಲ್ ಗುಳನ್ನವರ,ಸದಾಶಿವ ಹೊಸಮನಿ, ಮುಂತಾದವರಿದ್ದರು.
-FOR ADVERTISEMENT CONTACT -
- 9902523698 -

Social Plugin