ಬನಹಟ್ಟಿಯ ನ್ಯಾಯಾಲಯದ ಆವರಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶೆ ರೇಶ್ಮಾ ಗೋಣಿ ಸಸಿ ನೆಟ್ಟರು.
ಅರಣ್ಯ ರಕ್ಷಣೆ ದೇಶ ಸೇವೆ
ರಬಕವಿ-ಬನಹಟ್ಟಿ,ಜೂ6: ಅರಣ್ಯಗಳನ್ನು ರಕ್ಷಣೆ ಮಾಡುವುದರ ಜೊತೆಗೆ ಗಿಡ ಮರಗಳನ್ನು ರಕ್ಷಿಸಿ ಪೋಷಣೆ ಮಾಡುವುದು ಕೂಡಾ ದೇಶ ಸೇವೆಯಾಗಿದೆ ಎಂದು ಸ್ಥಳೀಯ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶೆ ರೇಶ್ಮಾ ಗೋಣಿ ತಿಳಿಸಿದರು.
ಅವರು ಶುಕ್ರವಾರ ಸ್ಥಳೀಯ ನ್ಯಾಯಾಲಯದ ಆವರಣದಲ್ಲಿ ಜಮಖಂಡಿ ಅರಣ್ಯ ಇಲಾಖೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತವಾಗಿ ಸಸಿ ನೆಟ್ಟು ಪತ್ರಿಕೆಯ ಜೊತೆಗೆ ಮಾತನಾಡಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶ ಮಹೇಶ ಚಂದ್ರಕಾಂತ ಮಾತನಾಡಿ, ಸಸಿಗಳನ್ನು ನೆಟ್ಟು ಅವುಗಳನ್ನು ರಕ್ಷಣೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ. ಉತ್ತಮವಾದ ಅರಣ್ಯ ಸಂಪತ್ತಿನಿಂದ ಉತ್ತಮ ಪರಿಸರವನ್ನು ನಿರ್ಮಾಣ ಮಾಡುವುದರ ಜೊತೆಗೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಪುಟಾಣಿ, ಜಮಖಂಡಿ ಸಾಮಾಜಿಕ ಅರಣ್ಯ ವಲಯಾಧಿಕಾರಿ ಲಿಂಗೋಜಿರಾವ ಕುಲಕರ್ಣಿ, ಅರಣ್ಯಾಧಿಕಾರಿಗಳಾದ ಮಲ್ಲು ನಾವಿ, ರಾಜು ಪರೀಟ, ವಿಜಯ ಹೂಗಾರ, ಕೆ.ಡಿ. ತುಬಚಿ, ವಿ.ಟಿ. ನಿಂಗಸಾನಿ, ಶಶಿ ಮೋಪಗಾರ, ಶಿವಕುಮಾರ ಷಣ್ಮುಖ ಸೇರಿದಂತೆ ಅನೇಕರು ಇದ್ದರು.


- FOR  ADVERTISEMENT CONTACT -
                     9902523698