ಬನಹಟ್ಟಿಯಲ್ಲಿ ಮಾಹೇಶ್ವರಿ ಸಮಾಜದಿಂದ ಸಸಿ ನೆಟ್ಟ ಮಹಿಳೆಯರು.
ಹಸಿರುಕ್ರಾಂತಿಗೆ ಸಜ್ಜಾದ ಹಸನ್ಮುಖಿಯರು
ರಬಕವಿ-ಬನಹಟ್ಟಿ,ಜೂ6: ನಗರದಲ್ಲಿ ರಸ್ತೆ ಅಗಲೀಕರಣ ನೆಪದಲ್ಲಿ ಹಸಿರು ಸಂಪತ್ತನ್ನು ಅಳಿಸು ಹಾಕುವಲ್ಲಿ ಲೋಕೋಪಯೋಗಿ ಮುಂದಾಗುತ್ತಿದ್ದರೆ, ಇತ್ತ ಮಹಿಳೆಯರಿಂದ ಕೂಡಿದ `ಮಾಹೇಶ್ವರಿ ಸಮಾಜ’ ತೆರೆಮರೆಯಲ್ಲೇ ಹಸಿರು ಬೆಳೆದು ಬನಹಟ್ಟಿಗರ ಮನೆ-ಮನಸ್ಸನ್ನು ಹಸಿರಾಗಿಸುತ್ತಿದೆ.
ಹೌದು, ಈ ಸಮಾಜದ ಪ್ರತಿ ಮಹಿಳೆಯರು ಕುಡಚಿ-ಜಮಖಂಡಿ ರಾಜ್ಯ ಹೆದ್ದಾರಿಯ ಅಕ್ಕ-ಪಕ್ಕ ಜನರಿಗೆ ಆಸರೆಯಾಗಿದ್ದ ಹಲವಾರು ವರ್ಷಗಳ ಗಿಡ-ಮರಗಳು ಧರೆಗುರುಳಿದ್ದನ್ನು ನೋಡಿ ನೊಂದು ಸಸಿಗಳನ್ನು ನೆಡುವ ಮೂಲಕ ಇತರರಿಗೆ ಮಾದರಿಯಾಗುವಲ್ಲಿ ಕಾರಣವಾಗುತ್ತಿದ್ದಾರೆ.
ವಿಶ್ವ ಪರಿಸರ ದಿನಾಚರಣೆ ಸಲುವಾಗಿ ಕಾಟಾಚಾರಕ್ಕೆ ಸಸಿಗಳನ್ನು ನೆಟ್ಟು, ಮತ್ತೇ ಮುಂದಿನ ವರ್ಷವೇ ಸಸಿಯತ್ತ ಗಮನಹರಿಸದೆ, ನೆಟ್ಟ ಸಸಿಗಳನ್ನು ಮರಗಳನ್ನಾಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಎಲ್ಲರೂ ಮಾಡಬೇಕೆಂದು ಕರ್ನಾಟ-ಗೋವಾ ಮಹೇಶ್ವರಿ ಮಹಿಳಾ ಮಂಡಳ ಅಡಿಯಲ್ಲಿ ಬರುವ ಗ್ರಾಮೀಣ ವಿಕಾಸ ಹಾಗು ರಾಷ್ಟ್ರೀಯ ಸಮಸ್ಯಾ ನಿವಾರಣ ಸಮಿತಿ ಸಂಯೋಜಕರಾದ ಕಲಾವತಿ ಬ್ರಿಜ್‍ಮೋಹನ ಡಾಗಾ ಹೇಳಿದರು.
ಹಸಿರು ಪರಿಸರದಿಂದ ಸಾಕಷ್ಟು ರೋಗಗಳನ್ನು ತಡೆಯುವ ಮೂಲಕ ಉತ್ತಮ ಬದುಕು ಪ್ರತಿಯೊಬ್ಬರದಾಗುವದೆಂದು ಕರ್ನಾಟಕ-ಗೋವಾ ರಾಜ್ಯದ ಮಾಹೇಶ್ವರಿ ಸಮಾಜದ ಮಹಿಳಾ ಘಟಕದ ಉಪಾಧ್ಯಕ್ಷೆ ಉಮಾ ಭದ್ರಿನಾರಾಯಣ ಭಟ್ಟಡ ತಿಳಿಸಿದರು.
ಇದೇ ಸಂದರ್ಭ ಸ್ಥಾನಿಕ ಕಾರ್ಯದರ್ಶಿ ವನಿತಾ ಲಡ್ಡಾ, ಕಲ್ಪನಾ ಚಿಂಡಕ, ದೀಪಾ ಭಟ್ಟಡ, ಸುನಂದಾ ಡಾಗಾ ಸೇರಿದಂತೆ ಅನೇಕರಿದ್ದರು.
- FOR ADVERTISEMENT CONTACT -
9902523698

Social Plugin