ಸಣ್ಣ ಲೋಪವು ಆಗದಂತೆ ಪರೀಕ್ಷೆ -ಶಿಕ್ಷಣಾಧಿಕಾರಿ ನ್ಯಾಮಗೌಡ

ವರದಿ : ಕೆ.ಎಸ್.ರಂಗಸ್ವಾಮಿ 

ತೇರದಾಳ: ಕೊವಿಡ್19 ಕಾರಣದಿಂದ ಮುಂದುಡಲ್ಪಟ್ಟಿರುವ ಹತ್ತನೇ ತರಗತಿಯ ಪರೀಕ್ಷೆಗಳನ್ನು ಒತ್ತಡದ ನಡುವೆಯು ಸರಕಾರದ ಕಟ್ಟುನಿಟ್ಟಿನ ಆದೇಶಮೇರೆಗೆ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಯಾವುದೇ ರೀತಿಯ ತೊಂದರೆಯಾಗದ ಹಾಗೆ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿ ಇಟ್ಟುಕೊಂಡು ಪೂರ್ವತಯಾರಿಯೊಂದಿಗೆ ಆರೋಗ್ಯ ಇಲಾಖೆ ಹಾಗೂ ಪೋಲಿಸ ಇಲಾಖೆ, ಕಂದಾಯ ಇಲಾಖೆಯ ನೆರವಿನೊಂದಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಮ್. ನೇಮಗೌಡರವರು ತಿಳಿಸಿದರು. 

    ರಬಕವಿ ಬನಹಟ್ಟಿ ತಾಲೂಕಿನಲ್ಲಿ ಒಟ್ಟು 10 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. 

    ಕೇಂದ್ರದ ಹೆಸರು         ಒಟ್ಟುವಿದ್ಯಾರ್ಥಿಗಳು. ಹಾಜರು.ಗೈರು.

ಕೊಣ್ಣೂರ ಶಿಕ್ಷಣ ಸಂಸ್ಥೆ ಯಲ್ಲಟ್ಟಿ,  354     347    06                 

ಸರಕಾರಿ ಪ.ಪೂ.ಕಾಲೇಜ ಬನಹಟ್ಟಿ    300     292    08              

ಎಸ್.ಆರ್.ಎ.ಕಾಲೇಜ ಬನಹಟ್ಟಿ,   360     347    13                   

ಜ್ಞಾನೋದಯ ಶಿಕ್ಷಣ ಸಂಸ್ಥೆ ರಾಂಪೂರ  230     220    10           

ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ ರಾಂಪೂರ  357     351    06

ಎಮ್.ವ್ಹಿ.ಪಟ್ಟಣ ಗಲ್ರ್ಸ ಸ್ಕೂಲ ರಬಕವಿ     261     247    14

ಎಮ್.ವ್ಹಿ.ಪಟ್ಟಣ ಬಾಯ್ಸ 

ಜ್ಯೂನಿಯರ ಕಾಲೇಜ ರಬಕವಿ                   291     269    22

ಎಸ್.ಎಮ್.ಹೈಸ್ಕೂಲ ತೇರದಾಳ    321     307    14

ಶ್ರೀ ಪ್ರಭುಲಿಂಗೇಶ್ವರ ಹೈಸ್ಕೂಲ,ತೇರದಾಳ                                  287     276    11

ಶ್ರೀ ಸಿದ್ದೇಶ್ವರ ಶಿಕ್ಷಣ ತೇರದಾಳ                                                  320     296    24

ಹೀಗೆ ರಬಕವಿ ಬನಹಟ್ಟಿ ತಾಲೂಕಿನಲ್ಲಿ ಒಟ್ಟು ಹತ್ತು ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 3081 ವಿದ್ಯಾರ್ಥಿಗಳು ಹಾಜರಾಗಬೇಕಾಗಿತ್ತು ಅದರಲ್ಲಿ 2952 ವಿದ್ಯಾರ್ಥಿಗಳು ಹಾಜರಾಗಿದ್ದು 129 ಗೈರು ಉಳಿದಿದ್ದಾರೆ ಎಂದು ಶಿಕ್ಷಣಾಧಿಕಾರಿಗಳು ತಿಳಿಸಿದರು. ದೇಶದಲ್ಲಿ ಕೊವಿಡ್ ಕಾರಣದಿಂದ ಪರೀಕ್ಷೆಗಳನ್ನು ನಡೆಸಬೇಕೋ ಅಥವಾ ನಡೆಸಬಾರದೋ ಎನ್ನುವ ನಿರ್ಧಾರ ತಗೆದುಕೊಳ್ಳಲು ಪಾಲಕರ ಹಾಗೂ ಸರಕಾರದ ನಡುವೆ ಸಾಕಷ್ಟು ಬಾರಿ ವಿಚಾರ ವಿನಿಮಯ ನಡೆದುಹೋದವು ಅಲ್ಲದೆ ಹಲವು ಶಿಕ್ಷಣ ತಜ್ಞರ ಜೊತೆಗೆ ಚರ್ಚೆಗಳು ನಡೆದವು ನಂತರ ಸರಕಾರವು ಕೊನೆಗೆ ಪರೀಕ್ಷೆ ನಡೆಸಲೇಬೇಕು ಎನ್ನುವ ನಿರ್ಧಾರ ತೆಗೆದುಕೊಂಡಿತು. ಇದರಿಂದ ಈ ಪರೀಕ್ಷೆಯನ್ನು ಸವಾಲಾಗಿ ಸ್ವಿಕರಿಸಿದ ನಮ್ಮ ಹಿರಿಯ   ಅಧಿಕಾರಿಗಳು ಸತತವಾಗಿ ಮಿಟಿಂಗ ಮೇಲೆ ಮಿಟಿಂಗ ಕರೆದು ಪರೀಕ್ಷೆ ಕುರಿತು ಸಾಕಷ್ಟು ಜಾಗೃತೆ ವಹಿಸಲು ಸೂಕ್ತ ನಿರ್ದೇಶನಗಳನ್ನು ನೀಡಿ ಕಡ್ಡಾಯವಾಗಿ ಪಾಲಿಸಲು ತಿಳಿಸಿದರು. 


            ಈ ಕಾರಣದಿಂದ ಸಣ್ಣ ಲೋಪವು ಆಗದ ಹಾಗೆ ಪರೀಕ್ಷೆ ನಡೆಸಲು ತಿರ್ಮಾಣ ತೆಗೆದುಕೊಂಡ ನಾವು ಎಲ್ಲಾ ಕೇಂದ್ರಗಳಿಗೆ ಸಂಬಂಧಿಸಿದಂತೆ ಮುಂಚಿತವಾಗಿಯೇ ತಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಯವರೊಂದಿಗೆ ಶಿಕ್ಷಣ ಸಂಯೋಜಕರೊಂದಿಗೆ,ಶಿಕ್ಷಕರೊಂದಿಗೆ ಹಾಗೂ ಮುಖ್ಯವಾಗಿ ಆರೋಗ್ಯ ಇಲಾಖೆ,ಪೋಲಿಸ ಇಲಾಖೆಯವರ ಸಹಕಾರದೊಂದಿಗೆ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ಸಣ್ಣ ಲೋಪವು ಸಹ ಆಗದ ಹಾಗೆ ಸೂಕ್ತ ವ್ಯವಸ್ತೆಯನ್ನು ಮಾಡಲಾಗಿದೆ ಎಂದರು.ವಿದ್ಯಾರ್ಥಿಗಳು ಯಾವುದೇ ರೀತಿಯ ಆತಂಕವಿಲ್ಲದೆ ಪರೀಕ್ಷೆ ಬರೆಯಲು ತಿಳಿಸಿದ್ದಾರಲ್ಲದೆ. ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಪರಸ್ಪರ ಯಾರು ಕೈಕುಲುಕುವದನ್ನು ಮಾಡದೆ ದೂರದಿಂದಲೇ ಚರ್ಚಿಸಿ ನಿಮ್ಮ ಸ್ಥಳಗಳಿಗೆ ತೆರಳಬೇಕು.ಕಡ್ಡಾಯವಾಗಿ ಮಾಸ್ಕ ಧರಿಸಿರಬೇಕು.

ಪರೀಕ್ಷಾ ಸಮಯದಲ್ಲಿ ನಿಮ್ಮ ಲೇಖನಿ ಸಾಮಗ್ರಿಗಳನ್ನು ವಿನಿಮಯ ಮಾಡತಕ್ಕದ್ದಲ್ಲ ಎಂದು ಹೇಳಿದರಲ್ಲದೆ ಈ ಪರೀಕ್ಷೆ ಯಶಸ್ವಿಯಾಗಲೂ ಎಲ್ಲರೂ ಸಹಕಾರ ನೀಡಬೇಕೆಂದು ಈ ಮೂಲಕ ತಿಳಿಸಿದರು.

     - FOR ADVERTISEMENT CONTACT - 
                     - 9902523698 -