ತೇರದಾಳ ಪಟ್ಟಣದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಿದ್ದತೆಗೊಂಡ ಪರೀಕ್ಷಾ ಕೇಂದ್ರಗಳು.


ತೇರದಾಳ : ಮಾರ್ಚ್ ತಿಂಗಳಿನಲ್ಲಿ ನಡೆಯಬೇಕಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಲಾಕ್‍ಡೌನ್‍ದಿಂದಾಗಿ ಮುಂದೂಡಲ್ಪಟ್ಟಿದ್ದವು.  ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳ ಇಂದಿನಿಂದ ತೇರದಾಳ ಪಟ್ಟಣದಲ್ಲಿ ಮೂರು ಕೇಂದ್ರಗಳು ಸಿದ್ಧಗೊಂಡಿವೆ. ಶ್ರೀಸಿದ್ಧೇಶ್ವರ ಪ್ರೌಢಶಾಲೆ, ಎಸ್‍ಪಿ ಪ್ರೌಢಶಾಲೆ, ಗುರುಕುಲ ಶಿಕ್ಷಣ ಸಂಸ್ಥೆಯ ಎಸ್ ಎಮ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಎಲ್ಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಪರೀಕ್ಷಾ ಅಧೀಕ್ಷಕರಾದ ಎಮ್.ಬಿ.ಮಾಳೇದ ಹಾಗೂ ಡಿ.ಬಿ.ಪಾಟೀಲ ತಿಳಿಸಿದ್ದಾರೆ.

   ಕೊರೊನಾ ವೈರಸ್ ಮುಂಜಾಗ್ರತೆ ಕ್ರಮವಾಗಿ ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಜರ್ ಸಿಂಪರಣೆ ಮಾಡಲಾಗಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಸಲುವಾಗಿ ಸುಣ್ಣದಿಂದ ಚೌಕ್ -ಬಾಕ್ಸ ಗಳನ್ನು  ಹಾಕಲಾಗಿದೆ. ಅದೇ ರೀತಿ ಪರೀಕ್ಷಾ ಕೊಠಡಿಗಳಲ್ಲಿ ಎಲ್ಲ ಪರೀಕ್ಷಾರ್ಥಿಗಳು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಬೆಳಿಗ್ಗೆ 8-30ರ ಸುಮಾರಿಗೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಆವರಣದಲ್ಲಿ ಹಾಜರಿರುವಂತೆ ಸರಕಾರದ ಆದೇಶವಿರುತ್ತದೆ. ಕಾರಣ ವೈದ್ಯಾಧಿಕಾರಿಗಳು ವಿದ್ಯಾರ್ಥಿಗಳ ವೈದ್ಯಕೀಯ ತಪಾಸಣೆ ಮಾಡಿ ಪರೀಕ್ಷಾ ಕೊಠಡಿಯೊಳಗಡೆ ಬಿಡಲಿದ್ದಾರೆ. ಮತ್ತು ನೆಗಡಿ, ಕೆಮ್ಮು ಇರುವಂತ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿಗಳ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. 

  ವೈದ್ಯಾಧಿಕಾರಿಗಳು ಹಾಗೂ ಕೊಠಡಿ ಮೇಲ್ವಿಚಾರಕರು ಬೆಳಿಗ್ಗೆ 7-30ರ ಹೊತ್ತಿಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರುತ್ತಾರೆ. ವಿದ್ಯಾರ್ಥಿಗಳು ಪರೀಕ್ಷೆ ಭಯ ಬಿಟ್ಟು ಧೈರ್ಯದಿಂದ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ. ಸ್ಯಾನಿಟೈಜರ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಕೊಟ್ಟಿರುವ ಮಾಸ್ಕ ಗಳನ್ನು  ಧರಿಸಿರಬೇಕು. ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲಿ 16ರಿಂದ 20 ವಿದ್ಯಾರ್ಥಿಗಳಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ತುಂಬಾ ಬೆಳಕಿನ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಹಾಗೂ ಗಾಳಿಯಾಡಲು ಫ್ಯಾನ್‍ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಸೂಕ್ತ ಬಂದೂದಸ್ತ್ ಸಲುವಾಗಿ ಪೋಲಿಸ್ ಸಿಬ್ಬಂದಿಯವರು ಇರುತ್ತಾರೆ ಮತ್ತು ಆರೋಗ್ಯ ತಪಾಸಣೆ ಮಾಡಲು ವೈದ್ಯಾಧಿಕಾರಿಗಳು ಸಹ ಇರುವರು ಎಂದು ಪರೀಕ್ಷಾ ಮುಖ್ಯಅಧಿಕ್ಷಕರು ತಿಳಿಸಿದ್ದಾರೆ.  

  ಈ ಸಂದರ್ಭದಲ್ಲಿ ಡಿ.ಎ.ಉಗಾರ, ಬಿ.ಸಿ.ಮುಕರಿ, ಪ್ರಭು ಜೈನರ, ಆಯ್.ಎಮ್ ಚನಾಳ, ಡಿ.ಎಮ್.ಮಾಹಜನ್, ಸಿದ್ದು ಪುರಾಣಿಕ, ವ್ಹಿ.ಎಸ್. ಉಮರಾಣಿ ಸೇರಿದಂತೆ ಶಾಲಾ ಸಿಬ್ಬಂದಿಯವರು ಇದ್ದರು.