ರಬಕವಿ-ಬನಹಟ್ಟಿ,ಜೂ25: ಜೂನ್ 19 ರಂದು ಮಹಿಳೆಯೊಬ್ಬರಲ್ಲಿ ಪತ್ತೆಯಾಗಿ, ಇಂದು ಕುಟುಂಬದ ಐವರಲ್ಲಿ ಸೋಂಕು ಸ್ಭೆರಿದಂತೆ ಒಟ್ಟು 7 ಜನರಿಗೆ ಕೊರೊನಾ ವೈರಸ್ ತಗುಲಿದೆ. ಇದರಿಂದ ಬನಹಟ್ಟಿಯ 14 ಹಾಗು ನಾವಲಗಿ ಗ್ರಾಮದ 11 ಜನ ಸೇರಿದಂತೆ 25 ಕ್ಕೂ ಅಧಿಕ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.
ಇವೆಲ್ಲದರ ಮಧ್ಯ ಒಂದೇ ಕುಟುಂಬದ ಎಲ್ಲ ಆರೂ ಜನರಿಗೆ ಕೊರೊನಾ ತಗುಲಿದ್ದು, ಈ ಹಿಂದೆ ದಿ.14 ರಂದು ಸಂಬಂಧಿಕರ ಮದುವೆಗೂ ಹೋಗಿದ್ದ ಕಾರಣ ಮದುವೆ ಮನೆಯವರನ್ನೂ ಕ್ವಾರಂಟೈನ್ ಮಾಡಲಾಗಿದೆ.
ಅಲ್ಲದೆ ನಾವಲಗಿ ಹಾಗು ಬನಹಟ್ಟಿಯಲ್ಲಿ ಗೊಬ್ಬರ ಹಾಗು ಬೀಜ ವ್ಯಾಪಾರ ಮಾಡುತ್ತಿದ್ದ ಹಿನ್ನಲೆ ಸಂಪರ್ಕಿತರ ಮಾಹಿತಿ ಕಲೆ ಹಾಕುವಲ್ಲಿ ಅಧಿಕಾರಿಗಳು ಸುಸ್ತಾಗಿದ್ದು, ಕೆಲವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಿದ್ದರೆ, ಇನ್ನೂ ಕೆಲವರ ಪಟ್ಟಿ ತಯಾರಿಸುತ್ತಿದ್ದಾರೆ.
ಜೂನ್ 11 ರಂದು ಮಹಾರಾಷ್ಟ್ರದ ಸೊಲ್ಲಾಪುರದಿಂದ ಬನಹಟ್ಟಿಗೆ ಆಗಮಿಸಿದ್ದ ಮಹಿಳೆಯ ಕಾಲು ಶಸ್ತ್ರಕ್ರಿಯೆಗೆ ಒಳಗಾಗಿದ್ದ ಕಾರಣ ಮಾನವೀಯತೆ ಅನುಸಾರ ಅಧಿಕಾರಿಗಳು ಹೋಂ ಕ್ವಾರಂಟೈನ್ ಮಾಡಿದ್ದರು. ಮನೆಯವರಿಗೆ ಮಾಹಿತಿ ಒದಗಿಸಿ, ಯಾರೂ ಮನೆಯಿಂದ ಹೊರಬರಬಾರದೆಂದು ಆದೇಶಿಸಿದಾಗ್ಯೂ, ಇದನ್ನು ಪಾಲಿಸದೆ ಕುಟುಂಬಸ್ಥರ ನಿರ್ಲಕ್ಷ್ಯ ಹೀಗಾಗಲು ಕಾರಣವಾಗಿದೆ. ಇದಕ್ಕೆ ಸಂಬಂಧ ಮತ್ತಷ್ಟು ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡುವ ಲಕ್ಷಣಗಳಿವೆ.
7 ಜನರಿಗೆ ವೈರಸ್: ಗುರುವಾರದ ಬುಲೆಟಿನ್‍ನಲ್ಲಿ ಒಂದೇ ಕುಟುಂಬದ ಐವರು ಸೇರಿದಂತೆ ಮಹಾರಾಷ್ಟ್ರದಿಂದ ಬಂದ ಇಬ್ಬರು ಮಹಿಳೆಯರಿಗೆ ಕೊರೊನಾ ತಗುಲಿರುವ ಮಾಹಿತಿಯಿದೆ.


       - FOR ADVERTISEMENT CONTACT -
                         - 9902523698 -