ರಬಕವಿ-ಬನಹಟ್ಟಿ ತಾಲೂಕಿನಲ್ಲಿ ನೇಕಾರ ಸಮುದಾಯ ಪರ ಮನೋಹರ ಶಿರೋಳ ಅವರನ್ನು ವಿಧಾನ ಪರಿಷತ್ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಎಂಎಲ್‍ಸಿ ಸ್ಥಾನಕ್ಕೆ ನೇಕಾರರಿಂದ `ಬಿಗ್ ಫೈಟ್’
ರಬಕವಿ-ಬನಹಟ್ಟಿ,ಜೂ6: ಜೂನ್ ಅಂತ್ಯಕ್ಕೆ ತೆರವಾಗಲಿರುವ ಎಂಎಲ್‍ಸಿ ಸ್ಥಾನಗಳಿಗೆ ಲಾಬಿ ಶುರುರವಾಗಿದ್ದರೆ, ಇತ್ತ ಬೆಂಬಲಿಗರು ತಮ್ಮ ಮುಖಂಡರಿಗೆ ಎಂಎಲ್‍ಸಿ ಸ್ಥಾನ ನೀಡಬೇಕೆಂಬ ಒತ್ತಾಯ ಬಲುಜೋರಾಗಿದೆ.
ಬಿಜೆಪಿ ನೇಕಾರ ಪ್ರಕೋಷ್ಟದ ರಾಜ್ಯಾಧ್ಯಕ್ಷ ಮನೋಹರ ಶಿರೋಳ ಅವರಿಗೆ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಬೇಕೆಂದು ರಬಕವಿ-ಬನಹಟ್ಟಿ ತಾಲೂಕಿನ ನೇಕಾರ ಸಮುದಾಯ ಒಕ್ಕೊರಲಿನಿಂದ ಆಗ್ರಹಿಸಿದೆ.
ಪಕ್ಷದ ಶಿಸ್ತಿನ ಸಿಪಾಯಿಯಾಗಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮನೋಹರ ಶಿರೋಳ ಅನುಭವವಿದೆ. ನೇಕಾರರ ನಾಡಿಮಿಡಿತವನ್ನು ಗಮನಿಸಿ, ಸ್ವತಃ ನೇಕಾರರೇ ಆಗಿದ್ದು, ಹೀಗಾಗಿ ವಿಧಾನ ಪರಿಷತ್‍ಗೆ ಆಯ್ಕೆ ಮಾಡಬೇಕೆಂದು ಬಿಜೆಪಿ ಮುಖಂಡ ಸುರೇಶ ಚಿಂಡಕ ಆಗ್ರಹಿಸಿದರು.
ಅಧ್ಯಕ್ಷತೆ ವಹಿಸಿದ್ದ ಜವಳಿ ಉದ್ಯಮಿ ಶಂಕರ ಜುಂಜಪ್ಪನವರ ಮಾತನಾಡಿ, ವೈಜ್ಞಾನಿಕ ತಳಹದಿಯ ಮೇಲೆ ರಾಜ್ಯದ ನೇಕಾರರ ಭವಿಷ್ಯ ಉಜ್ವಲಗೊಳಿಸಲು ನೇಕಾರ ಸಮುದಾಯದ ಪ್ರತಿನಿಧಿ ಅವಶ್ಯವಿದ್ದು, ಜವಳಿ ಕ್ಷೇತ್ರ ಪುನಶ್ಚೇತನಕ್ಕೆ ಅನುಭವಿ ವ್ಯಕ್ತಿಯ ಸೇರ್ಪಡೆ ಸಕಾಲವಾಗಿದೆ. ಜಾತಿ, ಮತ, ಪಂಥ ಮೀರಿ ನೇಕಾರಿಕೆ ಸಮುದಾಯ ಒಗ್ಗಟ್ಟಾಗಿ ಮನೋಹರ ಶಿರೋಳರಿಗೆ ಒಮ್ಮತದ ನಿಲುವು ತೋರುವ ಮೂಲಕ ಈ ಬಾರಿಯ ವಿಧಾನ ಪರಿಷತ್ ಸ್ಥಾನಕ್ಕೆ ಆಯ್ಕೆ ಮಾಡಬೇಕೆಂದರು.
ಸ್ವಾತಂತ್ರ್ಯಾನಂತರದ ದಿನಗಳಲ್ಲಿ ರಬಕವಿ-ಬನಹಟ್ಟಿ ತಾಲೂಕಿನ ನೇಕಾರಿಕೆ ಸಮುದಾಯದಿಂದ ಯಾರೋಬ್ಬರೂ ವಿಧಾನಸಭೆ ಅಥವಾ ವಿಧಾನ ಪರಿಷತ್ ಸ್ಥಾನ ಪಡೆದಿಲ್ಲ. ಸದಾವಕಾಶ ಹೊಂದಿರುವ ಸದ್ಯದ ಪರಿಸ್ಥಿತಿಯಲ್ಲಿ ನೇಕಾರರ ಶಕ್ತಿ ತುಂಬುವಲ್ಲಿ ಸರ್ಕಾರ ಪಾರದರ್ಶಕ ಹಾಗು ಪ್ರಾಮಾಣಿಕವಾಗಿ ನೇಕಾರ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕೆಂದು ದುಂಡಪ್ಪ ಮಾಚಕನೂರ ತಿಳಿಸಿದರು.
ಮಹಾದೇವ ಆಸಂಗಿ, ರಾಮಣ್ಣ ಹುಲಕುಂದ, ಮಲ್ಲಣ್ಣ ಕಕಮರಿ, ಬಸಯ್ಯ ಹಿರೇಮಠ, ಸಿದ್ಧನಗೌಡ ಪಾಟೀಲ, ಶ್ರೀಶೈಲ ದಭಾಡಿ, ಶೇಖರ ಮಾಲಾಪುರ, ಬಸವರಾಜ ಗಿಡದಾನಪ್ಪಗೋಳ ವೇದಿಕೆ ಮೇಲಿದ್ದರು.
ಮಾಜಿ ನಗರಾಧ್ಯಕ್ಷ ಕಣೆಪ್ಪ ಹಾರುಗೇರಿ, ರವಿ ಚನಪನ್ನವರ, ಶೇಖರ ಹಕ್ಕಲದಡ್ಡಿ, ದಾನಪ್ಪ ಹುಲಜತ್ತಿ, ಶಂಕರ ವಸ್ತ್ರದ, ಪ್ರಕಾಶ ಆಸಂಗಿ, ಅಶೋಕ ಕಲಬುರಗಿ, ಈಶ್ವರ ಪಟಗುಂಡಿ, ಸುಭಾಸ ಗಿರಿಸಾಗರ, ಕಾಡು ಕಲಬುರಗಿ, ರವಿ ಕೊರತೆ, ಮಲ್ಲಪ್ಪ ದೊಡಮನಿ, ಬಸವರಜ ಮನ್ಮಿ, ಈರಣ್ಣ ಚಿಂಚಖಂಡಿ ಸೇರಿದಂತೆ ಅನೇಕರಿದ್ದರು.


- FOR ADVERTISEMENT CONTACT -
                   9902523698