ತೇರದಾಳ: 2019 20 ನೇ ಸಾಲಿನ ರಾ. ಹ. ನಿ (SFC) ಯೋಜನೆಯ ವಿಶೇಷ ಅನುದಾನದಲ್ಲಿ ತೇರದಾಳ ಪುರಸಭೆಯ ಅಸ್ತಿತ್ವದಲ್ಲಿರುವ ಕುಡಿಯುವ ನೀರಿನ ಜಾಕ್ವೆಲ್ ರಸ್ತೆಯ ಮೆಟ್ಲಿಂಗ್ ಮತ್ತು ಡಾಂಬರೀಕರಣ ರಸ್ತೆ ಸುಧಾರಣೆಯ ಭೂಮಿ ಪೂಜೆಯನ್ನು ಕ್ಷೇತ್ರದ ಜನಪ್ರಿಯ ಶಾಸಕರಾದ ಸಿದ್ದು ಕ. ಸವದಿಯವರು ತಮ್ಮ ಅಮೃತ ಹಸ್ತದಿಂದ ನೆರವೇರಿಸಿದರು. ಸದರಿ ಕಾಮಗಾರಿಯ ಅಂದಾಜು ಮೊತ್ತ 85.00 ಲಕ್ಷ ರೂಗಳು ಇದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿಯಾದ ಈರಣ್ಣ ದಡ್ಡಿ, ಪುರಸಭೆಯ ಸದಸ್ಯರಾದ ಕುಮಾರ ಸರಿಕರ, ಮೌಲಾಲಿ ಚತ್ರಬಾನಕೋಟೆ, ಕಾಶಿನಾಥ ರಾಠೋಡ, ಕೇದಾರಿ ಪಾಟೀಲ್, ಲಕ್ಷ್ಮಣ್ ನಾಯಕ್ ಹಾಗೂ ಬಿಜೆಪಿಯ ನಾಯಕರಾದ ಪ್ರಭು ಬಾಗಿ, ಸಿದ್ದು ಅಮ್ಮಣಗಿ, ರಾಮಣ್ಣ ಹಿಡಕಲ್, ಭೀಮಸಿ ಹಿರೇಕುರುಬರ್, ಸದಾಶಿವ ಹೊಸಮನಿ, ಸಂಗಪ್ಪ ಕಾಲತಿಪ್ಪಿ ಮತ್ತು ಹಳಿಂಗಳಿ ಗ್ರಾಮದ ಹಿರಿಯರಾದ ಮಾಧುಗೌಡ ಪಾಟೀಲ್, ಆದಿನಾಥ್ ಕುಳ್ಳಿ, ಗಂಗಪ್ಪ ಮಗದುಮ ಇನ್ನೂ ಅನೇಕರು ಉಪಸ್ಥಿತರಿದ್ದರು.
- FOR ADVERTISEMENT CONTACT -
9902523698
Social Plugin