ತೇರದಾಳ ಪಟ್ಟಣದ ಗುರುಕುಲ ಕಲ್ಯಾಣ ಮಂಟಪದಲ್ಲಿ ಕೊರೊಂಟೈನ್‍ದಲ್ಲಿದ್ದ 14ಜನರ ಬಿಡುಗಡೆ.
ತೇರದಾಳ : ಕೋವಿಡ್-19 ಹಿನ್ನಲೆಯಲ್ಲಿ ಪಟ್ಟಣದ ಗುರುಕುಲ ಕಲ್ಯಾಣ ಮಂಟಪದಲ್ಲಿ ಹಾಗೂ ಮುರಾರ್ಜಿ ವಸತಿ ಶಾಲೆಯಲ್ಲಿ ಕೋರಂಟೈನ್‍ಗೆ ಒಳಪಡಿಸಲಾಗಿದ್ದ 16 ಜನರನ್ನು ಸೋಮವಾರ ಸಾಯಂಕಾಲ ತಾಲೂಕಾ ಆಡಳಿತ ಬಿಡುಗಡೆ ಗೊಳಿಸಲಾಯಿತು.
ಪಟ್ಟಣದ ಗುರುಕುಲ ಆವರಣದಲ್ಲಿರುವ ಗುರುಕುಲ ಕಲ್ಯಾಣ ಮಂಟಪದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಮೇ. 12ರಂದು ತೇರದಾಳ ಪಟ್ಟಣಕ್ಕೆ ಬಂದಿರುವ 70 ಜನರನ್ನು ಹಾಗೂ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆಯಲ್ಲಿ ಇಬ್ಬರನ್ನು ಕೋರೊಂಟೈನ್ ಮಾಡಲಾಗಿತ್ತು. ಕೆಲವು ದಿನಗಳ ಹಿಂದೆ 70 ಜನರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಮವಾರ ಸಾಯಂಕಾಲ 70ಜನರಲ್ಲಿ 14 ಜನರ ವರದಿ ನೆಗೆಟೀವ್ ಬಂದಿರುವುದರಿಂದ ಆರೋಗ್ಯವಾಗಿರುವುದು ದೃಢಪಟ್ಟಿರುವುದರಿಂದ ಅವರನ್ನು ಮನೆಗೆ ಕಳುಹಿಸಲಾಯಿತು. ಮನೆಯಲ್ಲಿಯೇ 7 ದಿನಗಳ ಕಾಲ ಹೋಮ ಕ್ವಾರಾಂಟೈನ್ ಮಾಡಲು ಸ್ಪಷ್ಟ ನಿರ್ದೇಶನದೊಂದಿಗೆ ಅವರನ್ನು ಮನೆಗೆ ಕಳುಹಿಸಿಲಾಯಿತು. ಗುರುಕುಲ ಕಲ್ಯಾಣ ಮಂಟಪದಲ್ಲಿದ್ದವರಲ್ಲಿ ಚಿಕ್ಕ ಮಕ್ಕಳು ಸಹ ಇದ್ದಾರೆ.
56ಜನರ ವರದಿಗಾಗಿ ಕಾಯಲಾಗುತ್ತುದೆ ಎಂದು ತಾಲೂಕಾ ಆಡಳಿತವು ಪತ್ರಿಕೆಗೆ ತಿಳಿಸಿದರು.ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಗ್ರಾಮಲೆಕ್ಕಾಧಿಕಾರಿ ಪಿ.ಎಸ್.ಮಠಪತಿ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಪೋಲಿಸ್ ಇಲಾಖೆಯ ಅಧಿಕಾರಿಗಳು ಇದ್ದರು.
- FOR ADVERTISEMENT CONTACT -
9902523698


Social Plugin