ರಬಕವಿ-ಬನಹಟ್ಟಿ ಪಟ್ಟಣದಾದ್ಯಂತ ಅನಧಿಕೃತ ಕಟ್ಟಡಗಳನ್ನು ನಡೆಸುತ್ತಿರುವದು.
ಲಾಕ್‍ಡೌನ್ ಮಧ್ಯ ತಲೆ ಎತ್ತುತ್ತಿವೆ ಅನಧಿಕೃತ ಕಟ್ಟಡಗಳು
ಕೊರೊನಾ ವೈರಸ್‍ನ ಹಿನ್ನಲೆ ಕಳೆದೆರಡು ತಿಂಗಳು ಲಾಕ್‍ಡೌನ್ ಆಗಿರುವ ಸಂದರ್ಭದಲ್ಲಿ ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ಕೆಲ ಕಳ್ಳ ಮಾರ್ಗಗಳಿಗೆ ಸಹಕಾರಿಯಾಗುವಲ್ಲಿ ಕಾರಣವಾಗಿದೆ.
ಕೊರೊನಾದಲ್ಲಿ ಕಾರ್ಯನಿರತವಾಗಿರುವ ಅಧಿಕಾರಿಗಳು ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಕೊರೊನಾ ವಾರಿಯರ್ಸ್‍ಗಳಾಗಿ ಸೇವೆ ಸಲ್ಲಿಸುತ್ತಿದ್ದರೆ, ಇತ್ತ ಕೆಲ ಜನರು ಅನಧಿಕೃತವಾಗಿ ಕಟ್ಟಡಗಳನ್ನು ಯಾವದೇ ಅನುಮತಿ ಪಡೆಯದೆ ಪೂರ್ತಿಗೊಳಿಸುವ ಅವಸರದಲ್ಲಿದ್ದಾರೆ.
ಪಟ್ಟಣದಾದ್ಯಂತ ಅಲ್ಲಲ್ಲಿ ನಗರಸಭೆ ಹಾಗು ಪ್ರಾಧಿಕಾರ ಕಚೇರಿಗಳ ಅನುಮತಿ ಪಡೆಯದೆ ಬೇಕಾಬಿಟ್ಟಿಯಾಗಿ ಇದೇ ಉತ್ತಮ ಸಮಯವೆಂದು ಅಕ್ರಮ ನಡೆಸುವಲ್ಲಿ ತಲ್ಲೀಣರಾಗಿದ್ದಾರೆ. ಈ ಕುರಿತು ಪೌರಾಯುಕ್ತ ಶ್ರೀನಿವಾಸ ಜಾಧವ ಖಡಕ್ ಎಚ್ಚರಿಕೆ ರವಾನಿಸಿದ್ದು, ನಗರಸಭೆ ಅನುಮತಿಯಿಲ್ಲದೆ ಕಟ್ಟಡಗಳನ್ನು ನಿರ್ಮಿಸುತ್ತಿದ್ದರೆ ಅಂತಹ ಕಟ್ಟಡಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವದು. ಅಲ್ಲದೆ ಎರಡು ಪಟ್ಟು ಪಾವತಿಯೊಂದಿಗೆ ಪ್ರತಿ ವರ್ಷ ತೆರಿಗೆ ನೀಡುವ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಶಾಶ್ವತವಾಗಿ ಎರಡು ಪಟ್ಟು ತುಂಬುವದಲ್ಲದೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವದೆಂದು ತಿಳಿಸಿದರು.
ಸದ್ಯದಲ್ಲಿಯೇ ಪಟ್ಟಣದಾದ್ಯಂತ ಪರಿಸರ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಸಂಚಾರ ನಡೆಸುವ ಮೂಲಕ ತನಿಖೆ ನಡೆಸಲಿದ್ದಾರೆ. ಅಕ್ರಮ ಕಟ್ಟಡ ನಿರ್ಮಿಸುವವರು ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವದೆಂದು ತಿಳಿಸಿದರು.
ಕಾರ ಹುಣ್ಣಿಮೆ ರದ್ದು: ಬರುವ ದಿ.4 ರಂದು ಬನಹಟ್ಟಿ ಪಟ್ಟಣದಲ್ಲಿ ಹೊನ್ನುಗ್ಗಿ ಕಾರ್ಯಕ್ರಮ ನಡೆಸಲಾಗುವದು. ಕೊರೊನಾ ಹಾವಳಿ ಕಾರಣ ಈ ಬಾರಿ ಜೂನ್ 5 ರಂದು ನಡೆಯಲಿರುವ ಕಾರ ಹುಣ್ಣಿಮೆ ನಿಮಿತ್ತ ಎತ್ತುಗಳನ್ನು ಓಡಿಸುವ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ರೈತ ಹಾಗು ಗೌಡರ ಸಮಾಜದ ಅಧ್ಯಕ್ಷ ಸಿದ್ಧನಗೌಡ ಪಾಟೀಲ, ಮಂಗಳವಾರ ಪೇಟೆ ದೈವ ಮಂಡಳಿ ಚೇರಮನ್ ಶ್ರೀಶೈಲ ದಭಾಡಿ ಹಾಗು ಸೋಮವಾರ ಪೇಟೆ ಸಮಸ್ತ ದೈವ ಮಂಡಳಿ ಚೇರಮನ್ ಸಂಗಣ್ಣ ಗಣೇಶನವರ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
- FOR ADVERTISEMENT CONTACT -
9902523698

Social Plugin