ರಬಕವಿ-ಬನಹಟ್ಟಿ ತಹಶೀಲ್ದಾರ ಪ್ರಶಾಂತ ಚನಗೊಂಡರಿಗೆ ವಿವಿಧ ಆರ್ಕೆಸ್ಟ್ರಾ ಕಲಾವಿದರು ನೆರವಿಗಾಗಿ ಮನವಿ ಅರ್ಪಿಸಿದರು.
ಆರ್ಕೆಸ್ಟ್ರಾ ಕಲಾವಿದರಿಗೆ ಸಹಾಯಕ್ಕೆ ಮನವಿ
ರಬಕವಿ-ಬನಹಟ್ಟಿ,ಜೂ6: ಕೊರೊನಾ ವೈರಸ್‍ನ ಲಾಕ್‍ಡೌನ್ ಸಂಕಷ್ಟಕ್ಕೆ ಸಿಲುಕಿರುವ ಆರ್ಕೆಸ್ಟ್ರಾ ಕಲಾವಿದರಿಗೆ ನೆರವು ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಬಕವಿ-ಬನಹಟ್ಟಿ ತಹಶೀಲ್ದಾರ ಪ್ರಶಾಂತ ಚನಗೊಂಡರಿಗೆ ಮನವಿ ಸಲ್ಲಿಸಿದ ಕಲಾವಿದರು, ಲಾಕ್‍ಡೌನ್ ಸಂದರ್ಭ ಸಭೆ-ಸಮಾರಂಭಗಳು ನಡೆಯದೇ ಇರುವದರಿಂದ ಆರ್ಕೆಸ್ಟ್ರಾ ಕಲಾವಿದರು ಹಾಗು ಜೂನಿಯರ್ಸ್ ಮಾಲಿಕರು ಮತ್ತು ಕಾರ್ಮಿಕರು ಸದ್ಯ ಕೈಯಲ್ಲಿ ಕೆಲಸವಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಆರ್ಕೆಸ್ಟ್ರಾ ಖರೀದಿಸುವ ಸಲುವಾಗಿ ಪಡೆದ ಸಾಲ ಹಿಂತಿರುಗಿಸಲು ಸಾಧ್ಯವಾಗುತ್ತಿಲ್ಲ. ಕುಟುಂಬ ನಿರ್ವಹಣೆ ಸದ್ಯ ಸವಾಲಾಗಿದ್ದು ತುಂಬಾ ಮಾನಸಿಕ ತೊಳಲಾಟದಲ್ಲಿದ್ದಾರೆ. ಈ ಎಲ್ಲ ಕಲಾವಿದರಿಗೆ ಸರ್ಕಾರ ಸಹಾಯಹಸ್ತ ನೀಡುವ ಮೂಲಕ ವೃತ್ತಿಯಲ್ಲಿ ಮುಂದುವರೆಸುವಲ್ಲಿ ಸಹಕಾರಿಯಾಗಬೇಕೆಂದು ರಬಕವಿ-ಬನಹಟ್ಟಿ, ತೇರದಾಳ, ಮಹಾಲಿಂಗಪೂರ, ಸಸಾಲಟ್ಟಿ, ಹಣಗಂಡಿ ಸೇರಿದಂತೆ ಇತರೆ ಗ್ರಾಮಗಳ ಮೆಲೋಡಿಸ್ ತಂಡಗಳ ಸದಸ್ಯರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿನೋದ ಸುಟ್ಟಟ್ಟಿ, ಮೀರಾ ನದಾಫ್, ಸುರೇಶ ಜವಳಗಿ, ಶ್ರೀಶೈಲ ಹುಲಗಬಾಳಿ, ಬಸು ನುಚ್ಚಿ, ಅಶೋಕ ಕರಲಟ್ಟಿ, ಅರುಣ ಹಳ್ಯಾಳ, ರಾಜು ಶೀಲವಂತ ಸೇರಿದಂತೆ ಅನೇಕರಿದ್ದರು.
ವಟಸಾವಿತ್ರಿ ವೃತ: ಕಾರಹುಣ್ಣಿಮೆ ದಿನದಂದು ಸಂಪ್ರದಾಯಬದ್ದವಾಗಿ ಅವಳಿ ನಗರದಲ್ಲಿ ಸಾವಿರಾರು ಮುತ್ತೈದೆ ಮಹಿಳೆಯರು ವಟವೃಕ್ಷಕ್ಕೆ ಪೂಜೆಸಲ್ಲಿಸುವುದರ ಮೂಲಕ ವಟಸಾವಿತ್ರಿ ವೃತ ಆಚರಿಸಿದರು.
ಶುಕ್ರವಾರ ಬೆಳಗಿನಿಂದಲೇ ಅವಳಿ ನಗರದ ಅನೇಕ ಕಡೆಗಳಲ್ಲಿ ವಟವೃಕ್ಷಕ್ಕೆ ಮುತ್ತೈದೆಯರು ವಿಶೇಷ ಪೂಜೆ ಸಲ್ಲಿಸಿದರು. ನಂತರ ವೃಕ್ಷಕ್ಕೆ ನೂಲಿನ ದಾರದಿಂದ ಗಿಡಕ್ಕೆ ಪ್ರದಕ್ಷಿಣೆ ಹಾಕಿ ತಮ್ಮ ಇಷ್ಟಾರ್ಥಗಳನ್ನು ಇಡೇರಿಸುವಂತೆ ಭಕ್ತಿಯಿಂದ ಬೇಡಿಕೊಂಡರು. ಪ್ರದಕ್ಷಿಣಯ ನಂತರ ಎಲ್ಲ ಮುತ್ತೈಯರಿಗೆ ಉಡಿ ತುಂಬಿ ಅರಿಶಿಣ ಕುಂಕುಮ ವಿನಿಮಯ ಮಾಡಿಕೊಂಡರು.
ಸತ್ಯವಾನ ಸಾವಿತ್ರಿ ಪ್ರತೀಕವೇ ಈ ವಟವೃಕ್ಷವಾಗಿದೆ ಎಂಬ ಅಪಾರವಾದ ನಂಬಿಕೆ ನಮ್ಮಬಾರತೀಯ ಸಂಪ್ರದಾಯದಲ್ಲಿ ಇರುವುದರಿಂದ, ಆದಿ ಕಾಲದಿಂದಲೂ ಈ ವೃಕ್ಷನ್ನು ಮಹಿಳೆಯರು ತಮ್ಮ ಬೇಡಿಕೆಗಳನ್ನು ಇಡೇರಿಸಿಕೊಳ್ಳಲು ಪೂಜೆಸಲ್ಲಿಸುತ್ತಾರೆ, ಈ ವೃಕ್ಷವನ್ನು ಈ ಮಾಸದಲ್ಲಿ ಪೂಜೆ ಸಲ್ಲಿಸುವುದರಿಂದ ತಮ್ಮ ಮುತ್ತೈದೆಯಬಾಗ್ಯ ಗಟ್ಟಿಯಾಗಿ ತಮ್ಮ ಗಂಡಂದಿರ ಆಯುಷ್ಯ ಕೂಡಾ ವೃದ್ಧಿಯಾಗುತ್ತದೆ ಎಂಬ ಪೂರಾತನ ಕಾಲದಿಂದಲು ನಂಬಿಕೆಕೊಂಡುಬಂದಿರುವುದಾಗಿದೆ. ಈ ಆಲದ ಮರಕ್ಕೆ ಮುತ್ತೈದೆಯರೇ ಹೆಚ್ಚು ಪೂಜೆ ಸಲ್ಲಿಸುತ್ತಾರೆ ಎಂದು ರಾಯರ ಆರಾಧಕರಾದ ಅನಂತ ಪುರೋಹಿತ ಅವರು ಪತ್ರಿಕೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳೆಯರಾದ ಮಾಲಾ ಪಿಸೆ, ಗಿರಿಜಾ, ಸಾವಿತ್ರಿ, ಪ್ರೀಯಾಂಕಾ, ಶಾರದಾ ಸುಡಾಳ, ಸವಿತಾ ಮಹೇಂದ್ರಕರ, ವಸ್ತಲಾಬಾಯಿ ರಜಪೂತ, ಸುವರ್ಣಾ ನಾಶಿ, ಅರ್ಚನಾ ಮಹೇಂದ್ರಕರ ಮತ್ತು ಆಕಾಶ ಪುರೋಹಿತ ಸೇರಿದಂತೆ ಅನೇಕರು ಇದ್ದರು.


- FOR ADVERTISEMENT CONTACT -
                   9902523698