ಬನಹಟ್ಟಿಯ ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯಕ್ಕೆ ನೂತನವಾಗಿ ಆಗಮಿಸಿದ ನ್ಯಾಯಾಧೀಶ ಮಹೇಶ ಚಂದ್ರಕಾಂತ ಅವರನ್ನು ಸನ್ಮಾನಿಸಿ ಸ್ವಾಗತಿಸಲಾಯಿತು.

ದಾವೆಗಳ ವಿಲೇವಾರಿಯಲ್ಲಿ ವಕೀಲರ ಸಹಕಾರ ಅಗತ್ಯ
ರಬಕವಿ-ಬನಹಟ್ಟಿ,ಜೂ4:ನ್ಯಾಯಾಲಯದ ದಾವೆಗಳ ವಿಲೇವಾರಿಯಲ್ಲಿ ವಕೀಲರ ಸಹಕಾರ ಅಗತ್ಯವಾಗಿದೆ. ಅದರಲ್ಲೂ ಹಳೆಯ ದಾವೆಗಳ ವಿಲೇವಾರಿಯಲ್ಲಿ ಸಂಬಂಧಪಟ್ಟ ವಕೀಲರ ಸಹಕಾರ ಇನ್ನಷ್ಟು ಮುಖ್ಯವಾಗಿದೆ ಎಂದು ಸ್ಥಳೀಯ ಸಿವಿಲ್ ನ್ಯಾಯಾಧೀಶ ಮಹೇಶ ಚಂದ್ರಕಾಂತ ತಿಳಿಸಿದರು.
ಅವರು ಸೋಮವಾರ ಸ್ಥಳೀಯ ವಕೀಲರ ಸಂಘದ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾದ ಸ್ವಾಗತ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹಿರಿಯ ವಕೀಲರ ಎಂ.ಜಿ.ಕೆರೂರ ಮಾತನಾಡಿ, ನ್ಯಾಯಾಧೀಶರು ಮತ್ತು ವಕೀಲರು ಒಂದೇ ನಾಣ್ಯದ ಎರಡು ಮುಖಗಳು. ಇಬ್ಬರ ಮಧ್ಯದಲ್ಲಿ ಪರಸ್ಪರ ಸಹಕಾರವಿದ್ದಾಗ ಕಕ್ಷಿದಾರರಿಗೆ ಸರಿಯಾದ ಸಮಯದಲ್ಲಿ ನ್ಯಾಯ ನೀಡಲು ಸಾಧ್ಯವಾಗುತ್ತದೆ. ಆದ್ದರಿಂದ ವಕೀಲರು ಯಾವಾಗಲೂ ಅಧ್ಯಯನಶೀಲರಾಗಿರಬೇಕು ಮತ್ತು ಪ್ರಕರಣಗಳನ್ನು ಕುರಿತು ಅಧ್ಯಯನ ಮಾಡಿರಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ಕೆ.ಡಿ.ತುಬಚಿ, ಹರ್ಷವರ್ಧನ ಪಟವರ್ಧನ ಮಾತನಾಡಿದರು. ಕಾರ್ಯಕ್ರಮದ ವೇದಿಕೆಯ ಮೇಲೆ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶೆ ರೇಶ್ಮಾ ಗೋಣಿ, ಸಹಾಯಕ ಸರ್ಕಾರಿ ಅಭಿಯೋಜಕ ವೈ.ಎಸ್. ಮೇತ್ರಿ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಪುಟಾಣಿ ಇದ್ದರು.
ಶಿವಕುಮಾರ ಷಣ್ಮುಖ ಸ್ವಾಗತಿಸಿದರು. ವೆಂಕಟೇಶ ನಿಂಗಸಾನಿ ನಿರೂಪಿಸಿದರು. ರವಿ ಸಂಪಗಾಂವಿ ವಂದಿಸಿದರು. ಅರವಿಂದ ವ್ಯಾಸ್, ವಿಜಯ ಹೂಗಾರ, ಸುರೇಶ ಗೊಳಸಂಗಿ, ಎಸ್.ಎಂ. ಫಕೀರಪೂರ, ಮಹಾಂತೇಶ ಪದಮಗೊಂಡ, ಬಸವರಾಜ ಗುರುವ, ಸುಜಾತಾ ನಿಡೋಣಿ ಸೇರಿದಂತೆ ಅನೇಕರು ಇದ್ದರು.


- FOR ADVERTISEMENT CONTACT -
                   9902523698