ವರದಿ : ಕೆ. ಎಸ್. ರಂಗಸ್ವಾಮಿ 

ತೇರದಾಳ: ಪಟ್ಟಣದ ನೇಕಾರ ಸಮಾಜದ ಬಂಧುಗಳು ಸೇರಿ ಈ ಬಾರಿ ಎಮ್.ಎಲ್.ಸಿ ಟಿಕೆಟನ್ನು ನಮ್ಮವರೆ ಆದ, ಅದು ಅಲ್ಲದೆ ನೇಕಾರ ಕುಟುಂದವರೇ ಆದ ಮಹಾಲಿಂಗಪೂರದ ಮನೋಹರ ಶಿರೋಳರವರಿಗೆ ನೀಡಬೇಕೆಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರಿಗೆ ಹಾಗೂ ಸಂಸದ ಪಿ.ಸಿ.ಗದ್ದಿಗೌಡರಿಗೆ ಮತ್ತು ಮತಕ್ಷೇತ್ರದ ಶಾಸಕ ಸಿದ್ದು ಸವದಿಯವರಿಗೆ ಈ ಮೂಲಕ ಆಗ್ರಹಿಸಿದರು. 
      ಇಂದು ಪಟ್ಟಣದ ಶ್ರೀ ಗುರು ಬ್ರಹ್ಮಾನಂದ ಮಠದಲ್ಲಿ ಸಭೆ ಸೇರಿದ ನೇಕಾರ ಬಂಧುಗಳು ಬಾಗಲಕೋಟ ಜಿಲ್ಲೆಯಲ್ಲಿ ನೇಕಾರ ಜನಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿರುವದರಿಂದ ಶಿರೋಳರವರಿಗೆ ಟಕೆಟ್ ನೀಡಿದಲ್ಲಿ ಸರಕಾರವು ನೇಕಾರ ಸಮಾಜಕ್ಕೂ ಪ್ರಾಧಾನ್ಯತೆ ನೀಡಿದಂತಾಗುತ್ತದೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ನೇಕಾರರೆಲ್ಲ ನೇಕಾರಿಕೆಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ.ಹಗಲಿರುಳು ದುಡಿದರೂ ಸಹ ನೇಕಾರನ ಬದುಕು ಇನ್ನೂ ಅತಂತ್ರ ಸ್ಥಿತಿಯಲ್ಲಿದೆ. ಹಲವಾರು ದಶಕಗಳೆ ಕಳೆದು ಹೋದರೂ ಸಹ ನೇಕಾರನ ಬದುಕು ಇನ್ನೂ ಚಿಂತಾಜನಕ ಸ್ಥಿತಿಯಲ್ಲಿದೆ. ಕಾರಣ ನಮ್ಮ ಕಷ್ಟಗಳನ್ನು ಅರ್ಥಮಾಡಿಕೊಳ್ಳುವ ನಾಯಕನ ಅವಶ್ಯಕತೆ ಇದೆ. ಆದ್ದರಿಂದ ಶಿರೋಳರವರು ಸಮುದಾಯದ ಕಷ್ಟಗಳನ್ನು ಬಲ್ಲವರಾಗಿದ್ದಾರೆ,ಅಲ್ಲದೆ ನೇಕಾರ ಕುಟುಂಬದವರಾದುದರಿಂದ ನೇಕಾರರ ಅವಶ್ಯಕತೆಗಳೆನು ಎಂಬುದು ಅವರು ಅರ್ಥಮಾಡಿಕೊಳ್ಳುತ್ತಾರೆ.ಈಗಾಗಲೇ ನೇಕಾರರ ಕಷ್ಟಗಳಿಗೆ ಸ್ಪಂದನೆ ನೀಡುತ್ತಾ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿದ್ದಾರೆ.ಕಾರಣ ನೇಕಾರರ ಕುರಿತು ಅನುಕಂಪ ಹೊಂದಿದ ಮನೋಹರ ಶಿರೋಳರವರಿಗೆ ಈ ಬಾರಿ ತಪ್ಪದೆ ಎಮ್.ಎಲ್.ಸಿ. ಟಿಕೇಟನ್ನು ಕೊಡಲೇಬೇಕೆಂದು ಈ ಮೂಲಕ ಆಗ್ರಹಿಸಿದರು.ಈ ಸಂದರ್ಭದಲ್ಲಿ ನೇಕಾರರ ಮುಖಂಡರಾದ ಪ್ರಕಾಶ ಜಡಿ,ರವಿ ವಜ್ರಮಟ್ಟಿ,ಅಲ್ಲಪ್ಪ ಇಂಗಳಗಿ,ಮಲ್ಲಪ್ಪ ಜಾಡಗೌಡ್ರ,ಶಿವಾನಂದ ಮನ್ನೊಳ್ಳಿ,ರಮೇಶ ಜಾಡಗೌಡ್ರ,ಈರಪ್ಪ ಕಲ್ಲೊಳ್ಳಿ ಚನಮಲ್ಲ ತೆಳಗಿನಮನಿ,ಮಹಾದೇವ ಖವಾಸಪೂರ,ಸುಭಾಸ ಚಿಂಚಲಿ,ವೀರಭದ್ರ ಗೋಲಬಾವಿ,ಶಿವಾನಂದ ಖವಾಶಿ,ಕಾಡಪ್ಪ ಆಸಂಗಿ,ಅಬ್ಬಾಸಲಿ ಇನಾಮದಾರ,ಚಿದಾನಂದ ಚಾಪಿ, ಈರಪ್ಪ ತಂಬೂರಿ,ಮಲ್ಲಪ್ಪ ಮನ್ಮಿ,ಶಂಕರ ಬಿಳೂರ ಮುಂತಾದವರಿದ್ದರು. 


-  FOR ADVERTISEMENT CONTACT 
                    9902523698