ತೇರದಾಳ ಸಮೀಪದ ಹನಗಂಡಿ ಗ್ರಾಮದಲ್ಲಿ ಗ್ರಾಮ ಸಮೀತಿಯ ಪದಾಧಿಕಾರಿಗಳ ಆಯ್ಕೆಯಲ್ಲಿ ಭಾಗವಹಿಸಿದ ದಲಿತ ಮುಖಂಡರುಗಳು.
ದಲಿತ ಸಂಘರ್ಷ ಸಮೀತಿ ಪದಾಧಿಕಾರಿಗಳ ಆಯ್ಕೆ
ತೇರದಾಳ : ಸಮೀಪದ ಹನಗಂಡಿ ಗ್ರಾಮದಲ್ಲಿ ದಲಿತ ಸಂಘರ್ಷ ಸಮೀತಿ(ಭೀಮಘರ್ಜನೆ) ಯ ಕೆಲವು ಪದಾಧಿಕಾರಿಗಳ ಆಯ್ಕೆಯನ್ನು ಜಿಲ್ಲಾ ಸಂಚಾಲಕ ರಾಜು ಸರಿಕರ ಇವರ ಸಮ್ಮುಖದಲ್ಲಿ ಮಾಡಲಾಯಿತು.   
  ಹನಗಂಡಿ ಗ್ರಾಮದ ಸಂಚಾಲಕರನ್ನಾಗಿ ಅನೀಲ ಗುಬಚಿ, ತೇರದಾಳ ತಾಲೂಕಿನ ಸಂಘಟನಾ ಸಂಚಾಲಕರನ್ನಾಗಿ ಕುಮಾರ ಕಾಂಬಳೆ, ಸದ್ದಾಂ ಬಾಗಿ ಅವರನ್ನು ನೇಮಿಸಲಾಯಿತು. ಈ ಸಂದರ್ಭದಲ್ಲಿ ಡಿಎಸ್‍ಎಸ್ ಜಿಲ್ಲಾ ಕಲಾ ಮಂಡಳಿ ಸಂಚಾಲಕ ತುಕಾರಾಂ ಸಿಂಗೆ, ತೇರದಾಳ ತಾಲೂಕಿನ ಡಿಎಸ್‍ಎಸ್ ಭೀಮ ಘರ್ಜಣೆ  ಸಂಚಾಲಕ ಪ್ರಭು ಮಾಲಾಪೂರ, ಶಾನೂರ ರಾಮದುರ್ಗ, ಗಜಾನನ ಯಳಕಾರ, ಗಣಪತಿ ಗುಬಚಿ, ಪ್ರಕಾಶ ರೋಡನ್ನವರ, ಹಸನ್ ಪಕಾಲಿ, ಮಜಬುರ ಪಕಾಲಿ, ನವೀನ ಗುಬಚೆ ಸೇರಿದಂತೆ ಇನ್ನಿತರರು ಇದ್ದರು.