ಬನಹಟ್ಟಿ ಜಗದಾಳ ರಸ್ತೆಯಲ್ಲಿರುವ ಆರೋಗ್ಯ ಯೋಗಫೀಠ ಫೌಂಢೇಶನ್ ಮೈದಾನದಲ್ಲಿ ವಿಶ್ವ 6ನೇ ಯೋಗದಿನಕ್ಕೆ ಶಾಸಕ ಸಿದ್ದು ಸವದಿ ದೀಪ ಬೆಳಗಿಸಿ ಚಾಲನೆ ನೀಡಿದರು. ಯೋಗ ಗುರುಗಳಾದ ಶ್ರೀ ಶೀವಶಂಕರ ಶಿವಾಚಾರ್ಯರು, ಡಾ. ಪರಶುರಾಮ ರಾವಳ ಸೇರಿದಂತೆ ಇನ್ನೀತರರು ಇದ್ದರು.
ಯೋಗ ಪ್ರಾಣಾಯಾಮ ಧ್ಯಾನ ಮಾಡಿ ಕರೊನಾ ಓಡಿಸಿ; ಶಿವಶಂಕರ ಶಿವಾಚಾರ್ಯರು
ರಬಕವಿ-ಬನಹಟ್ಟಿ,ಜೂ21: ನಿತ್ಯ ಯೋಗ, ಪ್ರಾಣಾಯಾಮ, ಧ್ಯಾನ ಮಾಡಿದರೆ ಭಯಾನಕ ಕರೊನಾ ವೈರಸ್ ಕೂಡಾ ಓಡಿ ಹೋಗುತ್ತದೆ ಎಂದು ಯೋಗ ಗುರು ಹಾಗೂ ಹಳೆ ಹುಬ್ಬಳ್ಳಿ ವೀರಭಿಕ್ಷಾವರ್ತಿ ಮಠದ ಶ್ರೀ ಶಿವಶಂಕರ ಶಿವಾಚಾರ್ಯ ಶ್ರೀಗಳು ತಿಳಿಸಿದರು.
ಬಾನುವಾರ ಬನಹಟ್ಟಿ ಜಗದಾಳ ರಸ್ತೆಯಲ್ಲಿನ ಡಾ. ಪರಶುರಾಮ ರಾವಳ ರವರ ಆರೋಗ್ಯ ಯೋಗಫೀಠ ಫೌಂಡೇಶನ್ ಆವರಣದಲ್ಲಿ ವಿಶ್ವ 6ನೇ ಯೋಗ ದಿನದ ಅಂಗವಾಗಿ ಹಮ್ಮಿಕೊಂಡ ಯೋಗ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಪ್ರತಿದಿನ ಕನಿಷ್ಟ 12 ಸೂರ್ಯನಮಸ್ಕಾರ, ಸರ್ವಾಂಗಾಸನ, ಬಸ್ತ್ರಿಕಾ ಪ್ರಾಣಾಯಾಮ ಮಾಡಿದರೆ ನಿಮ್ಮ ಶರೀರದಲ್ಲಿ ಹಿಮ್ಯುನಿಟಿ ಹೆಚ್ಚಾಗಿ ರೋಗರಹಿತ ಜೀವನ ಸಾಗಿಸಭಹುದು ಎಂದರು.
ಯೋಗ ಗುರು ಡಾ. ಪರಶುರಾಮ ರಾವಳ ಮಾತನಾಡಿ, ಯೋಗ ಎಂಬ ಅಗ್ನಿಯೋಳಗೆ ಯಾರು ಮುಳುಗಿರುತ್ತಾರೋ ಅವರು ರೋಗ ಮುಕ್ತ ಜೀವನ ನಡೆಸುತ್ತಾರೆ. ಅಲ್ಲದೆ ಇಂದಿನಿಂದ ಪ್ರತಿದಿನ ಬೆಳಿಗ್ಗೆ 5-30 ರಿಂದ 7 ಗಂಟೆ ವರೆಗೆ ರೋಗಕ್ಕೆ ಸಂಬಂದಿಸಿದಂತೆ ಉಚಿತ ಯೋಗ ಹೇಳಿಕೊಡಲಾಗುತ್ತಿದೆ. ಬಾಬಾ ರಾಮದೇವೆ ರವರು ಅವಳಿ ನಗರಕ್ಕೆ ಹರಿದ್ವಾರದಿಂದ ಇಬ್ಬರು ಯೋಗಿ ಆಚಾರ್ಯರನ್ನು ಕಳಿಸಿಕೊಡಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಆರೋಗ್ಯವಂತ ಜೀವನ ಸಾಗಿಸಿ ಸ್ವಸ್ತಭಾರತ ನಿರ್ಮಿಸೋಣ ಎಂದರು.
ಸಮಾರಂಭದಲ್ಲಿ ಸರ್ಕಾರ ಆದೇಶದಂತೆ ಸಮಾಜಿಕ ಅಂತರ ಕಾಯ್ದುಕೊಂಡು ಯೋಗ ಮಾಡಲಾಯಿತು. ಶಾಸಕ ಸಿದ್ದು ಸವದಿ, ಬಿಜೆಪಿ ಮುಖಂಡ ಧರೆಪ್ಪ ಉಳ್ಳಾಗಡ್ಡಿ, ಶ್ರೀಶೈಲ ಉಳ್ಳಾಗಡ್ಡಿ, ನಂದಕುಮಾರ ಗಾಯಕವಾಡ, ಸಿದ್ರಾಮ ಸವದತ್ತಿ, ಚೈತನ್ಯ ರಾವಳ, ಎಸ್. ಡಿ. ಕೊರಡೂರ, ವಿನಾಯಕ ತಾಂಬಟ, ಶಿಲ್ಪಾ ಅಗಡಿ, ಚಿತ್ರ ನಟ ಮಹೇಶ ರಾವಳ ಸೇರಿದಂತೆ ಅನೇಕರಿದ್ದರು.
- FOR ADVERTISEMENT CONTACT -
-9902523698-

Social Plugin