ಭಾಸ್ಕರನೆನ್ನುವ ಸವಿತ್ರ ಮತ್ತು ವಿವಸ್ವಾನ್
ಇತಿಹಾಸದಲ್ಲಿಯಂತೂ ಭೂದಾನ, ಗೋದಾನಗಳೆಲ್ಲವೂ ನಡೆದ ಹೆಚ್ಚಿನ ಸಮಯ ಸೂರ್ಯಗ್ರಹಣ ಚಂದ್ರಗ್ರಹಣ ಕಾಲದಲ್ಲಿಯೇ, ನಮ್ಮ ಕನ್ನಡ ನಾಡಿನಲ್ಲಿ ಉಭಯಮುಖೀ ದಾನ ಕೊಟ್ಟ ನಿದರ್ಶನ ಶಾಸನಗಳಲ್ಲಿ ಉಲ್ಲೇಖವಿದೆ. ಗ್ರಹಣವೆನ್ನುವ ಆಕಾಶದಲ್ಲಿ ನಡೆಯುವ ಈ ವಿಸ್ಮಯ ಸನ್ನಿವೇಶವನ್ನು ಭಯದಿಂದ ಕಳೆಯುವಂತೆ ಮಾಡುವ ಬ್ರಹ್ಮಾಂಡದ ಕಪಟ ಜ್ಯೋತಿಷಿಗಳೆಲ್ಲ ಅಧ್ಯಯನ ಮಾಡದೇ ಬುರುಡೆ ಬಿಡುತ್ತಿರುತ್ತಾರೆ. ಗ್ರಹಣ ಎನ್ನುವುದು ಕೇವಲ ಮನುಷ್ಯನಿಗೆ ಮಾತ್ರವಲ್ಲ ಗೋವುಗಳಿಗೆ, ಬೆಕ್ಕುಗಳಿಗೆ, ನಾಯಿಗಳಿಗೆ, ಮತ್ತು ಇನ್ನಿತರೇ ಪ್ರಾಣಿ, ಪಕ್ಷಿ, ಜೀವ ಸಂಕುಲಗಳಿಗೆ ಅನ್ವಯಿಸುತ್ತದೆಯಲ್ಲ. ಗ್ರಹಣದಿಂದ ಅವುಗಳಿಗೆ ಏನೂ ಆಗಲಿಕ್ಕಿಲ್ವಾ ? ಅವುಗಳಿಗೂ ಸಂಕಷ್ಟ ಬರುತ್ತದೆಯಾ ? ಅವುಗಳು ಗ್ರಹಣಕಾಲದಲ್ಲಿ ಏನನ್ನೂ ತಿನ್ನದೇ ಒಂದು ಕಡೆ ಕುಳಿತಿರುತ್ತವೆಯಾ ? ಅಥವಾ ಗ್ರಹಣದಿಂದ ಅವುಗಳಿಗೆ ವಿನಾಯಿತಿ ಇದೆಯಾ ? ಇವೆಲ್ಲ ಮೂರ್ಖ ಪ್ರಶ್ನೆಗಳಾದರೂ ಸಹ ಭಯ ಹುಟ್ಟಿಸುವವರಿಗೆ ಉತ್ತರವೂ ಹೌದು!
ಋಗ್ವೇದದ ಹತ್ತನೇ ಮತ್ತು ೫ನೇ ಮಂಡಲದಲ್ಲಿ ಹೇಳುವಂತೆ ಈ ಗ್ರಹಣಗಳೆಲ್ಲ ಜೀವಿಗಳಮೇಲೆ ಪ್ರಾಣಿಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಆದರೆ ಸಮಷ್ಟಿಯಮೇಲೆ ಮತ್ತು ನಿಗದಿತ ಪ್ರದೇಶದ ಮೇಲೆ ಸ್ವಲ್ಪ ಮಟ್ಟಿನ ಪ್ರಭಾವ ಬೀರುತ್ತವೆ ಎನ್ನುವ ಅಭಿಪ್ರಾಯ ದೊರಕುತ್ತದೆ. ಆದುದರಿಂದಲೆ ಗ್ರಹಣ ಗೋಚರವಾಗುವ ಪ್ರದೇಶಕ್ಕೆ ಅದರ ಪ್ರಭಾವವೇ ಹೊರತು ಇಡೀ ವಿಶ್ವಕ್ಕಲ್ಲ. ಅದೇನೇ ಇರಲಿ. ಯಾವುದೇ ಭಯವಿಲ್ಲದೇ ಗ್ರಹಣವನ್ನು ಅಸ್ವಾದಿಸೋಣ. ಸೂರ್ಯನ ಜೊತೆಗೆ ಚಂದ್ರ ರಾಹುವಿದ್ದು ಕೇತು ಏಳನೇ ಮನೆಯಲ್ಲಿದ್ದಾಗ ಈ ಗ್ರಹಣ ಸಂಭವಿಸುತ್ತಿದೆ. ಆದುದರಿಂದ ಇವೆಲ್ಲಾ ಪ್ರಕೃತಿಯ ವಿಸ್ಮಯಗಳು. ಜೊತೆಗೆ ಪವಿತ್ರ ದಿನ ಎಂದು ಭಾವಿಸೋಣ. ಇಂದು ಸೂರ್ಯೋಪಾಸನೆಗೆ ಮಹತವದ ದಿನ. ಅದಕ್ಕಾಗಿಯೇ ಸೂರ್ಯನ ಕುರಿತಾಗಿ . . . .
ಕಣ್ವ ಋಗ್ವೇದದಲ್ಲಿ ಸಿಗುವ ಪ್ರಮುಖ ಋಷಿಗಳಲ್ಲಿ ಒಬ್ಬರು. ಖಗೋಲ ವಿಜ್ಞಾನದ ಕುರಿತಾಗಿಯೆ ಹೆಚ್ಚು ಅಧ್ಯಯನ ಮಾಡಿದ್ದರು. ಪ್ರಮುಖವಾಗಿ ಸೂರ್ಯನ ಕುರಿತಾಗಿ ಅವರ ಆಸಕ್ತಿ ಕಾಣಿಸಿಕೊಳ್ಳುತ್ತದೆ. ಅವರ ಮಗನೇ ಪ್ರಸ್ಕಣ್ವ. ಪ್ರಸ್ಕಣ್ವನ ಕುರಿತಾಗಿ ಋಗ್ವೇದ ಒಂದನೇ ಮಂಡಲದ ನಲವತ್ತನಾಲ್ಕನೇ ಸೂಕ್ತದಲ್ಲಿ ಹೇಳಲಾಗಿದೆ. ಪ್ರಸ್ಕಣ್ವನ ತಂದೆ ಕಣ್ವ ಋಷಿಯು ಋಗ್ವೇದದ ೯೭ ಋಕ್ಕುಗಳಿಗೆ ಋಷಿಯಾಗಿ ಸಿಗುತ್ತಾರೆ. ಅತ್ಯಂತ ಪ್ರಾಚೀನ ಮತ್ತು ಅತ್ಯಂತ ಪ್ರಸಿದ್ಧ ಋಷಿಗಳಲ್ಲಿ ಪ್ರಮುಖರು. ಋಗ್ವೇದದ ಎಂಟನೇ ಮಂಡಲದಲ್ಲಿರುವ ಎಲ್ಲಾ ಸೂಕ್ತಗಳಿಗೆ ಕಣ್ವ ಮತ್ತು ಇವರ ವಂಶೀಯರೇ ಋಷಿಗಳಾಗಿದ್ದಾರೆ. ಈ ಕಣ್ವರ ವಂಶೀಯರಲ್ಲಿಯೇ ಪ್ರಸ್ಕಣ್ವ ವಿಶೇಷವಾಗಿ ಕಾಣಿಸಿಕೊಳ್ಳುತ್ತಾನೆ. ಅದಕ್ಕೆ ಕಾರಣವಿದೆ ಆತ ಸೂರ್ಯನ ಕುರಿತಾಗಿ ಎಲ್ಲಾ ಕಡೆಯೂ ಪ್ರಾರ್ಥಿಸಿ ಆತನ ಶಕ್ತಿಯನ್ನು ಹೊಗಳುತ್ತಾನೆ. ಈತ ಸೂರ್ಯನೇ ಜಗತ್ತಿನ ಜನರಿಗೆ ಬರುವ ರೋಗಗಳನ್ನು ನಿವಾರಣೆ ಮಾಡುವ ಶಕ್ತಿಯುಳ್ಳವ ಎನ್ನುತ್ತಾನೆ.
ಈ ಪ್ರಸ್ಕಣ್ವನೇ ವ್ಯಾಧಿಗಳಿಂದ ಬಳಲುತ್ತಿದ್ದ ಎನ್ನುವುದು ಆತನ ಅನೇಕ ಋಕ್ಕುಗಳಿಂದ ತಿಳಿದು ಬರುತ್ತದೆ.
ಉದ್ಯನ್ನದ್ಯ ಮಿತ್ರಮಹ ಆರೋಹನ್ನುತ್ತರಾಂ ದಿವಂ |
ಹೃದ್ರೋಗಂ ಮಮ ಸೂರ್ಯ ಹರಿಮಾಣಂ ಚ ನಾಶಯ ||
ಹೇ ಸೂರ್ಯದೇವ, ನೀನು ಈ ಜಗತ್ತಿನ ಅನುಕೂಲವಾಗಿರತಕ್ಕ ತೇಜಸ್ಸಿನಿಂದ ಕೂಡಿದ್ದಿಯೇ. ಸಕಲ ಚರಾಚರ ಜೀವ ಜಂತುಗಳಿಗೂ ಎಲ್ಲವಕ್ಕೂ ಪ್ರೇರಕನಾಗಿ ಚೈತನ್ಯವನ್ನು ತುಂಬುವವನಾಗಿದ್ದಿಯೇ, ಈಗ ಉದಯಿಸಿ ಅತ್ಯಂತ ಎತ್ತರದಲ್ಲಿರುವ ಅಂತರಿಕ್ಷವನ್ನು ಹತ್ತುತ್ತಾ ನನ್ನ ಹೃದಯಸಂಬಂಧೀ ರೋಗ(ಹೃದಯದಲ್ಲಿನ ಆಂತರಿಕವಾದ ರೋಗ) ಮತ್ತು ನನ್ನ ಕಾಮಾಲೆ ಅಥವಾ ಹಳದಿ ಬಣ್ಣದ ಚರ್ಮವ್ಯಾದಿಯನ್ನು ಗುಣಪಡಿಸು ಎನ್ನುವುದು ಪ್ರಸ್ಕಣ್ವ ಋಷಿಯ ನಿವೇದನೆ. ಅಂದರೆ ಆತ ಈ ಎರಡು ವಿಧದ ರೋಗದಿಂದ ಪೀಡಿತನಾಗಿ ಅದನ್ನು ಗುಣಪಡಿಸುವಂತೆ ಬೇಡಿಕೊಳ್ಳುತ್ತಾನೆ. ಇಂದಿಗೂ ಸಹ
ಈ ಋಕ್ಕನ್ನು ರೋಗದ ಶಾಂತಿಗಾಗಿ ಅಂದರೆ ರೋಗ ಉಲ್ಬಣಿಸದಂತೆ ಪಠಿಸಬೇಕಂತೆ. ಉದ್ಯನ್ನದ್ಯ ಎನ್ನುವ ಈ ಋಕ್ಕು ಪ್ರಸ್ಕಣ್ವನ ಚರ್ಮ ಸಂಬಂಧೀ ರೋಗವನ್ನು ನಿವಾರಿಸುವ ಕುರಿತು ಆತ ಸೂರ್ಯನಲ್ಲಿ ಬೇಡಿಕೊಳ್ಳುವ ಕುರಿತಾಗಿದೆ. ಅದನ್ನೇ "ಉದ್ಯನ್ನದ್ಯ ಮಿತ್ರಮಹ" ಅಂದರೆ ಈಗತಾನೇ ಉದಯಿಸುತ್ತಿರುವ ಸೂರ್ಯನು ಆರೋಹನ್ ಉತ್ತರಾಂ ದಿವಂ ಅಂದರೆ ಆಮೇಲೆ ಅತ್ಯಂತ ಎತ್ತರಕ್ಕೆ ಏರಿ ಹೋಗುತ್ತಾನೆ. ಎಂದು "ಮಿತ್ರಮಹ" ಎನ್ನುವುದು ಸೂರ್ಯನಿಗೆ. ಅಂದರೆ ಅನುಕೂಲವಾದ ಮತ್ತು ಅತ್ಯವಶ್ಯವಾದ ಕಾಂತಿಯಿಂದ ಕೂಡಿರುವವನು ಎನ್ನುವುದನ್ನು ಸೂಚಿಸುತ್ತದೆ. "ಹೃದ್ರೋಗಂ" ಎನ್ನುವುದು ಹೃದಯದ ಸಂಬಂಧವಾದ ರೋಗವನ್ನು ಕುರಿತಾಗಿ ಹೇಳಲಾಗಿದೆ. "ಹರಿಮಾಣಂ" ಎನ್ನುವುದು ಬಾಹ್ಯ ಶರೀರದ ಚರ್ಮವು ಹಳದೀ ಬಣ್ಣಕ್ಕೆ ತಿರುಗಿ ಉಂಟಾಗುವ ಚರ್ಮವ್ಯಾದಿ ಅಥವಾ ತೊನ್ನು ಎನ್ನುವ ಕಾಯಿಲೆಯನ್ನು ಸೂಚಿಸುತ್ತದೆ. ಈ ಎರಡೂ ಕಾಯಿಲೆಗಳಿಗೆ ಸೂರ್ಯನ ಕಿರಣಗಳಿಂದ ಸಿಗುವ ವಿಟಮಿನ್ಗಳು ಬೇಕಂತೆ.
ಶುಕೇಷು ಮೇ ಹರಿಮಾಣಂ ರೋಪಣಾಕಾಸು ದಧ್ಮಸಿ |
ಅಥೋ ಹಾರಿದ್ರವೇಷು ಮೇ ಹರಿಮಾಣಂ ನಿ ದಧ್ಮಸಿ ||
ಈ ಋಕ್ಕಿನಲ್ಲಿ ಪರಿಹಾರವನ್ನೂ ಸೂಚಿಸಿದ್ದಾನೆ. ನನಗೆ ಈ ಹಳದಿ ಬಣ್ಣದ ದೇಹ ಬೇಡ ಇದು ನನಗೆ ಅನವಶ್ಯಕ ಇದು ಅವಶ್ಯಕತೆ ಇರುವುದು ಗಿಳಿಗಳಿಗೆ. ಅವುಗಳಿಗೆ ಹಸಿರು ಬಣ್ಣದ ಜೊತೆಗೆ ಹಳದಿಯೂ ಇದೆ, ಅದಿಲ್ಲವಾದರೆ "ಹಾರಿದ್ರವೇಷು" ಅಂದರೆ ಹರಿತಾಳ ವೃಕ್ಷ ಅಥವಾ ಯಾವುದೋ ಒಂದು ಹಳದಿ ಬಣ್ಣದ ಎಲೆ ಹೊಂದಿರುವ ಮರದಲ್ಲಿ ಇಡು ಇದನ್ನು ತೊಲಗಿಸು ಎನ್ನುತ್ತಾನೆ. ಹೀಗೆ ಇಟ್ಟಲ್ಲಿ ನನ್ನ ರೋಗ ಸುಲಭವಾಗಿ ಗುಣವಾಗುತ್ತದೆ ಎನ್ನುತ್ತಾನೆ. ಅಂದರೆ ಸೂರ್ಯನ ಶಕ್ತಿಯನ್ನು ತಿಳಿಸುತ್ತಾನೆ.
೪೭೩ನೇ ಇಸವಿಯಲ್ಲಿ ವತ್ಸಭಟ್ಟಿಯು ಒಂದು ಶಾಸನವನ್ನು ಮಾಂಡಸೋರ(ಮಂದಸೋರ್)ಮಾಂದೇಶ್ವರ, ಅಥವಾ ದಶಪುರ ಎಂದು ಕರೆಯಲ್ಪಡುವ ಊರಿನ ಸೂರ್ಯದೇವಾಲಯದಲ್ಲಿ ಸೂರ್ಯನ ಧ್ಯಾನವನ್ನು ಬಳಸಿಕೊಂಡು ಶಾಸನವನ್ನು ಬರೆಯುತ್ತಾನೆ. ಮೊದಲಿಗೆ ಭಾಸ್ಕರನನ್ನು ನೆನೆದು ಎರಡನೇ ಶ್ಲೋಕದಲ್ಲಿ ಸವಿತ್ರನನ್ನೂ ಮೂರನೆಯದ್ದರಲ್ಲಿ ವಿವಸ್ವಾನ್ ಎಂದು ಬಳಸಿ ಶಾಸನವನ್ನು ಆರಂಭಿಸಿ ಕಾಳಿದಾಸನ ಕಾವ್ಯದ ಶೈಲಿಯಲ್ಲಿ ಶಾಸನವನ್ನು ಕೊಡುತ್ತಾನೆ.
ಈ ಶಾಸನದಲ್ಲಿ ವರಾಹಮಿಹಿರನ ಬೃಹತ್ಸಂಹಿತೆಯ ಅಂಶಗಳನ್ನು ಮತ್ತು ಕಾಳಿದಾಸನ ಮೇಘದೂತದ ಶ್ಲೋಕಗಳ ಶೈಲಿಯನ್ನು ಬಳಸಿಕೊಂಡಿರುವುದು ಕಂಡು ಬರುತ್ತದೆ. ಸಾಹಿತ್ಯದ ಅಭ್ಯಾಸಿಗಳಿಗೆ ಸಿಗುವ ಕೆಲವು ಶಾಸನಗಳಲ್ಲಿ ಇದೂ ಸಹ ಒಂದು. ಸೂರ್ಯಗ್ರಹಣದ ಈ ಪರ್ವದಿನದಲ್ಲಿ ಸೂರ್ಯನನ್ನು ನೆನೆಯೋಣ.
ಶಾಸನ ಪಾಠ :
ಯೋಧೃತ್ಯಾರ್ಥಮುಪಾಸ್ಯತೇ ಸುರಗಣೈಸಿದ್ಧೈಶ್ಚ ಸಿದ್ಧ್ಯರ್ತ್ಥಿಭಿರ್ಧ್ಯಾನೈಕಾಗ್ರ ಪರೈರ್ವ್ವಿಧೇಯವಿಷಯೈರ್ಮೋಕ್ಷಾರ್ತ್ಥಿಭಿರ್ಯೋಗಿಭಿಃ |
ಭಕ್ತ್ಯಾ ತೀವ್ರ ತಪೋಧನೈಶ್ಚ ಮುನಿಭಿಶ್ಶಾಪ ಪ್ರಸಾದ ಕ್ಷಮೈರ್ಹೇತುರ್ಯೋಜಗತಕ್ಷಯಾಭ್ಯುಯಯೋಱ್ಪಾಯಾತ್ಸವೋಭಾಸ್ಕರಃ ||
ತತ್ವ ಜ್ಞಾನವಿದೋಪಿ ಯಸ್ಯ ನ ವಿದುರ್ಬ್ರಹ್ಮರ್ಷಯೋಭ್ಯುದಯತಾಕೃತ್ಸ್ನಂಯಶ್ಚ ಗಭಸ್ತಿಭಿಃ ಪ್ರವಿಶೃತೈಃ ಪುಷ್ಣಾತಿ ಲೋಕತ್ರಯಂ |
ಗಂಧರ್ವ್ವಾಮರ ಸಿದ್ಧ ಕಿನ್ನರ ನರೈ ಸಂಸ್ತೂಯತೇ ಭ್ಯುತ್ಥಿತೋ ಭಕ್ತೇಭ್ಯಶ್ಚ ದದಾತಿ ಯೋಭಿಲಷಿತಂ ತಸ್ಮೈ ಸವಿತ್ರೇ ನಮಃ ||
ಯಱ್ಪ್ರತ್ಯಹಂ ಪ್ರತಿವಿಭಾತ್ಯುದಯಾಚಲೇನ್ದ್ರವಿಸ್ತೀರ್ಣ್ಣ ತುಙ್ಗಶಿಖರ ಸ್ಖಲಿತಾಂಶು ಜಾಲಃ |
ಕ್ಷೀಬಾಂಗನಾ ಜನ ಕಪೋಲ ತಲಾಭಿತಾಮ್ರಃ ಪಾಯಾತ್ಸವಸ್ಸುಕಿರಣಾಭರಣೋ ವಿವಸ್ವಾನ್ ||
#ತಸ್ಮೈ_ಸವಿತ್ರೇ_ನಮಃ
- FOR ADVERTISEMENT CKNTACT -
- 9902523698 -

Social Plugin