ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘದ ವತಿಯಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಬಕವಿ-ಬನಹಟ್ಟಿ ತಹಶೀಲ್ದಾರ ಪ್ರಶಾಂತ ಚನಗೊಂಡ ಅವರಿಗೆ ಮನವಿ ಅರ್ಪಿಸಿದರು.
ನೇಕಾರರ ಪರವಾಗಿ ಸರಕಾರಗಳು ನಿಲ್ಲಬೇಕು
* ವಿವಿಧ ಬೇಡಿಕೆಗೆ ಆಗ್ರಹಿಸಿ ಮನವಿ ಅರ್ಪಿಸಿದ ನೇಕಾರ ಮುಖಂಡರು. 
ರಬಕವಿ-ಬನಹಟ್ಟಿ,ಜೂ11:  ಸರಕಾರಗಳು ತರಾತುರಿಯಲ್ಲಿ ನೇಕಾರ ಸಮ್ಮಾನ ಯೋಜನೆ ರೈತರಂತೆ ನೇಕಾರರು ಎಂದು ಕಣ್ಣೋರೆಸುವ ತಂತ್ರಗಳನ್ನು ಮಾಡುವುದಕ್ಕಿಂತ ಕಾರ್ಮಿಕ ಸೌಲಭ್ಯಗಳನ್ನು ಜಾರಿಮಾಡಿ, ಔದ್ಯೋಗಿಕ, ಆರ್ಥಿಕ, ಶೈಕ್ಷಣೀಕ, ಆರೋಗ್ಯದ ಹಾಗೂ ಸಾಮಾಜಿಕ ಬೆಳವಣಿಗೆಗೆ ನೇಕಾರರ ಪರವಾಗಿ ಸರಕಾರಗಳು ನಿಲ್ಲಬೇಕು. ಅಂದಾಗ ನೇಕಾರರು ಮತ್ತು ನೇಕಾರಿಕೆ ಉಳಿಯಲು ಸಾಧ್ಯ. ಇಲ್ಲವಾದರೆ ನಶಿಸಿ ಹೋಗುವುದು ಖಚಿತ ಎಂದು ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಹೇಳಿದರು.
ಅವರು ಬುಧವಾರ ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘದ ವತಿಯಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಬಕವಿ-ಬನಹಟ್ಟಿ ತಹಶೀಲ್ದಾರ ಪ್ರಶಾಂತ ಚನಗೊಂಡ ಅವರಿಗೆ ಮನವಿ ಅರ್ಪಿಸಿ ಮಾತನಾಡಿದರು.  ಶ್ರಮಕ್ಕೆ ತಕ್ಕ ಪ್ರತಿಫಲ ಅಥವಾ ಅವನ ಬದುಕನ್ನು ಕಟ್ಟಿಕೊಳ್ಳಲು ನಮ್ಮನ್ನು ಸ್ವಂತ್ರವಾಗಿ ಬಿಟ್ಟು ಬಿಡಬೇಕು. ನಿಮ್ಮ ರಾಜಕೀಯ ಭವಿಷ್ಯಕ್ಕಾಗಿ ಆಸೆ-ಆಮೀಷಗಳನ್ನು ಒಡ್ಡಿ,  ವೃತ್ತಿಪರ ನೇಕಾರರು ಉದ್ಯೋಗವನ್ನು ತೊರೆದು ಗುಳೆ ಹೋಗಿ ಬೇರೆ ಉದ್ಯೋಗಗಳತ್ತ ಮುಖ ಮಾಡುತ್ತಿದ್ದಾರೆ.  ಇತ್ತೀಚಿನ ವೈಪರಿತ್ಯಗಳಿಂದ ಮಾರುಕಟ್ಟೆ ಸ್ಥಬ್ಧವಾಗಿರುವುದರಿಂದ ಇನ್ನೂ ವರ್ಷಾರು ತಿಂಗಳು ಉದ್ಯೋಗ ನಡೆಯದ ಸ್ಥಿತಿ ನಿರ್ಮಾಣವಾಗಿದೆ. ಇಲಾಖೆಗಳಿಂದ ಸಿಗದ ಖಚಿತ ಮಾಹಿತಿ, ಸೌಲಭ್ಯಗಳು, ಸಂಪರ್ಕ ಕೊರತೆಯಿಂದ ಕಟ್ಟಕಡೆಯ ನೇಕಾರರು ಸೌಲಭ್ಯಗಳಿಂದ ವಂಚಿತರಾಗಿದ್ದು ಇದಕ್ಕೊಂದು ಅಂತ್ಯ ಕಾಣಿಸಲು ಸರಕಾರಗಳು ದಿಟ್ಟ ಹೆಜ್ಜೆ  ಇಡಬೇಕಾಗಿದೆ ಇಲ್ಲವಾದಲ್ಲಿ ಹೋರಾಟಗಳು ಅನಿವಾರ್ಯ. ವೃತ್ತಿಪರ ಹಾಗೂ ಕೂಲಿ ಕಾರ್ಮಿಕರರ ಶ್ರೇಯೋಭಿವೃದ್ಧಿಗಾಗಿ ನಮ್ಮ ಹಕ್ಕೋತ್ತಾಯಗಳನ್ನು ಈಡೇರಿಸಬೇಕೆಂದು ಆಗ್ರಹಿಸುತ್ತೇವೆ ಎಂದರು. 
ಈ ಸಂದರ್ಭದಲ್ಲಿ ಸಿಪಿಐ ಜೆ. ಕರುಣೇಶಗೌಡ, ಪಿಎಸ್‍ಐ ರವಿಕುಮಾರ ಧರ್ಮಟ್ಟಿ, ನೇಕಾರರಾದ ಚನ್ನಪ್ಪ ಹುಣಶ್ಯಾಳ, ಭರತ ಕದ್ದಿಮನಿ, ಎಸ್. ಎಸ್. ಉದಗಟ್ಟಿ, ಎ. ಕೆ. ಯಂಕಂಚಿ, ಎಂ. ಸಿ. ಶಿರೋಳ, ಆ ಎಂ. ಘಟ್ನಟ್ಟಿ, ಎಸ್. ಬಿ. ಅಥಣಿ, ಎಂ. ಐ. ಮುರಗುಂಡಿ, ಆರ್. ಎಂ. ನಾಗರಾಳ, ಆರ್. ಆಯ್. ಶಿರೋಳ, ಈಶ್ವರ ಸೋರಗಾಂವಿ ಸೇರಿದಂತೆ ಅನೇಕರು ಇದ್ದರು. 


- FOR ADVERTISEMENTS  CONTACT -
                 9902523698