ರಬಕವಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಡಾ. ಪದ್ಮಜೀತ ನಾಡಗೌಡಾ ಪಾಟೀಲ ಮಾತನಾಡಿದರು.
ನಮ್ಮ ಸೇವೆ ಶಾಸಕರ ಸರ್ಟಿಫಿಕೇಟ್ ಬೇಕಿಲ್ಲ
ರಬಕವಿ-ಬನಹಟ್ಟಿ,ಜೂ11: ಕೊರೊನಾ ಸಂದರ್ಭ ತೇರದಾಳ ವಿಧಾನಸಭಾ ಕ್ಷೇತ್ರಾದ್ಯಂತ 50 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ತರಕಾರಿ ಕಿಟ್‍ಗಳ ಜೊತೆಗೆ ಇತರೆ ಉಪಯುಕ್ತ ಸಾಮಗ್ರಿಗಳನ್ನು ಒದಗಿಸುವ ಮೂಲಕ ಜನಸೇವೆಗೆ ಪಾತ್ರರಾಗಿದ್ದೇವೆ. ತ್ಯುಚ್ಯವಾಗಿ ಮಾತನಾಡಿ ಅವಹೇಳನಕಾರಿಯಾಗಿ ಸೇವೆ ವಿರುದ್ಧ ಮಾತನಾಡಿರುವದು ತುಂಬಾ ನೋವಾಗಿದೆ. ನಮ್ಮ ಸೇವೆಗೆ ಶಾಸಕರ ಸರ್ಟಿಫಿಕೇಟ್ ಬೇಕಿಲ್ಲವೆಂದು ಶಾಸಕ ಸಿದ್ದು ಸವದಿ ವಿರುದ್ಧ ಕಾಂಗ್ರೆಸ್ ಮುಖಂಡ ಡಾ. ಪದ್ಮಜೀತ ನಾಡಗೌಡಾ ಪಾಟೀಲ ಹರಿಹಾಯ್ದರು.
ರಬಕವಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಡವರ ಪರವಾಗಿರುವ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಆದೇಶದ ಮೆರೆಗೆ ಮುಂದಾಳತ್ವ ವಹಿಸಿ ಇಡೀ ಕ್ಷೇತ್ರದ ಕುಟುಂಬಗಳಿಗೆ ತರಕಾರಿ ಕಿಟ್ ವಿತರಿಸುವ ಮೂಲಕ ರೈತರ ಹಾಗು ಬಡಕುಟುಂಬಗಳಿಗೆ ಸಹಕಾರಿಯಾಗುವಲ್ಲಿ ನೆಮ್ಮದಿ ತಂದಿದೆ. ಇದನ್ನೇ ರಾಜಕೀಯ ಬಂಡವಾಳವಾಗಿಸಿಕೊಂಡು ಕ್ಷುಲ್ಲಕವಾಗಿ ಮಾತನಾಡಿರುವದು ಶಾಸಕ ಸ್ಥಾನಕ್ಕೆ ಶೋಭೆ ತರುವಂಥದಲ್ಲವೆಂದು ನಾಡಗೌಡ ಪಾಟೀಲ ಹೇಳಿದರು.
ಶಂಕರ ಸೊರಗಾಂವಿ ಮಾತನಾಡಿ, ಕೈಮಗ್ಗ ಮನೆ ಸಾಲ ಮನ್ನಾ ಮಾಡಿದ್ದು ಮಾಜಿ ಸಚಿವೆ ಉಮಾಶ್ರೀಯವರ ಆಡಳಿತಾವಧಿಯಲ್ಲಿ, ನಗರಸಭೆಯಲ್ಲಿರುವ 47 ಲಕ್ಷ ರೂ.ಗೆ ಸಂಬಂಧ ಕೈಮಗ್ಗ ನೇಕಾರರ ಪರವಾಗಿದ್ದು, ಟೆಂಡರ್ ನಿಯಮ ಮುರಿದು ಪ್ರಕ್ರಿಯೆ ನಡೆಸಿದ್ದರ ವಿರುದ್ಧ ಉಮಾಶ್ರೀಯವರ ಹೋರಾಟಕ್ಕೆ ಹತಾಶೆಯಿಂದ ಏಕವಚನದ ಪದ ಪ್ರಯೋಗ ಹಾಗು ನೇಕಾರರಿಗೆ ತೀವ್ರ ನೋವುಂಟಾಗಿದೆ. ತಕ್ಷಣವೇ ಸವದಿ ಕ್ಷಮೆಯಾಚಿಸದಿದ್ದಲ್ಲಿ ರಾಜ್ಯಾದ್ಯಂತ ನೇಕಾರ ಸಮುದಾಯ ಹೋರಾಟ ನಡೆಸಲಿದೆ ಎಂದರು.
ಇದೇ ಸಂದರ್ಭ ನೀಲಕಂಠ ಮುತ್ತೂರ, ಚಿದಾನಂದ ಗಾಳಿ, ಮಾಳು ಹಿಪ್ಪರಗಿ, ರವಿ ಬಾಡಗಿ, ಮೊಹ್ಮದ್ ಝಾರೆ, ರವಿ ಬಾಡಗಿ, ಚಿದಾನಂದ ಮಟ್ಟಿಕಲ್ಲಿ, ರಾಜು ಶಾಸ್ತ್ರಿಗೊಲ್ಲರ, ಓಂಪ್ರಕಾಶ ಮನಗೂಳಿ, ಕುಮಾರ ಬಿಳ್ಳೂರ, ಗಂಗಪ್ಪ ಮಂಟೂರ, ಸಂಜಯ ಅಮ್ಮಣಗಿ ಸೇರಿದಂತೆ ಅನೇಕರಿದ್ದರು.
- FOR ADVERTISEMENT CONTACT -
9902523698

Social Plugin