ಬನಹಟ್ಟಿಯಲ್ಲಿ ಕಾಂಗ್ರೆಸ್ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿರುವದು.
ಬೇಷರತ್ ಕ್ಷಮೆಯಾಚಿಸದಿದ್ದಲ್ಲಿ ಉಗ್ರ ಹೋರಾಟ
ರಬಕವಿ-ಬನಹಟ್ಟಿ,ಜೂ11: ಕೈಮಗ್ಗ ನೇಕಾರರಿಗೆ ಸಂಬಂಧ ಟೆಂಡರ್‍ನ್ನು ಪಾರದರ್ಶಕವಾಗಿರಬೇಕೆಂದು ಒತ್ತಾಯಿಸಿ ಹೋರಾಟ ನಡೆಸುತ್ತಿರುವ ನೇಕಾರ ಏಳ್ಗೆಗೆ ಶ್ರಮಿಸುತ್ತರುವ ಮಾಜಿ ಸಚಿವೆ ಉಮಾಶ್ರೀ ವಿರುದ್ಧ ತೇರದಾಳ ಶಾಸಕ ಸಿದ್ದು ಸವದಿ ಕೀಳುಮಟ್ಟದ ಪದಬಳಕೆ ಮಾಡಿ ಏಕವಚನ ಪ್ರಯೋಗಿಸಿದ್ದು ನೇಕಾರ ಸಮೂಹ ಹಾಗು ಕಾಂಗ್ರೆಸ್ ಪಕ್ಷಕ್ಕೆ ತುಂಬಾ ನೋವುಂಟು ಮಾಡಿದೆ. ತಕ್ಷಣವೇ ಬೇಷರತ್ ಕ್ಷಮೆಯಾಚಿಸದಿದ್ದಲ್ಲಿ ಕ್ಷೇತ್ರಾದ್ಯಂತ ಉಗ್ರ ಹೋರಾಟ ನಡೆಸಲಾಗುವದೆಂದು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜು ಭದ್ರನ್ನವರ ಹೇಳಿದರು.
ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಬಕವಿ-ಬನಹಟ್ಟಿ ನಗರಸಭೆಯಲ್ಲಿ ಕೈಮಗ್ಗ ನೇಕಾರರ ಸಲುವಾಗಿ ಮೀಸಲಿಟ್ಟಿದ್ದ 47 ಲಕ್ಷ ರೂ.ಗಳನ್ನು ಜಿಲ್ಲಾಧಿಕಾರಿಗಳ ನಿಯಮ ಗಾಳಿಗೆ ತೂರಿ ಮನಬಂದಂತೆ ಟೆಂಡರ್ ಕರೆಯಲಾಗಿತ್ತು. ಸದ್ಯ ತಿದ್ದುಪಡೆಗೊಳಿಸಿ ಕೈಮಗ್ಗ ನೇಕಾರರು ಇರುವ ಕುಟುಂಬಗಳನ್ನು ಮಾತ್ರ ಗುರ್ತಿಸಿ ಅಂಥವರಿಗೆ ಆಹಾ ಕಿಟ್ ವಿತರಣೆಗೆ ಟೆಂಡರ್ ಕರೆದಿರುವದು ಸ್ವಾಗತಾರ್ಹ. ಅಧಿಕಾರಿಗಳು ಮಾಜಿ ಸಚಿವೆ ಉಮಾಶ್ರೀಯವರ ಆಗ್ರಹಕ್ಕೆ ಮಣಿದು ತಿದ್ದುಪಡಿ ಟೆಂಡರ್ ದಿನಾಂಕ ವಿಸ್ತರಣೆ ಮಾಡಿದ್ದಾರೆ. ಶಾಸಕ ಸಿದ್ದು ಸವದಿ ಹತಾಶೆ ಭಾವನೆಯಲ್ಲಿ ವಿನಾಕಾರಣ ಮಾಜಿ ಸಚಿವರ ಮೇಲೆ ಏಕವಚನ ಪ್ರಯೋಗಿಸಿ ಅಸಹ್ಯಕರ ಮಾತುಗಳನ್ನಾಡಿರುವದು ಮುಜುಗರ ತರುವಂಥದ್ದು ಎಂದರು.
ಎಲ್ಲ ನೇಕಾರರಿಗೂ ದೊರಕಲಿ: ಆಹಾರ ಕಿಟ್ ವಿತರಣೆಯಲ್ಲಿರುವ ಶಾಸಕ ಸಿದ್ದು ಸವದಿ ಎಲ್ಲ ವರ್ಗಗಳ ನೇಕಾರರಿಗೆ ಹಂಚಿಕೆ ಮಾಡಲಿ ಅದಕ್ಕೆ ನಮ್ಮ ಬೆಂಬಲವೂ ಇದೆ. ಯಾವದೇ ಆದೇಶವಿಲ್ಲದೆ ಕೈಮಗ್ಗ ನೇಕಾರರಿಗೆ ಮೀಸಲಿಟ್ಟ ಹಣವನ್ನು ವಿನಾಕಾರಣ ಪೋಲು ಮಾಡುವದು ಸರಿಯಲ್ಲ. ಬದಲಾಗಿ ನೇಕಾರ ವಿರೋಧಿಯಾಗಿ ಅಡ್ಡಿಯಾಗುತ್ತಿದ್ದೇವೆಂದು ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಿರುವದು ಸರಿಯಲ್ಲವೆಂದರು.
ಇದೇ ಸಂದರ್ಭ ತೇರದಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಗ್ರಾಮೀಣ ಅಧ್ಯಕ್ಷ ಲಕ್ಷ್ಮಣ ದೇಸಾರಟ್ಟಿ, ಮಲ್ಲಪ್ಪ ಭಾವಿಕಟ್ಟಿ, ಈಶ್ವರ ಚಮಕೇರಿ, ಶಂಕರ ಜಾಲಿಗಿಡದ, ಬಸವರಾಜ ಬೀಳಗಿ, ಸದಾಶಿವ ಗೊಂದಕರ, ನಶೀಂ ಮೊಕಾಶಿ, ರಾಜು ಶಾಸ್ತ್ರಿಗೊಲ್ಲರ, ರಾಹುಲ್ ಕಲಾಲ, ನಾರಾಯಣ ನಿಕ್ಕಂ, ಬಸು ಗುಡ್ಡೋಡಗಿ, ಓಂಪ್ರಕಾಶ ಮನಗೂಳಿ, ಪಿಂಟು ಕುಂಬಾರ, ಕಿರಣ ಕರಲಟ್ಟಿ ಉಪಸ್ಥಿತರಿದ್ದರು.


- FOR ADVERTISEMENT CONTACT 
                  9902523698