ಬನಹಟ್ಟಿಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ. ಎಂ.ಎಸ್. ದಡ್ಡೇನವರ ಮಾತನಾಡಿದರು.
ನೇಕಾರ ಸಮುದಾಯಕ್ಕೆ ನ್ಯಾಯ ಒದಗಿಸಿದ್ದೇನೆ
ರಬಕವಿ-ಬನಹಟ್ಟಿ,ಜೂ29: ಬಾಗಲಕೋಟೆ ಜಿಲ್ಲೆಯ ಬಹುಸಂಖ್ಯಾತ ಸಮುದಾಯವಾಗಿರುವ ನೇಕಾರರ ಏಳ್ಗೆಗೆ ಆರ್ಥಿಕ ಸಹಾಯ ಮಾಡುವಲ್ಲಿ ಬಿಡಿಸಿಸಿ ಬ್ಯಾಂಕ್ ಸನ್ನದ್ಧವಾಗಲು ಹಗಲಿರುಳು ಶ್ರಮಿಸಿದ್ದೇನೆ. ಈ ಬಾರಿ ಮತ್ತೊಮ್ಮೆ ಸ್ಪರ್ಧೆಗೆ ಅವಕಾಶ ಕಲ್ಪಿಸಬೇಕೆಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ. ಎಂ.ಎಸ್. ದಡ್ಡೇನವರ ತಿಳಿಸಿದರು.
ನಗರದ ನೇಕಾರ ಅಶೋಸಿಯನ್‍ಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿಯೇ ಏಕೈಕ ಜಿಲ್ಲೆಯಾಗಿ ಬಾಗಲಕೋಟೆಯಲ್ಲಿನ ನೇಕಾರ ಸಮುದಾಯಕ್ಕೆ ಶೇ.1 ಮತ್ತು ಶೇ.3 ಬಡ್ಡಿ ಆಕರಣೆಯಲ್ಲಿ ಸುಲಭ ಸಾಲ ದೊರಕುವಲ್ಲಿ ಯೋಜನೆ ರೂಪಿಸುವಲ್ಲಿನ ಹೋರಾಟ ನನ್ನದಾಗಿ, ನಿರ್ಲಕ್ಷ್ಯಕ್ಕೊಳಗಾದ ನೇಕಾರ ಸಮುದಾಯವನ್ನು ಆರ್ಥಿಕವಾಗಿ ಸಬಲೀಕರಣ ಮಾಡುವಲ್ಲಿ ಬಿಡಿಸಿಸಿ ಬ್ಯಾಂಕ್‍ನ ಕಾರ್ಯ ಹಿರಿದು ಎಂದರು. ಬರುವ ಚುನಾವಣೆಯಲ್ಲಿ ಮತ್ತೊಮ್ಮೆ ನೇಕಾರ ವಿಭಾಗದಿಂದ ಸ್ಪರ್ಧೆಗಿಳಿಯಲಿದ್ದು ತಮ್ಮ ಸಹಕಾರವಿರಲೆಂದರು.
ಇದೇ ಸಂದರ್ಭ ಚಂದ್ರಶೇಖರ ಶಿವಪೂಜಿ, ಶ್ರೀಶೈಲ ದಭಾಡಿ, ರಾಮಣ್ಣ ಭದ್ರನ್ನವರ, ಶಂಕರ ಜುಂಜಪ್ಪನವರ, ನಿಜು ಬಾವಲತ್ತಿ, ಶ್ರೀಶೈಲಪ್ಪ ಹಣಗಂಡಿ, ದುಂಡಪ್ಪ ಮಾಚಕನೂರ, ಶಂಕರ ಜಾಲಿಗಿಡದ, ಮಲ್ಲಿಕಾರ್ಜುನ ಬಾಣಕಾರ, ಶಂಕರ ಸೊರಗಾಂವಿ, ವಿಜಯ ಜುಂಜಪ್ಪನವರ, ಓಂಪ್ರಕಾಶ ಕಾಬರಾ, ರಾಜು ಭದ್ರನ್ನವರ, ಚನವೀರಪ್ಪ ಹಾದಿಮನಿ, ಶಂಕರ ಕೆಸರಗೊಪ್ಪ, ಶೇಖರ ಹಕ್ಕಲದಡ್ಡಿ, ಬಸವರಾಜ ಭದ್ರನ್ನವರ, ಬಸವರಾಜ ಗಿಡದಾನಪ್ಪಗೋಳ, ಗಂಗಪ್ಪ ಮಂಟೂರ ಸೇರಿದಂತೆ ರಬಕವಿ-ಬನಹಟ್ಟಿ, ರಾಮಪೂರ, ಹೊಸೂರ, ಹುನ್ನೂರ ಗ್ರಾಮಗಳ ಹಿರಿಯರು ಪಾಲ್ಗೊಂಡಿದ್ದರು.

- ನಿಮ್ಮ ಜಾಹೀರಾತುಗಳಿಗಾಗಿ ಸಂಪರ್ಕಿಸಿ +91 9902523698