ಬನಹಟ್ಟಿ ಎಂ. ಎಂ. ಭದ್ರನ್ನವರ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ನೂತನ ಕಾರ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಪೂಜೆ ಸಲ್ಲಿಸಿ ಮಾತನಾಡುತ್ತಿರುವ ಮಾಜಿ ಸಚಿವೆ ಉಮಾಶ್ರೀ, ಡಾ. ಎ. ಆರ್. ಬೆಳಗಲಿ ಇದ್ದರು. 
ಪಕ್ಷ ಸಂಘಟನೆಗೆ ಎಲ್ಲರೂ ಒಟ್ಟಾಗಿ ಹೋರಾಡಿ-ಉಮಾಶ್ರೀ
ರಬಕವಿ-ಬನಹಟ್ಟಿ,ಜೂ29 ದೇಶದಲ್ಲಿ ಕರೊನಾ ಅಟ್ಟಹಾಸ ಹೇಳ ತೀರದು, ದೇಶದ ಜನತೆಗೆ ಒಳಿತು ಮಾಡಲು ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರು ಒಟ್ಟಾಗಿ ಹೋರಾಡಿ ಜನರ ಕಷ್ಟಕ್ಕೆ ಸ್ಪಂದಿಸೋಣ ಎಂದು ಮಾಜಿ ಸಚಿವೆ, ತೇರದಾಳ ಕ್ಷೇತ್ರದ ಮಾಜಿ ಶಾಸಕಿ ಉಮಾಶ್ರೀ ತಿಳಿಸಿದರು.
ಸೋಮವಾರ ಬೆಳಿಗ್ಗೆ ಬನಹಟ್ಟಿ ಎಂ. ಎಂ. ಭದ್ರನ್ನವರ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ನೂತನ ಕಾರ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಈಗಿನ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು ಪಕ್ಷ ಸಂಘಟನೆಗೆ ಎಲ್ಲರೂ ಮುಂದಾಗಬೇಕು ಎಂದರು.
ಕರೊನಾ ತೀರ ಭಯಾನಕ ರೋಗವಾಗಿದ್ದು, ಇದಕ್ಕೆ ಔಷಧಿ ದೊರಕುವರೆಗೂ ಇದರ ಅಟ್ಟಹಾಸ ನಿಲ್ಲುವುದಿಲ್ಲ. ಸಮಾಜಿಕ ಅಂತರ ಹಾಗೂ ಮಾಸ್ಕಗಳನ್ನು ಕಡ್ಡಾಯವಾಗಿ ಎಲ್ಲರೂ ಧರಿಸಬೇಕು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದೆ ಬರುತ್ತದೆ. ಇಂದಿನ ಟೆಕ್ನಾಲಾಜಿಯನ್ನು ಬಿಜೆಪಿ ಸುಳ್ಳಿಗೆ ಬಳಸಿಕೊಂಡು ಜನರ ಮನಸ್ಸು ಸೆಳೆಯುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಸತ್ಯದ ಅರಿವುಮೂಡಿಸಲು ಇಂದಿನ ತಂತ್ರಜ್ಞಾನವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಯುವ ಸಮುದಾಯವನ್ನು ಎಚ್ಚರಗೊಳಿಸಲಿದೆ. ತೇರದಾಳ ಕ್ಷೇತ್ರದ ಜನತೆಯ ಆಶೀರ್ವಾದಿಂದ ಹಿಂದಿನ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದ್ದಕ್ಕೆ ನಾನು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮುಂಬರುವ ದಿನಗಳಲ್ಲಿ ಜನರು ಮತ್ತೊಮ್ಮೆ ನನಗೆ ಆಶೀರ್ವದಿಸಲಿದ್ದಾರೆ ಎಂದರು.
ಸಮಾರಂಭದಲ್ಲಿ ಮಹಾಲಿಂಗಪುರದ ಡಾ. ಎ. ಆರ್. ಬೆಳಗಲಿ, ಚನ್ನು ದೇಸಾಯಿ, ಬಿ. ಡಿ. ಗುಂಡಾ, ಪ್ರಕಾಶ ಮಮದಾಪುರ ಸೇರಿದಂತೆ ಅನೇಕರು ಮಾತನಾಡಿದರು. ಮುಖಂಡರಾದ ಎಸ್. ಬಿ. ಭಜಂತ್ರಿ, ಬಸವರಾಜ ಕೊಕಟನೂರ, ಲಕ್ಷ್ಮಣ ದೇಸಾರಟ್ಟಿ, ಮಲ್ಲಪ್ಪ ಸಿಂಗಾಡಿ, ಶಂಕರ ಜಾಲಿಗಿಡದ, ರಾಜು ಭದ್ರನ್ನವರ, ಈಶ್ವರ ಚಮಕೇರಿ, ಕಿರಣ ಕರಲಟ್ಟಿ, ರಾಹುಲ ಕಲಾಲ, ಪಿಂಟು ಕುಂಬಾರ, ಸತ್ಯಪ್ಪ ಮಗದುಮ್, ಸಿದ್ದು ಕೊಣ್ಣೂರ, ಜಗದೀಶ ಘಟನಟ್ಟಿ, ಅಬ್ದುಲ್ ಕೊಣ್ಣೂರ, ಸಂಗಮೇಶ ಮಡಿವಾಳ ಸೇರಿದಂತೆ ತೇರದಾಳ ಮತಕ್ಷೇತ್ರ ವ್ಯಾಪ್ತಿಯ ಅನೇಕ ಕಾಂಗ್ರೆಸ್ ಮುಖಂಡರು ಆಗವಿಸಿದ್ದರು.

- ನಿಮ್ಮ ಜಾಹೀರಾತುಗಳಿಗಾಗಿ ಸಂಪರ್ಕಿಸಿ +91 9902523698