ಹೊಸೂರಿನಲ್ಲಿ ನೇಕಾರರಿಗೆ ಆಹಾರ ಧಾನ್ಯದ ಕಿಟ್ ವಿತರಣೆ
ವರದಿ : ಸ್ವರೂಪ ಸಂದರ್ಶನ ನ್ಯೂಜ್, ಮ.ಕೃ.ಮೇಗಾಡಿ

ಹೊಸೂರು : ಕೋವಿಡ್-19 ತನ್ನ ಅಟ್ಟಹಾಸದಿಂದ ವಿಶ್ವದೆಲ್ಲೆಡೆ ತಲ್ಲಣ ಮೂಡಿಸಿರುವ ಈ ಕಠಿಣ ಪರಿಸ್ಥಿತಿಯಲ್ಲಿ ಜನಸಮುದಾಯ ಭಯದಿಂದ ಜೀವನ ನಡೆಸುವಂತಾಗಿದೆ. ಕಿಲ್ಲರ್ ಕೊರೊನಾ ಕಳೆದ ಮೂರು ತಿಂಗಳಿನಿಂದ ಭಿತಿಯನ್ನುಂಟು ಮಾಡಿದೆ. ಅದರಲ್ಲೂ ನೇಕಾರಿಕೆಯನ್ನೇ ಅವಲಂಬಿಸಿದವರು ಮುಂದಿನ ದಾರಿ ಕಾಣದೆ ಕಂಗಾಲಾಗಿರುವ ಈ ಸಂದರ್ಭದಲ್ಲಿ ಹಿರಿಯರು, ಆರ್ಥಿಕವಾಗಿ ಸಬಲರಾದ ಸಹೃದಯಿಗಳು ಕುರುಹಿನಶೆಟ್ಟಿ ಸಮಾಜದ ಬಡನೇಕಾರರಿಗೆ ನೆರವಾಗಲು ನಿರ್ಧರಿಸಿ, ಹಳೇ ಹುಬ್ಬಳ್ಳಿ ಶ್ರೀನೀಲಕಂಠೇಶ್ವರ ಮಠದ ಜಗದ್ಗುರು ಶ್ರೀಶಿವಶಂಕರ ಶಿವಾಚಾರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಹೊಸೂರು ಶ್ರೀನೀಲಕಂಠೇಶ್ವರ ಮಠದಲ್ಲಿ ರವಿವಾರ ಕುರುಹಿನಶೆಟ್ಟಿ ನೇಕಾರ ಸಮಾಜದ ಬಡವರಿಗೆ ಆಹಾರಧಾನ್ಯದ ಕಿಟ್ ವಿತರಿಸುವ ಕಾರ್ಯ ನೆರವೇರಿಸಿದರು.
ಶ್ರೀಶಿವಂಶಕರ ಶಿವಾಚಾರ್ಯರು ಬಡವರಿಗೆ ಕಿಟ್ ವಿತರಿಸಿ ಮಾತನಾಡಿ, ಇಂದು ನೇಕಾರರಿಗೆ ದೊರಬೇಕಾದ ಸೌಲಭ್ಯಗಳು ಸರಿಯಾಗಿ ದೊರಕದೇ ಇರುವುದರಿಂದ ನೇಕಾರರು ಕಂಗಾಲಾಗಿದ್ದಾರೆ. ನೇಕಾರರ ಪರವಾಗಿ ಧ್ವನಿಯೆತ್ತುವ ನಾಯಕರು ಮುಂದೆ ಬರಬೇಕು. ಅದಕ್ಕೆ ಬೆಂಬಲ ಸಿಗಬೇಕು. ಕಷ್ಟದ ಜೀವನವನ್ನು ನಿಭಾಯಿಸಲಲು ಕೇವಲ ನೇಕಾರಿಕೆ ಮಾತ್ರ ಅವಲಂಂಬಿಸಿದರೆ ಸಾಲದು ಬೇರೆ ಬೇರೆ ಉದ್ಯೋಗಗಳ ಜ್ಞಾನವನ್ನೂ ಪಡೆದು ಆರ್ಥಿಕವಾಗಿ ಸಬಲರಾಗುವತ್ತ ಗಮನಹರಿಸಬೇಕು ಎಂದರು.
ರಾಜ್ಯ ಕುರುಹಿನಶೆಟ್ಟಿ ಕೇಂದ್ರ ಸಂಘದ ನೂತನ ಅಧ್ಯಕ್ಷ ಅಂಬಾದಾಸ್ ಕಾಮೂರ್ತಿ, ನಿರ್ದೇಶಕರಾದ ಜಗದೀಶ ಶೆಟ್ಟಿ, ಮದನಕುಮಾರ್, ವಿಠ್ಠಲ ಅಮವಾಸ್ಯೆ, ರಾಜ್ಯ ಬಿಜೆಪಿ ಯುವ ಮುಖಂಡ ಮನೋಹರ ಶಿರೋಳ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಕುರುಹಿನಶೆಟ್ಟಿ ಕೇಂದ್ರ ಸಂಘದ ನೂತನ ಅಧ್ಯಕ್ಷ ಅಂಬಾದಾಸ್ ಕಾಮೂರ್ತಿ ಮಾತನಾಡಿ ಕೇಂದ್ರ ಸಂಘದ ನಿರ್ದೇಶಕರರು ಸ್ವಂತ ಖರ್ಚಿನಲ್ಲಿ 1134 ಬಡವರಿಗೆ ಆಹಾರರ ಧಾನ್ಯದ ಕಿಟ್ ನೆರವು ನೀಡಲಾಗಿದೆ. ಸಂಘಟನೆಯಿಂದಲೇ ಧ್ವನಿಯೆತ್ತಬಹುದು. ನಮ್ಮ ಕುರುಹಿನಶೆಟ್ಟಿ ಸಮಾಜ ಬಾಂಧವರು ಒಗ್ಗಟ್ಟಿನಿಂದ ಸಮಾಜದ ಸಂಘಟನೆಗೆ ಮುಂದಾಗಬೇಕು. ಕತ್ತಲಲಿದ್ದು ನೆರಳದೇ ಬೆಳಕಿನತ್ತ ಸಾಗಬೇಕು ಎಂದರು.
ರಾಜ್ಯ ಬಿಜೆಪಿ ಯುವ ಮುಖಂಡ ಮನೋಹರ ಶಿರೋಳ ಮಾತನಾಡಿದರು.
ಡಾ. ರವಿ ಜಮಖಂಡಿ ಪ್ರಾಸ್ತಾವಿಕವಾಗಿ ಮಾನಾಡಿದರು.
ನಗರಸಭಾ ಸದಸ್ಯ ಅರುಣ ಬುದ್ನಿ, ಹೊಸೂರು ಕುರುಹಿನಶೆಟ್ಟಿ ಸಮಾಜದ ಹಿರಿಯರಾದ ಗಿರಮಲ್ಲಪ್ಪ ಬಾಗೇವಾಡಿ, ಮಹಾದೇವಪ್ಪ ಜಮಖಂಡಿ, ಅಶೋಕ ಬೀಳಗಿ, ಪರಪ್ಪ ಗಿರಿಸಾಗರ, ಅಡಿವೆಪ್ಪ ಕರಿಜಾಡರ, ಮಹಾಲಿಂಗ ಯಳಸಂಗ, ಗಂಗಪ್ಪ ಬಾಗೇವಾಡಿ ವೇದಿಕೆಯಲಿದ್ದರು.
ಶಿಕ್ಷಕ ಚಂದ್ರಕಾಂತ ಜೈನಾಪುರ ಸ್ವಾಗತಿಸಿದರು. ಶಿಕ್ಷಕ ಮ.ಕೃ.ಮೇಗಾಡಿ ನಿರೂಪಿಸಿದರು. ಚಂದ್ರಶೇಖರ ಬಾಗೇವಾಡಿ ವಂದಿಸಿದರು.
ಫೋಟೊ ವಿವರ : ಹೊಸೂರು ಶ್ರೀನೀಲಕಂಠೇಶ್ವರ ಮಠದಲ್ಲಿ ರವಿವಾರ ಕುರುಹಿನಶೆಟ್ಟಿ ನೇಕಾರ ಸಮಾಜದ ಬಡವರಿಗೆ ಆಹಾರಧಾನ್ಯದ ಕಿಟ್ ವಿತರಿಸುವ ಕಾರ್ಯ ನೆರವೇರಿತು. ಹಳೇ ಹುಬ್ಬಳ್ಳಿ ಶ್ರೀನೀಲಕಂಠೇಶ್ವರ ಮಠದ ಜಗದ್ಗುರು ಶ್ರೀಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಕುರುಹಿನಶೆಟ್ಟಿ ಕೇಂದ್ರ ಸಂಘದ ನೂತನ ಅಧ್ಯಕ್ಷ ಅಂಬಾದಾಸ್ ಕಾಮೂರ್ತಿ ಇನ್ನಿತರರು ಚಿತ್ರದಲ್ಲಿದ್ದಾರೆ.


- FOR ADVERTISEMENT CONTACT -
                 9902523698