ಜಗದಾಳ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಿಇಓ ಸಿ.ಎಂ.ನ್ಯಾಮಗೌಡ ಸಸಿ ನೆಡುತ್ತಿರುವ ಸಂದರ್ಬದಲ್ಲಿ ಅನೇಕರು ಪಾಲ್ಗೊಂಡಿರುವುದು
ಜೀವ ಸಂಕುಲ ಸಂರಕ್ಷಣೆಗಾಗಿ ಸಸಿ ಬೆಳೆಸಿ
ರಬಕವಿ-ಬನಹಟ್ಟಿ,ಜೂ7: ಜೀವ ಸಂಕುಲ ಸಂರಕ್ಷಣೆಗಾಗಿ ಪ್ರತಿಯೊಬ್ಬರು ಸಸಿ ನೆಟ್ಟು ಅದರ ಪೋಷಣೆಗೆ ಮುಂದಾಗಬೇಕು ಎಂದು ಬಿಇಓ ಸಿ.ಎಂ.ನ್ಯಾಮಗೌಡ ಹೇಳಿದರು.
ಸಮೀಪದ ಜಗದಾಳ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಸಿ ನೆಟ್ಟು ಮಾತನಾಡಿದರು. ಶಾಲೆಯಲ್ಲಿ  ಅಲಂಕಾರಿಕ ಹೂ ,ಆಯುರ್ವೆದ ಸಸ್ಯ,ತರಕಾರಿ ಹೀಗೆ ನಾನಾ ತರಹದ ಸಸ್ಯಗಳನ್ನು ಬೆಳೆಸಿರುವುದು ಸಂತಸದ ವಿಷಯ, ಇಂತಹ ಶಾಲಾ ಸುಂದರ ಉದ್ಯಾನವನವಾಗಲು ಹಗಲಿರುಳು ಶ್ರಮಿಸಿದ  ಹೂಗಾರ ಶಿಕ್ಷಕ ದಂಪತಿಗಳು, ಶಾಲಾ ಹಳೆ ವಿದ್ಯಾರ್ಥಿಗಳ ಸಂಘ, ಪಿಡಿಓ, ಗ್ರಾಮಸ್ಥರು, ಶಾಲಾ ಮುಖ್ಯಗುರುಗಳು, ಶಿಕ್ಷಕ ಸಿಬ್ಬಂದಿ ಮಾಡಿದ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಇಓ ಸಿ.ಎಂ.ನ್ಯಾಮಗೌಡ, ಆರ್‍ಟಿಇ ನೋಡಲ್ ಅಧಿಕಾರಿ ಆರ್.ಎಂ.ಸಂಪಗಾಂವ,ಜಗದಾಳ ಗ್ರಾಮ ಪಂಚಾಯತ ಪಿಡಿಓ ಬಸವರಾಜ ಮುನವಳ್ಳಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆರ್‍ಟಿಇ ನೋಡಲ್ ಅಧಿಕಾರಿ ಆರ್.ಎಂ.ಸಂಪಗಾಂವ, ಜಗದಾಳ ಗ್ರಾಮ ಪಂಚಾಯತ ಪಿಡಿಓ ಬಸವರಾಜ ಮುನವಳ್ಳಿ, ಜಗದಾಳ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರು ಎಂ.ಎ.ಬಾಗವಾನ, ಪ್ರೌಢಶಾಲೆ ಮುಗು ಎಸ್.ಎಸ್.ಮಾಳೇದ, ಎಸ್‍ಡಿಎಂಸಿ ಅಧ್ಯಕ್ಷ ಮಲ್ಲಯ್ಯ ಕಾಡದೇವರ, ಅಶೋಕ ಬಂಗಿ , ಶಿಕ್ಷಕ ರಮೇಶ ಹೂಗಾರ, ಅಶೋಕ ಗೊಬ್ಬಾಣಿ, ಪ್ರಭು ಪಾಟೀಲ, ಮಂಜುನಾಥ ಆಲಗೂರ, ಸಿದ್ದು ಕಬಾಡಗಿ, ಹನಮಂತ ದೇಶಪಾಂಡೆ, ಭರಮಪ್ಪ ಜಾದವ, ಗುರು ಅಸ್ಕಿ, ರಾಮಪ್ಪ ಸುತಗುಂಡಿ, ಅರುಣ ಬಿರಾದಾರ, ಸೋರಗಾಂವಿ,ಆಯ್. ಆಯ್.ಮಂಡಿ, ಮಲ್ಲು ಮಾಳಿ, ಚೇತನ ನಂದೇಶ್ವರ, ಮಹೇಶ ಕಬಾಡಗಿ, ಚಿಂಚಲಿ ಸೇರಿದಂತೆ ಅನೇಕರಿದ್ದರು.


- FOR ADVERTISEMENT CONTACT -
                9902523698