ಮಾಸ್ಕ್ ಧರಿಸದೇ ರಸ್ತೆಗಿಳಿದವರಿಗೆ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ಹಾಗೂ ಸಿಪಿಐ ಜೆ.ಕರುಣೇಶಗೌಡ ನೇತೃತ್ವದಲ್ಲಿ ದಂಡ ವಸೂಲಿ ಮಾಡಿ ಕರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತಿತ್ತು.
ಮಾಸ್ಕ್ ಇಲ್ಲದವರಿಂದ ದಂಡ ವಸೂಲಿ
ರಬಕವಿ-ಬನಹಟ್ಟಿ,ಜೂ25: ಬನಹಟ್ಟಿ ನಗರದಲ್ಲಿ ಕಳೆದ ಒಂದೆರಡು ದಿನದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಗರಸಭೆ ಅಧಿಕಾರಿಳು ರಸ್ತೆಗಿಳಿದು ಮಾಸ್ಕ್ ಧರಿಸದವರನ್ನು ಗುರುತಿಸಿ ದಂಡ ವಸೂಲಿ ಮಾಡುತ್ತಿದ್ದಾರೆ.
ಗುರುವಾರ ಮಧ್ಯಾಹ್ನ ನಗರದ ಗಾಂಧಿ ವೃತ್ತದ ಬಳಿ ನಗರಸಭೆ ಅಧಿಕಾರಿಗಳು ಬೀದಿಗಳಿದು ಬೈಕ್ ಹಾಗೂ ಪಾದಚಾರಿಗಳು ಮಾಸ್ಕ್ ಇಲ್ಲದೆ ತಿರುಗಾಡುತ್ತಿರುವವರನ್ನು ಗುರುತಿಸಿ ಪ್ರತಿಯೊಬ್ಬರಿಗೆ ರೂ. 100. ದಂಡ ವಿಧಿಸಿ ಕೊರೊನಾ ಕುರಿತಾಗಿ ಜಾಗೃತಿ ಮೂಡಿಸುತ್ತಿದ್ದರು.
ಒಂದೇ ದಿನ ರೂ.19,700ಕ್ಕೂ ಅಧಿಕ ದಂಡ ವಸೂಲಿಯಾಗಿದ್ದು, ನಾವು ಕೇವಲ ದಂಡ ಹೆಚ್ಚಿಸಬೇಕೆಂಬ ಉದ್ದೇಶ ಹೊಂದಿಲ್ಲ ಜನರು ಈ ಮಹಾಮಾರಿ ರೋಗ ಬರದಂತೆ ಆರೋಗ್ಯದಿಂದ ದೂರ ಇರಲಿ ಎಂದು ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲಿಸಲಿ ಎಂಬ ಸುದುದ್ದೇಶದಿಂದ ನಾವು ದಂಡ ಹಾಕುತ್ತಿದ್ದೇವೆ ಎಂದು ಪೌರಾಯುಕ್ತ ಶ್ರೀನಿವಾಸ ಜಾಧವ ತಿಳಿಸಿದರು.
ಸಿಪಿಐ ಜೆ. ಕರುಣೇಶಗೌಡ, ನಗರ ಸಭೆ ಅಧಿಕಾರಿಗಳಾದ ಎಂ. ಎಂ. ಮುಗಳಖೋಡ, ಆರ್. ಕೆ. ಹೊಸೂರ ಸೇರಿದಂತೆ ಅನೇಕರಿದ್ದರು.


      - FOR ADVERTISEMENT CONTACT  -
                       - 9902523698 -