ಬನಹಟ್ಟಿಯ ಎಸ್ ಆರ್ ಎ ಸಂಯುಕ್ತ ಪದವಿಪೂರ್ವ ಕಾಲೇಜಿನ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರದದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಸ್ಕ್ರೀನಿಂಗ್ ಮಾಡಿದರು.
ಆರಂಭಗೊಂಡ ಎಸ್‍ಎಸ್‍ಎಲ್‍ಸಿ ಪರೀಕ್ಷೆ
ರಬಕವಿ-ಬನಹಟ್ಟಿ,ಜೂ25: ನಗರಸಭೆಯ ವ್ಯಾಪ್ತಿಯ ಮೂರು ಕಡೆಗಳಲ್ಲಿ ಮತ್ತು ಸಮೀಪದ ಯಲ್ಲಟ್ಟಿ ಕೊಣ್ಣೂರು ಇಂಗ್ಲಿಷ ಮಾಧ್ಯಮ ಶಾಲೆಯಲ್ಲಿ ಗುರುವಾರ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಆರಂಭವಾದವು.
ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ನೀಡಿದ ನಂತರ ಶಾಲಾ ಸಿಬ್ಬಂದಿ ವರ್ಗವು ಮಾಸ್ಕ್ ವಿತರಣೆ ಮಾಡಿದ ನಂತರ ಆರೋಗ್ಯ ಇಲಾಖೆಯ ಸದಸ್ಯರು ಸ್ಕ್ರೀನಿಂಗ್ ಮಾಡಿದರು. ಶೀತ, ಕೆಮ್ಮು ಮತ್ತು ಜ್ವರದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಬಹಳಷ್ಟು ವಿದ್ಯಾರ್ಥಿಗಳನ್ನು ಪಾಲಕರು ಕರೆದುಕೊಂಡು ಬಂದರು. ಪರೀಕ್ಷಾ ಕೇಂದ್ರದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಕಲಂ 144 ಜಾರಿಗೆ ತರಲಾಗಿತ್ತು. ಸ್ಥಳೀಯ ತಹಶೀಲ್ದಾರ್ ಪ್ರಶಾಂತ ಚನಗೊಂಡ, ಸಿಪಿಐ ಜಿ.ಕರುಣೇಶಗೌಡ ಮತ್ತು ಪಿಎಸ್‍ಐ ರವಿಕುಮಾರ ಧರ್ಮಟ್ಟಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
- FOR ADVERTISEMENTS CONTACT -
- 9902523698 -

Social Plugin