ಇನಾಮಹೊಂಗಲ ಗ್ರಾಮಕ್ಕೆ ವಕ್ಕರಿಸಿದ ಕೊರೋನಾ
ಸೋಂಕಿತ ವ್ಯಕ್ತಿಯ ನಿವಾಸದ ಸುತ್ತಲಿನ ಪ್ರದೇಶವನ್ನು ಸೀಲ್ ಡೌನ್ ಮಾಡಿಸಿದ ಅಧಿಕಾರಿಗಳು.
ಕೆಲವೇ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳು ಕೊರೋನಾ ವೈರಸ್ ಹಾಟ್ ಸ್ಪಾಟ್ಗಳಾಗಲಿವೆ ಎಂಬ ವರದಿಯ ಭೀತಿಯ ನಡುವೆಯೇ ಕೊರೋನಾ ಮಹಾಮಾರಿ ಸದ್ದಿಲ್ಲದೆ ಹಳ್ಳಿಗಳತ್ತ ಧಾವಿಸುತ್ತಿದೆ.  ಹೊರ ರಾಜ್ಯದಿಂದ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್ನಲ್ಲಿರಿಸಲಾಗಿದ್ದ ಇಲ್ಲಿಗೆ ಸಮೀಪದ ಇನಾಮಹೊಂಗಲ ಗ್ರಾಮದ ವ್ಯಕ್ತಿಯೋರ್ವನಿಗೆ ಕೊರೋನಾ ಸೋಂಕು ತಗಲಿದ್ದು ದೃಢ ಪಟ್ಟಿದ್ದು ಇಷ್ಟು ದಿನ ನೆಮ್ಮದಿಯಿಂದಿದ್ದ ಇನಾಮ ಹೊಂಗಲ ಹಾಗೂ ಸುತ್ತಲಿನ ನಾನಾ ಗ್ರಾಮಗಳ ಜನರಿಗೆ ಆತಂಕ ತಂದಿಟ್ಟಿದೆ. ಅದರಲ್ಲೂ ಸೋಂಕಿತ ವ್ಯಕ್ತಿ ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ವಾಪಸ ಆದ ಎಂಟು ದಿನದ ಬಳಿಕ ಆತನ ಗಂಟಲು ದ್ರವದ ಮಾದರಿಯ ವರದಿಯಲ್ಲಿ ಕೊರೋನಾ ಸೋಂಕಿರುವುದು ಧೃಢ ಪಟ್ಟಿರುವುದು ಗ್ರಾಮಸ್ಥರು ಮತ್ತಷ್ಟು ಭಯ ಪಡುವಂತಾಗಿದೆ. ಅಲ್ಲದೆ ಸೋಂಕಿತನು ಗೆಳೆಯರ ಜತೆ ಗ್ರಾಮದ ಅನೇಕ ಕಡೆ ಸಂಚರಿಸಿರುವದು ಗ್ರಾಮಸ್ಥರನ್ನು ಚಿಂತೆಗಿಡು ಮಾಡಿದೆ. ವರದಿ ಬಂದ ತಕ್ಷಣವೇ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು ಸೋಂಕಿತ ವ್ಯಕ್ತಿಯ ಸಂಬಂಧಿಕರನ್ನು ಹೋಮ್ ಕ್ವಾರಂಟೈನ್ಗೆ ಆದೇಶಿಸಿ ಆತನ ಮನೆ ಹಾಗೂ ಸುತ್ತಲಿನ ಪ್ರದೇಶವನ್ನು ಸ್ಯಾನಿಟೈಜ್ ಮಾಡಿಸಿ ಸಂಪೂರ್ಣ ಸೀಲ್ ಡೌನ್ ಮಾಡಿಸಿದ್ದಾರೆ. ಮುಂಜಾಗೃತಾ ಕ್ರಮವಾಗಿ ಗ್ರಾಮಸ್ಥರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ.
ಬಾಕ್ಸ ಐಟಂ:
ವರದಿ ಬಂದ ತಕ್ಷಣವೇ ಕೊರೋನಾ ಸೋಂಕಿತ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿಲಾಗಿದೆ. ಸೋಂಕಿತ ವಾಸವಿರುವ ಮನೆ ಪದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಗ್ರಾಮಸ್ಥರು ವಿನಾಕಾರಣ ಅನಗತ್ಯವಾಗಿ ಮನೆಯಿಂದ ಹೊರಗಡೆ ತಿರುಗಾಡದಂತೆ ಜಾಗೃತಿ ಮೂಡಿಸಲಾಗುತ್ತಿದೆ.
ಎಪ್.ಡಿ.ಹುಲಮನಿ ಪಿಡಿಓ ಇನಾಮ ಹೊಂಗಲ
ಇನಾಮ ಹೊಂಗಲದಲ್ಲಿ ಕೊರೋನಾ ಸೋಂಕಿತ ವ್ಯಕ್ತಿಯ ಮನೆ ಸುತ್ತಲಿನ ಪ್ರದೇಶವನ್ನು ಸಂಪೂರ್ಣ ಸೀಲ್ ಡೌನ್ ಮಾಡಿರುವುದು.

- FOR ADVERTISEMENT CONTACT -
                  9902523698