ಬಿಡಿಸಿಸಿ ಬ್ಯಾಂಕ್‍ನ ನಿರ್ದೇಶಕ ಸ್ಥಾನದ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಜವಳಿ ಉದ್ಯಮಿ ಮಲ್ಲಿಕಾರ್ಜುನ ಬಾಣಕಾರ ಅವರಿಂದ ಶಾಸಕ ಸಿದ್ದು ಸವದಿಯವರಿಗೆ ಮನವಿ ಅರ್ಪಿಸಿದರು.
ನೇಕಾರ ಧುರೀಣ ಬಾಣಕಾರಗೆ ಸ್ಪರ್ಧೆ ಅವಕಾಶಕ್ಕೆ ಒತ್ತಾಯ
ರಬಕವಿ-ಬನಹಟ್ಟಿ,ಜೂ22: ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಸಲು ಸರ್ಕಾರ ದಿನಾಂಕ ನಿಗದಿಗೊಳಿಸಿದರ ಬೆನ್ನಲ್ಲೇ ನೇಕಾರ ವಿಭಾಗದಿಂದ ಇರುವ ಒಂದೇ ಒಂದು ಸ್ಥಾನಕ್ಕೆ ಫಲಾನುಭವಿಗಳ ಪಟ್ಟಿ ಸೇರಿದಂತೆ ಚಟುವಟಿಕೆ ಗರಿಗೆದರಿದೆ.
ನೇಕಾರಿಕೆ ಸಮುದಾಯದಿಂದ ನಿರ್ದೇಶಕ ಸ್ಥಾನಕ್ಕೆ ಕಳೆದೆರಡು ದಶಕಗಳಿಂದ ರಬಕವಿ-ಬನಹಟ್ಟಿ ಪಟ್ಟಣಕ್ಕೆ ದೊರಕಿಲ್ಲ. ಜಿಲ್ಲೆಯಲ್ಲಿಯೇ ಅತ್ಯಧಿಕ ನೇಕಾರರನ್ನು ಹೊಂದಿರುವ ಪ್ರದೇಶವಾಗಿದ್ದು, ಈ ಭಾಗದಿಂದ ನೇಕಾರಿಕೆ ಉದ್ದಿಮೆಯಲ್ಲಿ ಅನುಭವ ಹೊಂದಿರುವ ಜವಳಿ ಕ್ಷೇತ್ರದಲ್ಲಿ ಮೈಲುಗಲ್ಲು ಸ್ಥಾಪಿಸಿರುವ ಮಲ್ಲಿಕಾರ್ಜುನ ಬಾಣಕಾರ ಅವರನ್ನು ಬಿಜೆಪಿ ಪಕ್ಷದ ಬೆಂಬಲಿತ ವ್ಯಕ್ತಿಯನ್ನಾಗಿ ಕಣಕ್ಕಿಳಿಸಬೇಕೆಂದು ರಬಕವಿ-ಬನಹಟ್ಟಿ ಹಾಗು ಮಹಾಲಿಂಗಪೂರ ಸೇರಿದಂತೆ ಅನೇಕ ಗ್ರಾಮಗಳಿಂದ ಆಗಮಿಸಿದ್ದ ನೂರಾರು ನೇಕಾರ ಮುಖಂಡರು ಶಾಸಕ ಸಿದ್ದು ಸವದಿಯವರನ್ನು ಒತ್ತಾಯಿಸಿದರು.
ಶಾಸಕ ಸಿದ್ದು ಸವದಿ ಮಾತನಾಡಿ, ಜಿಲ್ಲೆಯಲ್ಲಿಯೇ ಅತಿ ಹೆಚ್ಚು ನೇಕಾರಿಕೆ ಹೊಂದಿರುವ ಪ್ರದೇಶ ರಬಕವಿ-ಬನಹಟ್ಟಿ ತಾಲೂಕಾಗಿದ್ದು, ಆಕಾಂಕ್ಷಿಗಳ ಪಟ್ಟಿ ಸಹಜ ಆದರೆ ಪಕ್ಷದ ಬೆಂಬಲಿತವಾಗಿ ತಾಲೂಕಿನಾದ್ಯಂತ ಸಹಕಾರದೊಂದಿಗೆ ಓರ್ವ ಅರ್ಹ ವ್ಯಕ್ತಿ ಕಣಕ್ಕಿಳಿದರೆ ಈ ಭಾಗದ ನೇಕಾರ ಸಮುದಾಯಕ್ಕೆ ನ್ಯಾಯಸಮ್ಮತವಾಗಿ ಗೆಲುವು ಸಾಧ್ಯವೆಂದರು.
ಇದೇ ಸಂದರ್ಭ ಪಕ್ಷದ ಜಿಲ್ಲಾ ಉಪಾಧ್ಯಕ್ಷ ರಾಜು ಅಂಬಲಿ, ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಡಾ. ಪಿ.ವಿ. ಪಟ್ಟಣ, ಸಿದ್ಧನಗೌಡ ಪಾಟೀಲ, ಮಲ್ಲಿಕಾರ್ಜುನ ನಾಶಿ, ಬಸವರಾಜ ತೆಗ್ಗಿ, ರಾಮಣ್ಣ ಭದ್ರನ್ನವರ, ಶ್ರೀಶೈಲ ದಭಾಡಿ, ಬ್ರಿಜ್‍ಮೋಹನ ಡಾಗಾ, ಬಸವರಾಜ ಜಾಡಗೌಡ, ಸಂಗಯ್ಯ ಅಮ್ಮಣಗಿಮಠ, ಸಿದ್ರಾಮ ಸವದತ್ತಿ, ರಾಜು ಬಾಣಕಾರ, ಕುಮಾರ ಕದಂ, ಮಹಾದೇವ ಧೂಪದಾಳ, ಅಶೋಕ ಪಟ್ಟಣ, ಶ್ರೀಶೈಲ ಬೀಳಗಿ, ವಿಶ್ವನಾಥ ಸವದಿ ಸೇರಿದಂತೆ ನೂರಾರು ಹಿರಿಯರು ಭಾಗಿಯಾಗಿದ್ದರು.
- FOR ADVERTISEMENT CONTACT -
- 9902523698 -

Social Plugin