ಬಿಡಿಸಿಸಿ ಬ್ಯಾಂಕ್ ಚುನಾವಣೆ ಸ್ಪರ್ಧೆಗೆ ಶಾಸಕ ಸಿದ್ದು ಸವದಿಯವರಿಗೆ ರಬಕವಿ-ಬನಹಟ್ಟಿ, ಮಹಾಲಿಂಗಪೂರ ಪಟ್ಟಣ ಸಾರ್ವಜನಿಕರಿಂದ ಮನವಿ ಸಲ್ಲಿಸಲಾಯಿತು.
ಬಿಡಿಸಿಸಿ ಬ್ಯಾಂಕ್ ಚುನಾವಣೆ: ನೇಕಾರ ಕ್ಷೇತ್ರದಿಂದ ಕಣಕ್ಕೆ ಚಿಂಡಕ
ರಬಕವಿ-ಬನಹಟ್ಟಿ,ಜೂ22: ಬನಹಟ್ಟಿಯ ನೇಕಾರ ಸಮುದಾಯದ ಮುಖಂಡರಾದ ಸುರೇಶ ಚಿಂಡಕ ಅವರು ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ನೇಕಾರರ ಕ್ಷೇತ್ರದಿಂದ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿಯುವದಾಗಿ ತಿಳಿಸಿದ್ದಲ್ಲದೆ ರಬಕವಿ-ಬನಹಟ್ಟಿ, ಮಹಾಲಿಂಗಪೂರ ಸೇರಿದಂತೆ ವಿವಿಧೆಡೆಯಿಂದ ನೇಕಾರರ ಮುಖಂಡರು ಆಗಮಿಸಿದ್ದರು.
ತೇರದಾಳ ಕ್ಷೇತ್ರದ ಬಿಜೆಪಿಯ ಪ್ರಮುಖ ಮುಖಂಡರಾಗಿ ನೇಕಾರಿಕೆ ರಂಗದಲ್ಲಿ ಸಾಕಷ್ಟು ಕಾರ್ಯನಡೆಸಿದ ಅನುಭವ ಇವರದಾಗಿದೆ ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಬಿಜೆಪಿ ಕಾರ್ಯಾಲಯದಲ್ಲಿ ಶಾಸಕ ಸಿದ್ದು ಸವದಿಯವರಿಗೆ ಮನವಿ ಅರ್ಪಿಸಲಾಯಿತು.
ಇದೇ ಸಂದರ್ಭ ಶಂಕರ ಜುಂಜಪ್ಪನವರ, ಬಸವರಾಜ ತೆಗ್ಗಿ, ಮಲ್ಲಿಕಾರ್ಜುನ ನಾಶಿ, ಬಸವರಾಜ ಭದ್ರನ್ನವರ, ಶ್ರೀಶೈಲ ದಭಾಡಿ, ಗಿರಮಲ್ಲಪ್ಪ ಬಾಗೇವಾಡಿ, ಮಹಾಲಿಂಗಪ್ಪ ಕೋಳಿಗುಡ್ಡ, ಸಿದ್ಧನಗೌಡ ಪಾಟೀಲ, ಧರೆಪ್ಪ ಉಳ್ಳಾಗಡ್ಡಿ, ಮಹಾಂತೇಶ ಹಿಟ್ಟಿನಮಠ, ಮಲ್ಲಣ್ಣ ಕಕಮರಿ, ಶಿವಾನಂದ ಬುದ್ನಿ ಸೇರಿದಂತೆ ಅನೇಕರಿದ್ದರು.


      - FOR ADVERTISEMENT CONTACT  -
                      - 9902523698 -