ತೇರದಾಳ ಪಟ್ಟಣದ ಶ್ರೀಸಿದ್ಧೇಶ್ವರ ಪ್ರೌಢಶಾಲೆಯಲ್ಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಕ್ಕೆ ಪುರಸಭೆಯವರು ಸೈನಿಟೈಜರ್ ಸಿಂಪರಣೆ ಮಾಡಿದರು.
ಪರೀಕ್ಷಾ ಕೇಂದ್ರಗಳಿಗೆ ಸೈನಿಟೈಜರ್ ಸಿಂಪರಣೆ
ತೇರದಾಳ : ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಚ್‍ನಲ್ಲಿ ನಡೆಯಬೇಕಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಲಾಕ್‍ಡೌನ್‍ದಿಂದಾಗಿ ಮುಂದೂಡಲಾಗಿತ್ತು. ಆ ಪರೀಕ್ಷೆಗಳು ಈಗ ಸರಕಾರದ ಆದೇಶದ ಮೇರೆಗೆ ಜೂ.25ರಿಂದ ಪ್ರಾರಂಭವಾಗುತ್ತಿವೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಮುಂಜಾಗೃತ ಕ್ರಮವಾಗಿ ಇಂದು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೊಠಡಿಗಳಿಗೆ ಪುರಸಭೆವತಿಯಿಂದ ಸೈನಿಟೈಜರ್ ಸಿಂಪರಣೆ ಮಾಡಿದರು.
ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಪರಿಕ್ಷೆ ನಡೆಯುವ ಎಲ್ಲಾ ಪರೀಕ್ಷಾ ಕೊಠಡಿಗಳಿಗೆ ಹಾಗೂ ಶಾಲಾ ವರಾಂಡ್‍ವನ್ನು ಹಾಗೂ ವಿದ್ಯಾರ್ಥಿಗಳು ಕುಳಿತುಕೊಳ್ಳುವ ಆಸನಗಳನ್ನು ಸೈನಿಟೈಜರ್ ಮಾಡಲಾಯಿತು. ವಿದ್ಯಾರ್ಥಿಗಳು ಕೊರೊನಾ ಭಯವಿಲ್ಲದೆ ಪರೀಕ್ಷೆ ಬರೆಯಬೇಕು ಎಂಬ ಉದ್ದೇಶದಿಂದ ಸರಕಾರ ಪರೀಕ್ಷಾ ಕೇಂದ್ರಗಳಿರುವ ಎಲ್ಲ ಪ್ರೌಢಶಾಲೆಗಳಿಗೆ ಸೈನಿಟೈಜರ್ ಸಿಂಪರಣೆ ಮಾಡುವಂತೆ ಆದೇಶಿಸಲಾಗಿದೆ. ಪರೀಕ್ಷೆಗೆ ದೂರದ ಊರಿನಿಂದ ಬರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‍ದ ವ್ಯವಸ್ಥೆ ಮಾಡಲಾಗಿದೆ. ಹಾಗೂ ತೋಟದ ಮನೆಗಳಿದ ಬರುವ ವಿದ್ಯಾರ್ಥಿಗಳು ತಮ್ಮ ಪಾಲಕರು ತಮ್ಮ ದ್ವಿಚಕ್ರ ವಾಹನಗಳ ಮೇಲೆ ಕರೆದು ತಂದು ಬಿಡುವಾಗ ಪರೀಕ್ಷಾ ಕೇಂದ್ರದಿಂದ 100 ಮೀ. ದೂರದಲ್ಲಿಯೇ ಬಿಡಬೇಕು. ಪರೀಕ್ಷಾ ಕೇಂದ್ರ ಸುತ್ತಲೂ 144 ಕಲಂ ಜಾರಿಯಲ್ಲಿರುವುದರಿಂದ ವಾಹನಗಳಿಗೂ ಹಾಗೂ ಜನರ ಸಂಚಾರಕ್ಕೆ ನಿಷೇಧವಿರುವುದರಿಂದ ದೂರದಲ್ಲಿಯೇ ಬಿಡಬೇಕು ಎಂಬುವುದು ತಿಳಿದುಬಂದಿದೆ.
ಸರಕಾರಿ ವೈದ್ಯಾಧಿಕಾರಿಗಳಿಂದ ಪರೀಕ್ಷಾ ಕೇಂದ್ರದಲ್ಲಿ ಮುಂಚಿತವಾಗಿ ಎಲ್ಲ ಪರೀಕ್ಷಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಪರೀಕ್ಷಾ ಕೇಂದ್ರಕ್ಕೆ ಬರುವಾಗ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ ಹಾಗೂ ಸರಕಾರ ಕೊಟ್ಟಿರುವ ಮಾಸ್ಕ್‍ನ್ನು ಪ್ರತಿಯೊಬ್ಬರು ಉಪಯೋಗಿಸಬೇಕು ಎಂದು ಸರಕಾರದ ಆದೇಶವಾಗಿದೆ. ಈ ಸಂದರ್ಭದಲ್ಲಿ ಪರೀಕ್ಷಾ ಅಧೀಕ್ಷಕರಾದ ಎಮ್.ಬಿ.ಮಾಳೇದ, ಮುಖ್ಯಾಧ್ಯಾಪಕ ಡಿ.ಎ.ಉಗಾರ, ಪುರಸಭೆ ಕಿರಿಯ ಆರೋಗ್ಯ ಸಹಾಯಕ ಹನಮಂತ ಮಾಳಗಿ, ಬಿ.ಸಿ. ಮುಕರಿ, ಶಂಭು ಮಾಸ್ತಿ ಸೇರಿದಂತೆ ಪುರಸಭೆ ಪೌರ ಕಾರ್ಮಿಕರು ಹಾಗೂ ಇನ್ನಿತರರು ಇದ್ದರು.
- FOR ADVERTISEMENT CONTACT -
- 9902523698 -



Social Plugin