ಮೈಕ್ರೋ ಫೈನಾನ್ಸ್ ಸಾಲ ಮನ್ನಾ ಮಾಡಲು ಕರವೇ ಒತ್ತಾಯ.
ರಬಕವಿ ಬನಹಟ್ಟಿ :ಕೋರೊನಾ ವೈರಸನಿಂದ ದೇಶದ ತುಂಬಾ ಲಾಕ್ ಡೌನ್ ಸರ್ಕಾರವು ಆದೇಶ ಹೊರಡಿಸಿದರಿಂದ ಬಡ ಮಹಿಳೆಯರು ಪಡೆದ ಮೈಕ್ರೋ ಫೈನಾನ್ಸಗಳ ಸಾಲವನ್ನು ತಿರಿಸಲ್ಲು ಹರಸಾಹಸ ಪಡುವ ಪರಿಸ್ಥಿತಿ ಬಂದೊದಗಿದೆ.
ಕಳೆದ ಮೂರು ನಾಲ್ಕು ತಿಂಗಳಿನಿಂದ ಮಹಿಳೆಯರಿಗೆ ಯಾವುದೆ ದುಡಿಮೆ ಇಲ್ಲದೆ ದಿನ ನಿತ್ಯ ಜೀವನ ನಡೆಸುವುದು ದುಸ್ತರವಾಗಿರುವ ಸಂಗತಿ ಇದು ಸರ್ಕಾರಕ್ಕೆ ತಿಳಿದ ವಿಷಯ ಬಡ ಮಹಿಳೆಯರು ಕೂಲಿ ನಾಲಿ ಮಾಡುವ ಸಣ್ಣ ಪುಟ್ಟ ಗುಡಿ ಕೈಗಾರಿಕೆಗಳನ್ನು ಮಾಡಿಕೊಂಡಿರುವ ಮಹಿಳೆಯರು ವ್ಯಾಪಾರ ಮತ್ತು ನೇಕಾರಿಕೆ ಉದ್ಯಮದ ಮೂಲಕ ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಮೈಕ್ರೋ ಪೈನಾನ್ಸಗಳಲ್ಲಿ ಅಲ್ಪ ಮೊತ್ತದ ಸಾಲವನ್ನು ಪಡೆದು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇಂತಹ ಸಂದಿಗ್ಧ ಸಮಯದಲ್ಲಿ ಬಡ್ಡಿಗೆ ಬಡ್ಡಿ ಸೇರಿಸಿ ಚಕ್ರ ಬಡ್ಡಿ ಹಾಕಿ ಸಾಲ ಮರುಪಾವತಿ ಮಾಡುವಂತೆ ಮೈಕ್ರೋ ಫೈನಾನ್ಸುಗಳು ಒತ್ತಡ ಹೇರುತ್ತಿರುವುದು ಮಾನವೀಯ ಹಾಗೂ ದೌರ್ಜನ್ಯದ ವಿರುದ್ಧ ಖಂಡಿಸುತ್ತೆವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಹ ಸಂಚಾಲಕ ದೇವೇಂದ್ರ ಅಸ್ಕಿ ಮಾತನಾಡಿದರು.
ಈ ಹಿಂದಿನ ಸರ್ಕಾರದ ಎಲ್ಲವೂ ಸಹಕಾರಿ ಸಂಘಗಳಲ್ಲಿನ ಮತ್ತು ಬ್ಯಾಂಕುಗಳಲ್ಲಿನ ರೈತ ಮತ್ತು ನೇಕಾರ ಸಾಲ ಮನ್ನಾ ಮಾಡುತ್ತಾ ಬಂದಿವೆ. ಅದೇ ರೀತಿ ಹಿಂದಿನ ಎಚ್. ಡಿ. ಕುಮಾರಸ್ವಾಮಿ ಅವರು ಸರ್ಕಾರದಲ್ಲಿ ಘೋಷಿಸಲಾದ ಋಣ ಮುಕ್ತ ಕಾಯ್ದೆಯಲ್ಲಿ ಬಾಂಡ ಮತ್ತು ಚೆಕ್ ಮೂಲಕ ಪಡೆದ ವೈಯಕ್ತಿಕ ಸಾಲಗಳ ಕೂಡ ಮನ್ನಾ ಮಾಡುವ ಯೋಜನೆ ತರಲಾಗಿತ್ತು. ಆದರೆ ನಿಜವಾಗಿಯೂ ಸಾಲಬಾಧೆ ಒಳಗಾಗಿರುವ ಬಡ ಕುಟುಂಬಗಳ ಗೃಹಿಣಿಯರು ಮೈಕ್ರೋ ಫೈನಾನ್ಸಗಳಲ್ಲಿ ಪಡೆದ ಸಾಲವನ್ನು ಮನ್ನಾ ಮಾಡುವ ಯೋಜನೆಯನ್ನು ಸರ್ಕಾರಗಳು ಮಾಡದಿರುವುದು ಬಡ ಕುಟುಂಬಗಳ ಗೃಹಿಣಿಯರ ದೌರ್ಭಾಗ್ಯವೇ ಸರಿ .ಆದ್ದರಿಂದ ಸರ್ಕಾರವು ಈ ಕಠಿಣ ಪರಿಸ್ಥಿತಿಯನ್ನು ಮನಗಂಡುಬಡ ಮಹಿಳೆಯರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಮೈಕ್ರೋ ಫೈನಾನ್ಸ್ಗಳಲ್ಲಿ ಪಡೆದ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ರಬಕವಿ ಬನಹಟ್ಟಿ ತಾಲ್ಲೂಕು ಘಟಕದಿಂದ ಖಂಡಿಸುತ್ತೆವೆ ಎಂದು ಮಾಳು ಬ.ದುರ್ಗನ್ನವರ ಮಾತನಾಡಿ ತಹಶಿಲ್ದಾರರಿಗೆ ಮನವಿ ಪತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಬಾಗಲಕೋಟೆ ಜಿಲ್ಲಾ ಸಹ ಸಂಚಾಲಕ ದೇವೇಂದ್ರ ಅಸ್ಕಿ.ಕಾಡೇಶ ನ್ಯಾಮಗೌಡ.ಕಿರಣ ಗುಂಡಿ.ಅರ್ಜುನ ಜಿಡ್ಡಿಮನಿ.ಹಾಗೂ ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಹೋನ್ನಪ್ಪ ಬಿರಡಿ.ಮಾಳು ಬ.ದುರ್ಗನ್ನವರ.ಆಯುಷ್ಯಾ ಫಣಿಬಂದ.ನೀಲವ್ವ ಹಟ್ಟಿ .ಕಲಾವತಿ ರಾಮದುರ್ಗ. ಮಹಾದೇವಿ ಬಾಡಗಂಡಿ. ಶೇಖರ್ ಕೋಪರ್ಡೆ. ಇನ್ನೂ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.
- FOR ADVERTISEMENT CONTACT -
- 9902523698 -

Social Plugin