ತೇರದಾಳ ಪಟ್ಟಣದ ಎಸ್.ಎಂ. ಪ್ರೌಢಶಾಲೆಯಲ್ಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಕ್ಕೆ ಪುರಸಭೆಯವರು ಸ್ಯಾನಿಟೈಜರ್ ಸಿಂಪರಣೆ ಮಾಡಿದರು.


ತೇರದಾಳ : ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಚ್‍ನಲ್ಲಿ ನಡೆಯಬೇಕಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಲಾಕ್‍ಡೌನ್‍ದಿಂದಾಗಿ ಮುಂದೂಡಲಾಗಿತ್ತು. ಆ ಪರೀಕ್ಷೆಗಳು ಈಗ ಸರಕಾರದ ಆದೇಶದ ಮೇರೆಗೆ ನಾಳೆಯಿಂದ ಅಂದರೆ ಜೂ.25ರಿಂದ ಪ್ರಾರಂಭವಾಗುತ್ತಿವೆ. ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗೃತ ಕ್ರಮವಾಗಿ ಇಂದು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೊಠಡಿಗಳಿಗೆ ಪುರಸಭೆವತಿಯಿಂದ ಸ್ಯಾನಿಟೈಜರ್ ಸಿಂಪರಣೆ ಮಾಡಿದರು.
  ಎಮ್‍ಎಲ್‍ಸಿಯವರಾದ ಸುನೀಲಗೌಡಪಾಟೀಲ ಇವರು ಕೊಡಮಾಡಿದ ಸ್ಯಾನಿಟೈಜರ್ ಸಿಂಪರಣೆ ಮಷೀನ್ ಪುರಸಭೆಗೆ ಕೊಟ್ಟಿದ್ದಾರೆ. ಪುರಸಭೆಯವರು ಈಗ ಆ ಮಷೀನ್‍ನ್ನು ಪರೀಕ್ಷಾ ಕೇಂದ್ರಗಳಿಗೆ ಸ್ಯಾನಿಟೈಜರ್ ಸಿಂಪರಣೆ ಮಾಡಲು ಉಪಯೋಗಿಸುತ್ತಿದ್ದಾರೆ. ಅದರಂತೆ ಇಂದು ವಿದ್ಯಾರ್ಥಿಗಳ ಆರೋಗ್ಯ ಹಿತದೃಷ್ಟಿಯಿಂದ ಪರಿಕ್ಷೆ ನಡೆಯುವ ಎಲ್ಲಾ ಪರೀಕ್ಷಾ ಕೊಠಡಿಗಳಿಗೆ ಹಾಗೂ ಶಾಲಾ ವರಾಂಡ್‍ವನ್ನು ಹಾಗೂ ವಿದ್ಯಾರ್ಥಿಗಳು ಕುಳಿತುಕೊಳ್ಳುವ ಆಸನಗಳನ್ನು ಸ್ಯಾನಿಟೈಜರ್ ಮಾಡಲಾಯಿತು. ವಿದ್ಯಾರ್ಥಿಗಳು ಕೊರೊನಾ ಭಯವಿಲ್ಲದೆ ಪರೀಕ್ಷೆ ಬರೆಯಬೇಕು ಎಂಬ ಉದ್ದೇಶದಿಂದ ಸರಕಾರ ಪರೀಕ್ಷಾ ಕೇಂದ್ರಗಳಿರುವ ಎಲ್ಲ ಪ್ರೌಢಶಾಲೆಗಳಿಗೆ ಸ್ಯಾನಿಟೈಜರ್ ಸಿಂಪರಣೆ ಮಾಡುವಂತೆ ಆದೇಶಿಸಲಾಗಿದೆ. ಪರೀಕ್ಷೆಗೆ ದೂರದ ಊರಿನಿಂದ ಬರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‍ದ ವ್ಯವಸ್ಥೆ ಮಾಡಲಾಗಿದೆ. ಹಾಗೂ ತೋಟದ ಮನೆಗಳಿದ ಬರುವ ವಿದ್ಯಾರ್ಥಿಗಳು ತಮ್ಮ ಪಾಲಕರು ತಮ್ಮ ದ್ವಿಚಕ್ರ ವಾಹನಗಳ ಮೇಲೆ ಕರೆದು ತಂದು ಬಿಡುವಾಗ ಪರೀಕ್ಷಾ ಕೇಂದ್ರದಿಂದ 100 ಮೀ. ದೂರದಲ್ಲಿಯೇ ಬಿಡಬೇಕು. ಪರೀಕ್ಷಾ ಕೇಂದ್ರ ಸುತ್ತಲೂ 144 ಕಲಂ ಜಾರಿಯಲ್ಲಿರುವುದರಿಂದ ವಾಹನಗಳಿಗೂ ಹಾಗೂ ಜನರ ಸಂಚಾರಕ್ಕೆ ನಿಷೇಧವಿರುವುದರಿಂದ ದೂರದಲ್ಲಿಯೇ ಬಿಡಬೇಕು ಎಂಬುವುದು ತಿಳಿದುಬಂದಿದೆ. ಮತ್ತು ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಸ್ಯಾನಿಟೈಜರ್ ಬಾಕ್ಸ್‍ನ್ನು(ಮಾರ್ಗ) ಸಂಸ್ಥೆಯವತಿಯಿಂದ ತಯಾರಿಸಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಅದೇ ಮಾರ್ಗದಲ್ಲಿ ಹಾಯ್ದು ಹೋಗಬೇಕು ಎಂದು ಅವರು ತಿಳಿಸಿದ್ದಾರೆ.

  ಸರಕಾರಿ ವೈದ್ಯಾಧಿಕಾರಿಗಳಿಂದ ಪರೀಕ್ಷಾ ಕೇಂದ್ರದಲ್ಲಿ ಮುಂಚಿತವಾಗಿ ಎಲ್ಲ ಪರೀಕ್ಷಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಪರೀಕ್ಷಾ ಕೇಂದ್ರಕ್ಕೆ ಬರುವಾಗ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ ಹಾಗೂ ಸರಕಾರ ಕೊಟ್ಟಿರುವ ಮಾಸ್ಕ್‍ನ್ನು ಪ್ರತಿಯೊಬ್ಬರು ಉಪಯೋಗಿಸಬೇಕು ಎಂದು ಸರಕಾರದ ಆದೇಶವಾಗಿದೆ. ಈ ಸಂದರ್ಭದಲ್ಲಿ ಪರೀಕ್ಷಾ ಅಧೀಕ್ಷಕರಾದ ಶ್ರೀ ಡಿ.ಬಿ.ಪಾಟೀಲ ಪರೀಕ್ಷಾ ಸಹಾಯಕರಾದ ಶ್ರೀ ಪ್ರಭು ಜೈನರ ಹಾಗೂ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಕಂದಾಯ ಅಧಿಕಾರಿ ಎಫ್.ಜಿ. ಗಿಡ್ಡಿ, ಪೌರ ಕಾರ್ಮಿಕ ಶಂಭು ಮಾಸ್ತಿ ಸೇರಿದಂತೆ ಪುರಸಭೆ ಪೌರ ಕಾರ್ಮಿಕರು ಹಾಗೂ ಇನ್ನಿತರರು ಇದ್ದರು.

 - FOR ADVERTISEMENT CONTACT -
- 9902523698 -