ಹದಗೆಟ್ಟ ಮುಖ್ಯರಸ್ತೆಗೆ ಬೇಗನೆ ಮುಕ್ತಿ ನೀಡಲಾಗುವುದು -ಮುಖ್ಯಾಧಿಕಾರಿ ದಡ್ಡಿ.


ತೇರದಾಳ: ತೇರದಾಳ ಪಟ್ಟಣದ ಪ್ರವೇಶದ ಪ್ರಮುಖ ರಸ್ತೆಯ ಹದಗೆಟ್ಟು ಸುಮಾರು ತಿಂಗಳುಗಳೇ ಗತಿಸಿಹೋಗಿವೆ.ಈ ರಸ್ತೆಯು ತೇರದಾಳ ಪಟ್ಟಣದಲ್ಲಿರುವ ಮುಖ್ಯ ಕಚೇರಿಗಳಾದ ವಿಶೇಷ ತಹಶೀಲದಾರ  ಕಚೇರಿ ಹಾಗೂ ಉಪನೋಂದಣಿ ಕಚೇರಿ ಹಾಗೂ ಮಾರ್ಕೆಟಗೆ ಹೀಗೆ ಈ ಪಟ್ಟಣಕ್ಕೆ ಅತೀ ಮುಖ್ಯರಸ್ತೆ ಇದಾಗಿರುವದರಿಂದ, ಇಲ್ಲಿ ದಿನಂಪ್ರತಿ ನೂರಾರು ವಾಹನಗಳು ಹಾಗೂ ಸಾರ್ವಜನಿಕರು ಈ ಮಾರ್ಗವನ್ನೇ ಅನುಸರಿಸಿ ಹೋಗುತ್ತಾರೆ. ಹೀಗಾಗಿ ಈ ರಸ್ತೆಯು ಯಾವಾಗಲೂ ಜನಸಂದನಿಯಿಂದ ಕೂಡಿರುತ್ತದೆ.ಪಟ್ಟಣದ ಅತೀ ಮುಖ್ಯವಾದ ಈ ರಸ್ತೆಯು ಹದಗೆಟ್ಟಿದ್ದರಿಂದ ಕಚೇರಿ ಕೆಲಸ ಕಾರ್ಯಕ್ಕಾಗಿ ತೇರದಾಳಕ್ಕೆ ಬರುವ ಸಾರ್ವಜನಿಕರು ನಿತ್ಯವೂ ಸಂಬಂದಪಟ್ಟ ಇಲಾಖೆಯವರನ್ನು ಶಪಿಸುತ್ತಿದ್ದಾರೆ. ಈಗಾಗಲೇ ತಾಲೂಕಾಗಿರುವ ಈ ಪಟ್ಟಣಕ್ಕೆ ಇನ್ನು ಸಾಕಷ್ಟು ರೀತಿಯ ಕೆಲಸ ಕಾರ್ಯಗಳು ಮಾಡಬೇಕಾದ ಅವಶ್ಯಕತೆ ಇದೆ. ಹೀಗಾಗಿ ಸಂಭಂದಪಟ್ಟ ಅಧಿಕಾರಿಗಳು ದಯವಿಟ್ಟು ಈ ಬಗ್ಗೆ ನಿರ್ಲಕ್ಷಮಾಡದೆ ಕೂಡಲೇ ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಸಾರ್ವಜನಿಕರು ಹಾಗೂ ತೇರದಾಳ ತಾಲೂಕ ಹೋರಾಟ ಸಮೀತಿಯ ಸದಸ್ಯರು ಈ ಮೂಲಕ ಸಂಬಂದಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ.
                                                           ಮುಖ್ಯಾಧಿಕಾರಿಗಳ ಸ್ಪಷ್ಟಣೆ: ಸರಕಾರದ ಆದೇಶದ ಪ್ರಕಾರ ಸಾರ್ವಜನಿಕರಿಗೆ ದಿನದ ಇಪ್ಪತ್ನಾಲ್ಕು ತಾಸು 
ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ಪಟ್ಟಣದ ಎಲ್ಲಾ ಕಡೆಗಳಲ್ಲೂ ಪೈಪ್ ಅಳವಡಿಸುವ ಕಾಮಗಾರಿ ಪ್ರಾರಂಭಮಾಡಲಾಗಿದೆ.ಈಗಾಗಲೆ ಪಟ್ಟಣದ ಸಾಕಷ್ಟು ಕಡೆಗಳಲ್ಲಿ ಪೈಪ್ ಅಳವಡಿಸಲಾಗಿದೆ
ಇನ್ನೂ ಕೆಲವೆ ಕೆಲವು ವಾರ್ಡಗಳಲ್ಲಿ ಮಾತ್ರ ಕೆಲಸ ಬಾಕಿ ಉಳಿದಿದೆ.ಹಿಗಾಗಿ ಈ ಬಾಗದಲ್ಲಿ ಇನ್ನೂ ಪೈಪ್ ಅಳವಡಿಸಲಾಗಿಲ್ಲ. ಈ ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಆಂದ್ರಪ್ರದೇಶದ ಮೂಲದವರಾಗಿದ್ದು ಹೀಗಾಗಿ ಈಗ ಕೊವಿಡ್ ಕಾರಣದಿಂದಾಗಿ
ಗುತ್ತಿಗೆದಾರರು ಅಲ್ಲಿಂದ ಬಂದಿರುವುದಿಲ್ಲ. ಇದರಿಂದ ಈ ಕಾಮಗಾರಿ ಬಾಕಿಉಳಿದಿದೆ.ಈಗಾಗಲೇ ನಾನು 
ಈ ಬಗ್ಗೆ ಕ್ಷೇತ್ರದ ಶಾಸಕರ ಗಮನಕ್ಕೂ ಸಹ ತಂದಿದ್ದೇನೆ.ಅವರು ಸಹ ಸಂಬಂದಿಸಿದ ಗುತ್ತಿಗೆದಾರರಿಗೆ  ಪೋನ ಮುಖಾಂತರ ಮಾತನಾಡಿ ಕೂಡಲೇ ಕಾಮಗಾರಿ ಮುಗಿಸಲು ತಾಕೀತು ಮಾಡಿದ್ದಾರೆ. ಆದ್ದರಿಂದ
ಕಾಮಗಾರಿಯು ಕೂಡಲೇ ಪ್ರಾರಂಭವಾಗುವುದು ಎಂದು ತಿಳಿಸಿದರು.