ಬನಹಟ್ಟಿಯ ಕೆಎಚ್‍ಡಿಸಿ ಕಾಲನಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಎಚ್‍ಡಿಸಿ ನೇಕಾರ ಮುಖಂಡರು.
ಶಾಸಕರ ಬಗ್ಗೆ ತಿಳಿದು ಮಾತನಾಡಲಿ
ರಬಕವಿ-ಬನಹಟ್ಟಿ,ಜೂ17: ಕೊರೊನಾ ಸಂದರ್ಭದಲ್ಲಿಯೂ ಶಾಸಕ ಸಿದ್ದು ಸವದಿ ಕೆಎಚ್‍ಡಿಸಿ ನೇಕಾರರಿಗೆ ಸಹಾಯ ಹಸ್ತ ಚಾಚಿದ್ದು, ಅವರಿಗೆ ಅನುಕೂಲವಾಗಲೆಂದು ನೂಲು ಕೊಡಿಸುವ ಮೂಲಕ ಕೆಎಚ್‍ಡಿಸಿ ನೇಕಾರರ ಉಪಜೀವನಕ್ಕೆ ನೆರವಾಗುವುದರ ಜೊತೆಗೆ ಎಲ್ಲ ನೇಕಾರರಿಗೆ ಕಿಟ್‍ಗಳನ್ನು ಒದಗಿಸಿ ಮಾನವೀಯತೆ ಮೆರೆದಿದ್ದಾರೆ ಎಂದು ಕೆಎಚ್‍ಡಿಸಿ ನೇಕಾರ ಮುಖಂಡ ಸಿದ್ದಪ್ಪ ಗಂವಾರ ಹೇಳಿದರು.
ನಗರದ ಕೆಎಚ್‍ಡಿಸಿ ಕಾಲನಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆಎಚ್‍ಡಿಸಿ ನೇಕಾರರಿಗೆ ವಿಶೇಷ ಅನುದಾನದಡಿಯಲ್ಲಿ 47 ಲಕ್ಷ ಹಣ ಮಂಜೂರಿ ಮಾಡಿಸಿಕೊಂಡು ಬಂದಿರುವ ಶಾಸಕರು ಅದನ್ನು ಸಂಕಷ್ಟದ ಸಂದರ್ಭದಲ್ಲಿ ಎಲ್ಲ ನೇಕಾರರಿಗೆ ಉಪಯೋಗಕ್ಕಾಗಿ ಬಳಸಬೆಕೆಂಬ ಉದ್ದೇಶ ಹೊಂದಿದ್ದರು. ಆ ನಿಟ್ಟಿನಲ್ಲಿ ನಾವು ಕೂಡಾ ಅವರಿಗೆ ಮನವಿ ಸಲ್ಲಿಸಿದ್ದೇವು. ಆದರೆ ವಿರೋದ ಪಕ್ಷದವರು ಅವರನ್ನು ದೂಷಿಸುವುದು ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಸದಸ್ಯ ಶಿವಾನಂದ ಬುದ್ನಿ, ಮಾಜಿ ಸಚಿವೆ ಉಮಾಶ್ರೀಯವರು 5 ವರ್ಷಗಳ ಕಾಲ ಆಡಳಿತ ನಡೆಸಿದರು. ಆ ಸಂದರ್ಭದಲ್ಲಿ ಅನೇಕ ಹೋರಾಟಗಳನ್ನು ಮಾಡಿದರು. ನೇಕಾರರನ್ನು ನಿರ್ಲಕ್ಷಿಸಿದರು. ನೇಕಾರರ ಮಗಳೆಂದು ಆರಿಸಿ ಬಂದು ಕೆಎಚ್‍ಡಿಸಿ ನೇಕಾರರಿಗೆ ಉಪಯೋಗವಾಗುವ ಯಾವುದೇ ಯೋಜನೆಗಳನ್ನು ತರದೇ ನೇಕಾರರು ಸಂಕಷ್ಟಪಡುವಂತೆ ಮಾಡಿದರು ಎಂದರು.
ರಾಜಕೀಯ ಇತಿಹಾಸದಲ್ಲಿಯೇ ನೇಕಾರರ ಪರವಾಗಿ ಧ್ವನಿ ಎತ್ತಿದವರು ಶಾಸಕ ಸಿದ್ದು ಸವದಿಯವರು. ನೇಕಾರ ಸಮ್ಮಾನ ಯೋಜನೆಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಾಸಕ ಸಿದ್ದು ಸವದಿಯವರಿಗೆ ಸಮಸ್ತ ನೇಕಾರರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಅಲ್ಲದೇ ನೇಕಾರರ ಸಮ್ಮಾನ ಯೋಜನೆಯನ್ನು 2ಸಾವಿರದಿಂದ ರೂ. 5000ವರೆಗೆ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಂಕರ ಕುರಂದವಾಡ, ವಿರೇಶ ಕುಚನೂರ, ನಾಗಪ್ಪ ಬಾವಲತ್ತಿ, ಗುರಬಸು ಶೀಲವಂತ, ದೇವೆಂದ್ರ ಬುದ್ನಿ, ರಾಜು ಪೂಜಾರಿ, ಪ್ರಕಾಶ ಮನಗೂಳಿ, ಶಂಕರೆಪ್ಪ ನೀಲವಾಣಿ, ನೀಲಗಂಗಾ ಮಸಗಿ, ಭಾರತಿ ಗಂಜಾಳ ಸೇರಿದಂತೆ ಅನೇಕರು ಇದ್ದರು.
- FOR ADVERTISEMENT CONTACT -
-9902523698 -


Social Plugin