ರಬಕವಿ-ಬನಹಟ್ಟಿ ಶಾಖೆಯ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ವತಿಯಿಂದ ರಬಕವಿ-ಬನಹಟ್ಟಿ ನಗರಸಭೆ ಕಾರ್ಮಿಕರಿಗೆ ಆಹಾರ ಪದಾರ್ಥದ ಕಿಟ್ ವಿರಿಸಲಾಯಿತು.
ಪೌರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ
ರಬಕವಿ-ಬನಹಟ್ಟಿ,ಜೂ17: ನಗರಸಭೆ ಕಾರ್ಯಾಲಯದಲ್ಲಿ ರಬಕವಿ-ಬನಹಟ್ಟಿ ಶಾಖೆಯ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ( ಗ್ರಾಮೀಣ ಕೋಟಾ) ಹಣಕಾಸು ಸಂಸ್ಥೆ ವತಿಯಿಂದ ಕೋವಿಡ್-19 ಸಂದರ್ಭದಲ್ಲಿ ತಮ್ಮ ಕೊರೊನಾವನ್ನು ಲೆಕ್ಕಿಸದೇ ಸಾರ್ವಜನಿಕರ ಸೇವೆ ಮಾಡಿದ ಪೌರ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆಯನ್ನು ಪೌರಾಯುಕ್ತ ಶ್ರೀನಿವಾಸ ಜಾಧವ ನೆರವೆರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ಶ್ರೀನಿವಾಸ ಜಾಧವ ಮಾತನಾಡಿ, ಕೋವಿಡ್ -19 ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್‍ನ್ನು ಕ್ರೆಡಿಟ್ ಎಸಿಸ್ ಗ್ರಾಮೀಣ ಲಿ. ( ಗ್ರಾಮೀಣ ಕೋಟಾ) ಸಂಸ್ಥೆಯವರು ವಿತರಿಸುತ್ತಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಿ, ಆಹಾರ ಪದಾರ್ಥದ ಕಿಟ್ ವಿರಿಸಿದ ಸಂಸ್ಥೆಯವರಿಗೆ ಧನ್ಯವಾದಗಳು ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಎರಿಯಾ ಮ್ಯಾನೇಜರ ಮಂಜುನಾಥ ಕಮ್ಮಾರ, ಶಾಖಾ ವ್ಯಾವಸ್ಥಾಪಕರಾದ ಪರಮೇಶ ಎಚ್. ಸಿ. , ಬಸವರಾಜ ಸುಂಕದ, ನಗರಸಭೆ ಮ್ಯಾನೇಜರ ಅಶೋಕ ಗುಡಿಮನಿ, ಆರೋಗ್ಯ ನಿರೀಕ್ಷಕರಾದ ರಾಜಕುಮಾರ ಹೊಸೂರ, ಸವಿತಾ ಕೋಳಿ, ಸುರೇಶ ಪರಕಾಳಿ, ಕೆ. ಎ. ಶೇಖ ಸೇರಿದಂತೆ ಅನೇಕರು ಇದ್ದರು.
Social Plugin