ನೇಕಾರ ಸಮ್ಮಾನ್ ಯೋಜನೆ 

ತಾಂತ್ರಿಕ ತೊಂದರೆಗಳಿದ್ದರೆ ಸರಳೀಕರಣಗೊಳಿಸುವ ಭರವಸೆ

ರಬಕವಿ-ಬನಹಟ್ಟಿ,ಜೂ17: ದುಡಿಯುವ ಕೂಲಿ ನೇಕಾರರ ಸಹಾಯಕ್ಕೆ ನೇಕಾರ ಸಮ್ಮಾನ್ ಯೋಜನೆ ಜಾರಿಗೊಳಿಸಿರುವ ರಾಜ್ಯ ಸರ್ಕಾರ, ಎಲ್ಲ ನೇಕಾರ ವರ್ಗಕ್ಕೆ ತಲುಪಬೇಕಾಗದ ಅನಿವಾರ್ಯತೆಯಿದೆ ಪಾವರ್‍ಲೂಮ್ ಪ್ರತಿ ನೇಕಾರನ ವಿವರಣೆ ಪಡೆಯುವಲ್ಲಿ ಮಾಲಿಕರ ಪಾತ್ರ ಹಿರಿದಾಗಿದೆ. ಅಲ್ಲದೆ ಯೋಜನೆಯಲ್ಲಿ ನಿಯಮಗಳು ಜಟಿಲವಾದಲ್ಲಿ ಸರಳಿಕರಣಗೊಳಿಸುವದಾಗಿ ಶಾಸಕ ಸಿದ್ದು ಸವದಿ ಭರವಸೆ ನೀಡಿದರು.

ನಗರದ ಭದ್ರನ್ನವರ ಸಮುದಾಯ ಭವನದಲ್ಲಿ ಏರ್ಪಡಿಸಲಾದ ನೇಕಾರ ಸಮ್ಮಾನ ಯೋಜನೆ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನೇಕಾರರ ಸಮಸ್ಯೆಗಳು ಹಲವಾರು, ಒಂದೊಂದೇ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಸವದಿ ತಿಳಿಸಿದರು.

ಸರ್ಕಾರದಿಂದ ಸೀರೆ ಖರೀದಿಗೆ ಈಗಾಗಲೇ ಏಳೆಂಟು ಶಾಸಕರ ನೇತೃತ್ವದಲ್ಲಿ ಒತ್ತಡ ಹೇರಲಾಗಿದೆ. ಕೂಲಿ ನೇಕಾರರಿಗೆ ಒಂದೇ ವರ್ಷ 2 ಸಾವಿರ ರೂ.ಗಳನ್ನು ಒದಗಿಸುವಲ್ಲಿ ಸರ್ಕಾರ ತಿಳಿಸಿದೆ. ಅದನ್ನು ರೈತರಂತೆ ನೇಕಾರರಿಗೂ ನಿರಂತರ ಯೋಜನೆ ಜಾರಿಗೊಳಿಸುವಲ್ಲಿ ಮುಖ್ಯಮಂತ್ರಿ ಬಳಿ ಮನವಿ ಮಾಡಲಾಗಿದೆ ಎಂದರು.

ನೇಕಾರರ ಬಲವರ್ಧನೆ ನನ್ನ ಗುರಿ: ನೇಕಾರ ಪ್ರಧಾನ ಕ್ಷೇತ್ರವಾಗಿರುವ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ನೇಕಾರರೇ ಬಹುಸಂಖ್ಯಾತರಿದ್ದಾರೆ. ನೇಕಾರರ ಪರ ಹೋರಾಟ ನನ್ನದಾಗಿದ್ದು, ವಿಧಾನಸಭೆ ಕಲಾಪಗಳಲ್ಲಿ ನೇಕಾರರ ಸಮಸ್ಯೆ ಕುರಿತು ಸಾಕಷ್ಟು ಕಣ್ತೆರೆಯುವಲ್ಲಿ ಯಶಸ್ವಿ ಕಂಡವನು. ಶೋಚನೀಯ ಸ್ಥಿತಿಯಲ್ಲಿರುವ ಕೈಮಗ್ಗ ಹಾಗು ವಿದ್ಯುತ್ ಮಗ್ಗಗಳ ಕೂಲಿ ನೇಕಾರರಿಗೂ ಸಹಿತ ಗರಿಷ್ಠ 25 ಸಾವಿರ ರೂ.ಗಳ ಸಾಲ ಒದಗಿಸುವಲ್ಲಿ ಈಗಾಗಲೇ ಕೆಲ ಸಹಕಾರಿ ಸಂಘಗಳು ಮುಂದಾಗಿವೆ. ಇದಕ್ಕೆ ಸರ್ಕಾರದ ಸಹಾಯ ಹಸ್ತದೊಂದಿಗೆ ಎಲ್ಲ ಸಹಕಾರಿ ಸಂಘಗಳಿಂದಲೂ ಸುಲಭ ಸಾಲದೊಂದಿಗೆ ದುಡಿಮೆಗೆ ಸಹಕಾರಿಯಾಗುತ್ತೇವೆಂದರು.

ಇದೇ ಸಂದರ್ಭ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಎಂ.ಜಿ. ಕೊಣ್ಣೂರ, ನೇಕಾರ ಸಮ್ಮಾನ ಯೋಜನೆಗೆ ಸಂಬಂಧ ಅರ್ಜಿ ತುಂಬುವ ಬಗ್ಗೆ ಹಾಗು ನೇಕಾರರನ್ನು ಯಾವ ರೀತಿ ಗುರ್ತಿಸಿ ಅವರ ಸಂಪೂರ್ಣ ಪರಿಚಯ ಒದಗಿಸಬೇಕೆಂದು ಪಾವರ್‍ಲೂಮ್ ಮಾಲಿಕರಿಗೆ ತಿಳಿಹೇಳಿದರು.

ಹಣ ಲೂಟಿ ಮಾಡಿಲ್ಲ: ಹಸಿವು ನೀಗಿಸುವ ಸಲುವಾಗಿ ಕೊರೊನಾ ಲಾಕ್‍ಡೌನ್‍ಲ್ಲಿ ನೇಕಾರರಿಗೆಂದು ಸುಮಾರು 1.45 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 27 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆಗೆ ಸಂಬಂಧ ಕೆಎಚ್‍ಡಿಸಿ ನೇಕಾರರಿಗೆ ಮೀಸಲಿಟ್ಟ 47 ಲಕ್ಷ ರೂ.ಗಳನ್ನು ಬಳಕೆ ಮಾಡುವ ಸಂದರ್ಭ ವಿಪಕ್ಷ ವಿನಾಕಾರಣ ಅಡ್ಡಪಡಿಸಿದ್ದಲ್ಲದೆ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸುತ್ತಿರುವ ಬದಲಾಗಿ ಪಕ್ಷಬೇಧ ಮರೆತು ಸಂಕಷ್ಟದಲ್ಲಿರುವ ನೇಕಾರರ ಸಹಾಯಕ್ಕೆ ಮುಂದಾಗಲೆಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಪಾವರ್‍ಲೂಮ್ ಮಾಲಿಕರ ಸಂಘದ ಅಧ್ಯಕ್ಷ ಶಂಕರ ಜಾಲಿಗಿಡದ, ಶಂಕರ ಜುಂಜಪ್ಪನವರ, ಬಸವರಾಜ ಭದ್ರನ್ನವರ, ಬ್ರಿಜ್‍ಮೋಹನ ಡಾಗಾ, ಕಾವೇರಿ ಕೈಮಗ್ಗ ನಿಗಮದ ನಿರ್ದೇಶಕ ಆನಂದ ಕಂಪು, ರಾಮಣ್ಣ ಭದ್ರನ್ನವರ, ಸುರೇಶ ಚಿಂಡಕ, ರಾಮಣ್ಣ ಭದ್ರನ್ನವರ, ಮಲ್ಲು ಬಾಣಕಾರ ಸೇರಿದಂತೆ ಅನೇಕರಿದ್ದರು.


- FOR ADVERTISEMENT CONTACT -
                  -9902523698 -