ಚಿಮ್ಮಡದಲ್ಲಿ ಬಡಕಲಾವಿದರಿಗೆ ಆಹಾರ ಕಿಟ್ ವಿತರಣೆ
ಪ್ರತಿಯೊಬ್ಬರೂ ಶರಣ ಸಂಸ್ಕøತಿ ಮೈಗೂಡಿಸಿಕೊಳ್ಳಿ-ಪ್ರಭು ಶ್ರೀ
(ಸ್ವರೂಪ ಸಂದರ್ಶನ ನ್ಯೂಜ್ ಮ.ಕೃ.ಮೇಗಾಡಿ)
ಚಿಮ್ಮಡ : ಕೈ ಮುಗಿಯುವುದು, ದೂರ ನಿಂತು ಮಾತನಾಡುವುದು, ಶುದ್ಧವಾದ ಮಿತ ಆಹಾರ ಸೇವನೆ ಸೇರಿದಂತೆ ಮನುಷ್ಯನಿಗೆ ಆರೋಗ್ಯಪೂರ್ಣ ವಿಚಾರಗಳನ್ನು 12ನೇ ಶತಮಾನದಲ್ಲಿಯೇ ಬಸವಾದಿ ಪ್ರಮಥರು ವಚನಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ. ಕೊರೊನಾದಿಂದ ದೂರವಿರಲು ಶರಣ ಸಂಸ್ಕøತಿಯನ್ನು ಮೈಗೂಡಿಸಿಕೊಳ್ಳುವುದು ಅವಶ್ಯವಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ರಬಕವಿ-ಬನಹಟ್ಟಿ ತಾಲೂಕಾ ಗೌರವಾಧ್ಯಕ್ಷರು, ಚಿಮ್ಮಡ ವಿರಕ್ತಮಠದ ಪೀಠಾಧ್ಯಕ್ಷರಾದ ಶ್ರೀಪ್ರಭು ಸ್ವಾಮಿಗಳು ಹೇಳಿದರು.
ಮಂಗಳವಾರ ಸಂಜೆ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಜಿಲ್ಲಾ ಘಟಕ ಬಾಗಲಕೋಟ, ತಾಲೂಕಾ ಘಟಕ ರಬಕವಿ-ಬನಹಟ್ಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಆಯ್ದ ಬಡಕಲಾವಿದರಿಗೆ ಆಹಾರ ಧಾನ್ಯ ಕಿಟ್ ವಿತರಿಸಿ ಮಾತನಾಡಿದ ಅವರು ಮಾಸ್ಕ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದರು.
ಮುಧೋಳ ಕ್ಷೇತ್ರಸಮನ್ವಯಾಧಿಕಾರಿ ಮಹಾಂತೇಶ ನರಸನಗೌಡರ ಮಾತನಾಡಿ ನಮ್ಮ ಭಾರತೀಯ ಸಂಸ್ಕøತಿ, ಪರಂಪರೆ, ಇತಿಹಾಸವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ಜಾನಪದ ಕಲಾವಿದರ ಪಾತ್ರವೂ ಇದೆ. ಆತ್ಮತೃಪ್ತಿಗಾಗಿ ಕಲೆ ಪ್ರದರ್ಶಿಸಿ, ಕಲೆಯನ್ನು ಜೀವಂತವಾಗಿಟ್ಟಿರುವ ಕಲಾವಿದರು ನಮ್ಮ ದೇಶದ ಆಸ್ತಿ. ಹೆಮ್ಮಾರಿ ಕೊರೊನಾ ಪ್ರಭಾವದಿಂದ ಕಲಾವಿದರು ಆತಂಕಕ್ಕೊಳಗಾಗಿದ್ದಾರೆ. ಅವರಿಗೆ ಕರ್ನಾಟಕ ಜಾನಪದ ಪರಿಷತ್ತು ನೆರವು ಒದಗಿಸುವ ಮೂಲಕ ಆಸರೆಯಾಗಿದ್ದು ಶ್ಲಾಘನೀಯವೆಂದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಟಿ.ತಿಮ್ಮೆಗೌಡ ಅವರ ಪ್ರಯತ್ನದಿಂದ ಸರಕಾರ 3ಕೋಟಿ ರೂ.ಗಳನ್ನು ರಾಜ್ಯದ 2600 ಬಡಕಲಾವಿದರ ಖಾತೆಗೆ 2ಸಾವಿರ ರೂ. ಜಮೆ ಮಾಡಿ ನೆರವಾದರೆ, ರಾಜ್ಯಾಧ್ಯಕ್ಷರಾದ ತಿಮ್ಮೇಗೌಡ ಅವರ ಮತ್ತೊಂದು ಸೂಚನೆ ಮೇರೆಗೆ ಆಯ್ದ ಉಳಿದ ಕಲಾವಿದರಿಗೂ ಆಹಾರ ಧಾನ್ಯ ಕಿಟ್ ವಿತರಿಸಲು ಜಿಲ್ಲೆಯಾದ್ಯಾಂತ ಸಂಚರಿಸಲಾಗುತ್ತಿದೆ ಎಂದರು.
ಕರ್ನಾಟಕ ಜಾನಪದ ಪರಿಷತ್ತಿನ ರಬಕವಿ-ಬನಹಟ್ಟಿ ತಾಲೂಕಾ ಘಟಕದ ಅಧ್ಯಕ್ಷ ಮ.ಕೃ.ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದರಾದ ಶಂಕರ ರಾವಳ, ಪ್ರಕಾಶ ಹನಗಂಡಿ, ಅನೀಲ ಹಾಸಿಲಕರ, ಶಾಂತಯ್ಯ ಮಠದ, ಪುಂಡಲೀಕ ಗುರವ, ಬರಮು ಕೋಳಿ ಇನ್ನಿತರರಿಗೆ ಆಹಾರಧಾನ್ಯದ ಕಿಟ್ ವಿತರಿಸಲಾಯಿತು.
ಮುಧೋಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಂಗಮೇಶ ನೀಲಗುಂದ, ಬಯಲÁಟ ಅಕಾಡೆಮಿ ಮಾಜಿ ಸದಸ್ಯೆ  ಸುಂದ್ರವ್ವ ಮೇತ್ರಿ, ಜಿಲ್ಲಾ ಕಜಾಪ ಸದಸ್ಯ ಶ್ರೀಶೈಲ ಪಟ್ಟಣಶೆಟ್ಟಿ ಈ ಸಂದರ್ಭದಲ್ಲಿದ್ದರು.
ಮಹಾಲಿಂಗಪುರ ವಲಯಾಧ್ಯಕ್ಷ ಬಸವರಾಜ ಮೇಟಿ ಸ್ವಾಗತಿಸಿದರು. ತೇರದಾಳ ವಲಯಾಧ್ಯಕ್ಷ ಗಂಗಾಧರ ಮೋಪಗಾರ ವಂದಿಸಿದರು.
ಫೋಟೊ ವಿವರ : ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ವಿರಕ್ತಮಠದಲ್ಲಿ ಮಂಗಳವಾರ ಸಂಜೆ ಬಡಕಲಾವಿದರಿಗೆ ಆಹಾರ ಧಾನ್ಯದ ಕಿಟ್ ವಿತರಿಸಲಾಯಿತು.


     - FOR ADVERTISEMENT CONTACT - 
                - 9902523698 -