ಬನಹಟ್ಟಿಯ ಲಕ್ಷ್ಮೀ ನಗರದ ಪ್ರದೇಶವನ್ನು ಸೀಲ್‍ಡೌನ್ ಮಾಡಿರುವದು.
ರಬಕವಿ-ಬನಹಟ್ಟಿ,ಜೂ22: ಇತ್ತೀಚೆಗೆ ಮಹಾರಾಷ್ಟ್ರದ ಸೊಲ್ಲಾಪೂರದಿಂದ ಬಂದಿದ್ದ ಮಹಿಳೆಯಲ್ಲಿ ಕೋವಿಡ್-19 ಪಾಸಿಟಿವ್ ಪತ್ತೆಯಾಗಿರುವ ಹಿನ್ನಲೆಯಲ್ಲಿ ಬನಹಟ್ಟಿ ಪಟ್ಟಣದ ಲಕ್ಷ್ಮೀ ನಗರದ ಮಹಿಳೆಯ ಮನೆಯ ಪರಿಸರವನ್ನು ಸೀಲ್‍ಡೌನ್ ಮಾಡಲಾಗಿದೆ.
ಲಾಕ್‍ಡೌನ್ ಮಧ್ಯದಲ್ಲಿ ಅನಾರೋಗ್ಯ ಕಾರಣ ಮಹಿಳೆ ಹೆಚ್ಚಿನ ಚಿಕಿತ್ಸೆಗೆಂದು ಮಹಾರಾಷ್ಟ್ರದ ಸೊಲ್ಲಾಪೂರಕ್ಕೆ ತೆರಳಿದ್ದರು. ವಾಪಸ್ ಕಳೆದ ಜೂನ್ 11 ರಂದು ಬನಹಟ್ಟಿಗೆ ಬಂದಿದ್ದು, ತೀವ್ರ ಕಾಲು ನೋವು ಹಾಗು ಅನಾರೋಗ್ಯ ಕಾರಣ ಲಕ್ಷ್ಮೀ ನಗರದ ಮನೆಯಲ್ಲಿ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಜೂನ್ 19 ರಂದು ಗಂಟಲು ದ್ರವ ಹಾಗು ರಕ್ತದ ಮಾದರಿ ಪರೀಕ್ಷೆಯನ್ನು ಸ್ವ್ಯಾಬ್ ಪರೀಕ್ಷೆಗೆಂದು ಕಳಿಸಿದ ಸಂದರ್ಭ ಪಾಸಿಟಿವ್ ಬಂದಿರುವ ಹಿನ್ನಲೆ ಸೋಮವಾರ ಬೆಳಿಗ್ಗೆ ಅವರನ್ನು ಬಾಗಲಕೋಟೆಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘೋಷಿತ ಕಂಟೈನ್‍ಮೆಂಟ್ ಝೋನ್‍ನಲ್ಲಿರುವ ಮನೆಯಲ್ಲಿ ಒಟ್ಟು 5 ಮಂದಿ ವಾಸವಿದ್ದಾರೆ. ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಸುತ್ತಲಿನ ಪ್ರದೇಶದಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಿ, ಸ್ಯಾನಿಟೈಜ್ ಮಾಡಲಾಗಿದೆ. 100 ಮೀ ಸುತ್ತಲಿನ ಪ್ರದೇಶದ ಜನತೆಗೆ 21 ದಿನಗಳ ಕಾಲ ಮನೆಯಿಂದ ಹೊರಬಾರದಂತೆ ತಿಳಿಸಲಾಗಿದೆ.
ತಹಶೀಲ್ದಾರ ಪ್ರಶಾಂತ ಚನಗೊಂಡ, ಗ್ರೇಡ್ 2 ತಹಶೀಲ್ದಾರ ಎಸ್.ಬಿ. ಕಾಂಬಳೆ ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ವೃತ್ತ ನಿರೀಕ್ಷಕ ಕರುಣೇಶಗೌಡ, ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ ಹಾಗು ನಗರಸಭೆ ಸಿಬ್ಬಂದಿ ಸೀಲ್‍ಡೌನ್ ಕಾರ್ಯಾಚರಣೆ ನಡೆಸಿದರು.
- FOR ADVERTISEMENT CONTACT -
- 9902523698 -

Social Plugin