ತೇರದಾಳ ಪಟ್ಟಣದ ಶ್ರೀಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಮ್.ನ್ಯಾಮಗೌಡ ವೀಕ್ಷಣೆ ಮಾಡಿದರು.
ತೇರದಾಳ : ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಚನಲ್ಲಿ ನಡೆಯಬೇಕಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಸರಕಾರ ಮುಂದೂಡಿತ್ತು. ಆ ಪರೀಕ್ಷೆಯನ್ನು ಈಗ ಇದೆ ಜೂನ 25 ರಿಂದ ಜುಲೈ 3ರ ವರೆಗೆ ನಡೆಸುವಂತೆ ಸರಕಾರದ ಆದೇಶದ ಮೇರಗೆ ತಾಲೂಕಿನ ಎಲ್ಲ ಪರೀಕ್ಷಾ ಕೇಂದ್ರಗಳು ಸಿದ್ದಗೊಳ್ಳುತ್ತಿರುವುದನ್ನು ಕ್ಷೇತ್ರಶಿಕ್ಷಣಾಧಿಕಾರಿಗಳು ವೀಕ್ಷಣೆ ಮಾಡುತ್ತಿದ್ದಾರೆ. ಇಂದು ಪಟ್ಟಣದ ಶ್ರೀಸಿದ್ದೇಶ್ವರ ಪ್ರೌಢಶಾಲೆ, ಶ್ರೀಪ್ರಭುಲಿಂಗ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಗುರುಕುಲ ಶಿಕ್ಷಣ ಸಂಸ್ಥೆಯ ಎಸ್‍ಎಮ್ ಹೈಸ್ಕೂಲಿನಲ್ಲಿಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಸರಕಾರದ ಆದೇಶದ ಮೇರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಬರುವ 25ರಿಂದ ಪ್ರಾರಂಭಗೊಳ್ಳುತ್ತಿದ್ದು. ಮುಂಜಾಗೃತ ಕ್ರಮವಾಗಿ ಪರೀಕ್ಷಾ ಕೇಂದ್ರಗಳಲ್ಲಿ ಸ್ವಚ್ಚತೆಯ ಜೊತೆಗೆ ಸೈನಿಟೈಜರ್‍ನ್ನು ಸಿಂಪರಣೆ ಮಾಡಲಾಗುವುದು ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್‍ನ್ನು ಕೊಡಲಾಗುವುದು. ಮತ್ತು ಸಾಮಾಜಿಕ ಅಂತರವನ್ನು ಕಾಯುವ ದೃಷ್ಟಿಯಿಂದ ಒಬ್ಬ ವಿದ್ಯಾರ್ಥಿಯಿಂದ ಇನ್ನೊಬ್ಬ ವಿದ್ಯಾರ್ಥಿಗೆ 3ಅಡಿಯಷ್ಟು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಪಟ್ಟಣದಲ್ಲಿ ಮೂರು ಪರೀಕ್ಷಾ ಕೇಂದ್ರಗಳಿದ್ದು ಎಸ್‍ಎಮ್ ಪ್ರೌಢಶಾಲೆಯಲ್ಲಿ 18, ಶ್ರೀಸಿದ್ಧೇಶ್ವರ ಪ್ರೌಢಶಾಲೆಯಲ್ಲಿ 16, ಎಸ್‍ಪಿ ಪ್ರೌಢಶಾಲೆಯಲ್ಲಿ 16 ಪರೀಕ್ಷಾ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಒಂದು ಕೊಠಡಿಯಲ್ಲಿ 16 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎಮ್.ನ್ಯಾಮಗೌಡ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಬೇಕು. ಪರೀಕ್ಷೆಗೆ ಮುಂಜಾಗೃತವಾಗಿ ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಸರಕಾರಿ ವೈದ್ಯಾಧಿಕಾರಿಗಳು ವೈದ್ಯಕೀಯ ತಪಾಸಣೆ ಮಾಡುವರು. ವಿದ್ಯಾರ್ಥಿಗಳು ಕೊರೊನಾಗೆ ಹೆದರದೆ ಜಾಗೃತವಾಗಿರಬೇಕು. ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಬರೆಯುವಂತೆ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಆರ್.ಎಮ್. ಸಂಪಗಾವಿ, ಬಿ.ಜಿ.ಮುದಕನ್ನವರ, ಡಿ.ಬಿ.ಪಾಟೀಲ, ಎಸ್.ಎನ್.ಹೆಬ್ಬಾಳೆ, ಬಿ.ಸಿ ಮುಕರಿ, ಉಗಾರ ಸೇರಿದಂತೆ ಪ್ರೌಢಶಾಲಾ ಸಿಬ್ಬಂದಿಯವರು ಇದ್ದರು.
- FOR ADVERTISEMENT CONTACT -
- 9902523698 -



Social Plugin