ಬೇಡಿಕೆ ಇಡೇರದಿದ್ದರೆ ಉಗ್ರ ಹೋರಾಟ, ಸರಕಾರಕ್ಕೆ ಆಶಾ ಕಾರ್ಯಕರ್ತೆಯರ ಎಚ್ಚರಿಕೆ.
ವರದಿ :ಕೆ.ಎಸ್.ರಂಗಸ್ವಾಮಿ
ತೇರದಾಳ: ದೇಶದಲ್ಲಿ ಕೋವಿಡ್ 19 ಕಾಲಿಟ್ಟಾಗಿನಿಂದ ಸರಕಾರದ ನಿಯಮದ ಪ್ರಕಾರ ಅತೀ ಮುಂಚೂಣಿಯಲ್ಲಿ ಕೆಲಸ ಮಾಡಿದ ಇಲಾಖೆ ಎಂದರೆ ಆರೋಗ್ಯ ಇಲಾಖೆ.ಈ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳಲ್ಲಿ ಕಾರ್ಯನಿರ್ವಹಿಸುವವರೆಂದರೆ ಪ್ರಮುಖವಾಗಿ ಆಶಾ ಕಾರ್ಯಕರ್ತೆಯರು. ಹೀಗಾಗಿ ಈ ಕೊವಿಡ್ ಬಂದಾಗಿನಿಂದ ಪ್ರಾಣದ ಹಂಗು ತೊರೆದು ಹಗಲಿರುಳು ಕೊರೋನಾ ವಾರಿಯರ್ಸಗಳಾಗಿ ಶ್ರಮಿಸುತ್ತಿದ್ದೇವೆ. ರಾಜ್ಯದಲ್ಲಿರುವ ಪ್ರತಿ ಮನೆಗೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದೇವೆ. ತುಂಬಾ ಅಪಾಯಕಾರಿಯಾದ ಈ ವೈರಸ್ ವಿರುದ್ದ ನಾವು ನಮ್ಮ ಕುಟುಂಬ ಹಾಗೂ ನಮ್ಮ ಪ್ರಾಣವನ್ನು ಲೆಕ್ಕಿಸದೆ ಕಾರ್ಯನಿರ್ವಹಿಸುತ್ತಿದ್ದೇವೆ.ನಮಗೆ ಯಾವುದೇ ರೀತಿಯ ಸುರಕ್ಷತಾ ಸಲಕರಣೆಗಳನ್ನು ನೀಡಿರುವುದಿಲ್ಲ ಇದರಿಂದ ಈಗಾಗಲೇ ಎಷ್ಟೋ ಆಶಾಕಾರ್ಯಕರ್ತರು ಈ ಕೊರೊನಾ ವೈರಸ್‍ಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದ ಸರಕಾರವು ನಮ್ಮ ಸುರಕ್ಷತಾ ಹಿತದೃಷ್ಟಿಯಿಂದ ನಮಗೆ ಅಗತ್ಯತೆಗೆ ಬೇಕಾದಷ್ಟು ಮಾಸ್ಕ, ಫೇಸಸೀಲ್ಡ ಹಾಗೂ ಹ್ಯಾಂಡಗ್ಲೌಸ,ಸ್ಯಾನಿಟೈಜರ,ಹೀಗೆ ಸುರಕ್ಷತಾ ಕಿಟ್‍ಗಳನ್ನು ನೀಡಲೇಬೇಕು. ಅಲ್ಲದೆ ಸರಕಾರ ಈಗ ನೀಡುವ ಎರಡು ಬಗೆಯ ವೇತನದ ಪದ್ಧತಿಯು ಸರಿಯಾದ ಕ್ರಮದಲ್ಲಿ ಇರುವುದಿಲ್ಲ.ನಮ್ಮ ವೇತನ ಸಲುವಾಗಿ ಸೃಷ್ಠಿ ಮಾಡಿದ ಪೋರ್ಟಲ್‍ದಿಂದ ನಮ್ಮ ವೇತನ ಸರಿಯಾಗಿ ನಮಗೆ ಜಮಾ ಆಗುತ್ತಿಲ್ಲ ಕಾರಣ ನಮ್ಮ ವೇತನವು ಒಂದೇ ಸ್ವೀಕೃತಿಯಲ್ಲಿ ಆಗುವಂತೆ ಸರಕಾರವು ಸೂಕ್ತ ಕ್ರಮಕೈಕೊಳ್ಳಬೇಕು.ಆದ್ದರಿಂದ ಈಗ ನೀಡುವ ಪ್ರೋತ್ಸಾಹ ಧನ ಮತ್ತು ಗೌರವಧನ ಎರಡನ್ನು ಒಟ್ಟಿಗೆ ಸೇರಿಸಿ ಮಾಸಿಕ 12000 ಗೌರವ ಧನ ನಿಗದಿಪಡಿಸಿ ವೇತನ ನೀಡಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾವು ಸಾಕಷ್ಟು ಬಾರಿ ಹೋರಾಟ ಮಾಡಿ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ .ಆದರೆ ಸರ್ಕಾರ ಮಾತ್ರ ಭರವಸೆಗಳನ್ನು ನೀಡಿದೆ ಹೊರತು ಇನ್ನೂವರೆಗೂ ನಮ್ಮ ಬೇಡಿಕೆಗಳಿಗೆ ಸ್ಪಂದಿಸಲಿಲ್ಲ.ಈಗಾಗಲೇ ಹಿಂದಿನ ಸಮಸ್ಯೆಗಳ ಜೋತೆಗೆ ಈ ಕೊರೊನಾ ಕಾರಣದಿಂದ ಇನ್ನಷ್ಟು ಸಮಸ್ಯೆಗಳ ಸೇರಿ ನಲುಗಿ ಹೋದ ನಮ್ಮ ಬದುಕು ಅಸಹನೀಯವಾಗಿದೆ. ಇದರಿಂದ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತೇ ಹೋರಾಟದ ಮಾರ್ಗ ಹಿಡಿಯಬೇಕಾಗಿದೆ ಎಂದು ತಿಳಿಸಿದ ಆಶಾಕಾರ್ಯಕರ್ತೆಯರು ಇಂದು ರಾಜ್ಯಾದ್ಯಂತ ಬೇಡಿಕೆಗಳ ಈಡೇರಿಕೆಗಾಗಿ ಮತ್ತೊಮ್ಮೆ ರಾಜ್ಯ ಸರ್ಕಾರಕ್ಕೆ ಹಾಗೂ ಇಲಾಖೆಗಳಿಗೆ ಮನವಿ ಸಲ್ಲಿಸಲಾಗುವುದು,ಅಲ್ಲದೇ ಮುಂದಿನ ಏಳು ದಿನಗಳ ಕಾಲ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿವಿಧ ರೀತಿಯಲ್ಲಿ ಪ್ರತಿಭಟಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧಾರಮಾಡಲಾಗಿದೆ ಎಂದು ತಿಳಿಸಿದರಲ್ಲದೆ ಈ ಅವಧಿಯಲ್ಲೂ ಸರ್ಕಾರ ಸೂಕ್ತ ಕ್ರಮ ಕೈಕೊಳ್ಳದಿದ್ದರೇ ಜುಲೈ ಹತ್ತರಿಂದ ರಾಜ್ಯಾದ್ಯಂತ ಸುಮಾರು 42 ಸಾವಿರ ಆಶಾಕಾರ್ಯಕರ್ತೆಯರು ಆರೋಗ್ಯ ಸೇವೆಯ ಎಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ(ರಿ)ರಾಜ್ಯ ಸಮೀತಿಯ ಪರವಾಗಿ ತೇರದಾಳ,ರಬಕವಿ ಬನಹಟ್ಟಿ,ಚಿಮ್ಮಡ,ಹಿಪ್ಪರಗಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ತೇರದಾಳ ಮತಕ್ಷೇತ್ರದ ಶಾಶಕರಾದ ಸಿದ್ದು ಸವದಿಯವರಿಗೆ ಮನವಿ ನೀಡಿದರು.
- ನಿಮ್ಮ ಜಾಹೀರಾತುಗಳಿಗಾಗಿ ಸಂಪರ್ಕಿಸಿ +91 9902523698


Social Plugin