ಪ್ರಜ್ಞಾವಂತರೇ ನಾವೆಷ್ಟು ಸುರಕ್ಷಿತ-ಸಿ.ಪಿ.ಐ.ಕರುಣೇಶಗೌಡ
ತೇರದಾಳ:ದೇಶದಲ್ಲಿ ಮಾರಣಾಂತಿಕ ಕೊರೊನಾ ವೈರಸ್‍ವು ಈಡಿ ವಿಶ್ವವವನ್ನೇ ತಲ್ಲಣಗೊಳಿಸಿದೆ.ಎಲ್ಲೆಂದರಲ್ಲಿ ಕೊರೋನಾ ವೈರಸ್ಸು ತನ್ನ ಕದಂಬ ಬಾಹುವನ್ನು ಚಾಚುತ್ತಲೇ ಇದೆ.ಇದರಿಂದ ನಾವು ಸರಕಾರ ಹೇಳಿದ ಪರಸ್ಪರರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ ಧರಿಸುವುದು ಎಂಬ ನೀತಿ ನಿಯಮಗಳನ್ನು ಚಾಚುತಪ್ಪದೆ ಪಾಲಿಸಲೇಬೇಕಾದ ಅನಿವಾರ್ಯತೆ ಇದೆ. ಈ ಹಿಂದೆ ಕೆಲದಿನಗಳವರೆಗೂ ನಿಶ್ಚಿಂತೆಯಿಂದ,ನೆಮ್ಮದಿಯಿಂದ ಇದ್ದ ನಾವುಗಳು ಈಗ ಹೆಜ್ಜೆಹೆಜ್ಜೆಗೂ ಕೊರೊನಾ ಅಪಾಯವನ್ನು ಎದುರಿಸುವ ಸಂದರ್ಭ ನಮಗೆ ಬಂದಿದೆ.ಏಕೆಂದರೆ ಕೊರೋನಾ ಎಲ್ಲೋ ದೂರದಲ್ಲಿದೆ ಎಂದು ಮೈಮರೆತ ಕುಳಿತಿದ್ದ ನಮಗೆ ಈಗ ನಮ್ಮ ನಗರದಲ್ಲಿಯೇ ಬಂದು ಒಕ್ಕರಿಸಿದ್ದು ತುಂಬಾ ಅಪಾಯಕಾರಿಯಾಗಿದೆ.ಈಗ ಮಾತ್ರ ನಾವು ಜಾಗೃತೆಯಿಂದ ವರ್ತಿಸಲೇಬೇಕಾದ ಪ್ರಸಂಗ ಬಂದಿದೆ.ಕಾರಣ ಈ ಹಿಂದೆ ಮಾಡಿದ ತಪ್ಪನ್ನು ಈಗಲೂ ಮಾಡಿದ್ದೇ ಆದಲ್ಲಿ ನಮ್ಮ ಪ್ರಾಣಕ್ಕೂ ಹಾಗೂ ಅಮಾಯಕರ ಪ್ರಾಣಕ್ಕೂ ಸಂಚಕಾರ ತಂದಂತಾಗುತ್ತದೆ ಎಂದರು. ಕೊರೋನಾಕ್ಕೆ ಜಾತಿ ಮತ ಭೇದವಿಲ್ಲ, ತನ್ನ ಬಳಿಬಂದ ಎಲ್ಲರನ್ನೂ ಅಪ್ಪಿಕೊಂಡುಬಿಡುತ್ತದೆ.ಕಾರಣ ಪ್ರಜ್ಞಾವಂತರೆನಿಸಿಕೊಂಡವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸರ್ಕಾರ ಈ ನಿಯಮಗಳನ್ನು ತಂದಿರುವುದು ನಮ್ಮೆಲ್ಲರ ರಕ್ಷಣೆಗೋಸ್ಕರ. ಹೀಗಾಗಿ ತಿಳಿದವರೇ ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸುವುದು ಸರಿಯೇ? ನಿಮ್ಮ ಈ ಬೇಜವಾಬ್ದಾರಿಗೆ ದೊಡ್ಡ ಬೆಲೆ ತೆತ್ತಬೇಕಾಗುತ್ತದೆ.ಇದನ್ನೂ ನಾವೇ ತಿಳಿಸಿಕೊಡಬೇಕೆ? ಈಗಾಗಲೇ ಸರ್ಕಾರ ನಿಮ್ಮ ಅನುಕೂಲಕ್ಕಾಗಿ ಕೆಲವೊಂದು ನಿಯಮಗಳನ್ನು ಕಡ್ಡಾಯಗೊಳಿಸಿ ನಿಮ್ಮ ಬದುಕಿನ ನಿರ್ವಹಣೆಯ ಕಾರ್ಯ ಕೆಲಸಗಳಿಗಾಗಿ ಲಾಕ ತೆರವುಗೊಳಿಸಿದೆ.ಆದರೆ ನೀವು ಮಾಡುತ್ತಿರುವುದೇನು? ನಮಗೆ ಗೊತ್ತಾಗದ ಹಾಗೆ ಎಲ್ಲೆಲ್ಲೋ ಸುತ್ತಾಡಿಕೊಂಡು ಬರ್ತಿರಾ,ಅಲ್ಲದೇ ಬೇರೆ ಪ್ರದೇಶಗಳಿಂದ ಬಂದವರನ್ನು ಇಲಾಖೆಗೆ ತಿಳಿಸದೆ ಮನೆಯಲ್ಲಿರಲು ಅವಕಾಶ ಕೊಡುತ್ತಿರಾ ಹೀಗಾದರೆ ಕೊರೋನಾ ತಡೆಗಟ್ಟುವುದು ಸಾದ್ಯವೆ? ಪ್ರಜ್ಞಾವಂತರಾದವರೇ ಈ ರೀತಿ ವರ್ತಿಸಿದರೆ ನಾವೆಷ್ಟು ಸುರಕ್ಷಿತ? ಕಾರಣ ಈಗಲಾದರೂ ತಾವು ಜಾಗೃತರಾಗಿ ಎಲ್ಲರೂ ಸರಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ಈ ಮೂಲಕ ಬನಹಟ್ಟಿ ಪೋಲಿಸ್ ಠಾಣೆಯ ಸಿ.ಪಿ.ಐ.ಕರುಣೇಶಗೌಡ ಈ ಮೂಲಕ ಸಾರ್ವಜನಿಕರಿಗೆ ತಿಳಿಸಿದ್ದಾರೆ.
- ನಿಮ್ಮ ಜಾಹೀರಾತುಗಳಿಗಾಗಿ ಸಂಪರ್ಕಿಸಿ +91 9902523698

Social Plugin