ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಸಾಧನೆಗಳನ್ನು ಒಳಗೊಂಡ ಕರ ಪತ್ರಗಳನ್ನು ಮನೆ ಮನೆಗೆ ತಲುಪಿಸುವ ಅಭಿಯಾನಕ್ಕೆ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು.
ಮೋದಿ ಕರಪತ್ರ ಅಭಿಯಾನಕ್ಕೆ ಚಾಲನೆ
ರಬಕವಿ-ಬನಹಟ್ಟಿ,ಜೂ11: ಮೋದಿ ಸರಕಾರದ 2.0ರ ಮೊದಲ ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಸಾಧನೆಗಳನ್ನು ಒಳಗೊಂಡ ಕರ ಪತ್ರಗಳನ್ನು ಮನೆ ಮನೆಗೆ ತಲುಪಿಸುವ ಅಭಿಯಾನಕ್ಕೆ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರಕಾರದ ಎಲ್ಲಾ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೆ ತಲುಪಬೇಕೆಂಬ ನಿರೀಕ್ಷೆ, ಸಂಪನ್ಮೂಲಗಳ ಕ್ರೋಡಿಕರಣ ಮತ್ತು ಅದರ ಸದ್ಭಳಕೆಯಾಗಬೇಕೆಂಬ ಅಪೇಕ್ಷೆ, ದಶಕಗಳಕಾಲ ನೆನಗುದಿಗೆ ಬಿದ್ದಿದ್ದ ಸಮಸ್ಯೆಗಳೆಲ್ಲವೂ ಬಗೆಹರಿಯಬೇಕೆಂಬ ಆಕಾಂಕ್ಷೆಯ ನಡುವೆ ಹಲಾವರು ಎಡರು ತೊಡರುಗಳು ಬಂದರೂ, ಹಲವಾರು ಐತಿಹಾಸಿಕ ನಿರ್ಧಾರಗಳು, ಆತ್ಮ ನಿರ್ಭರ ಭಾರತಕ್ಕೆ ಚಾಲನೆ, ಕೋವಿಡ್ ಸಂಕಷ್ಟ ನಿರ್ವಹಣೆ ಸೇರಿದಂತೆ ಹಲವಾರು ಸಾಧನೆಗಳನ್ನು ಮೋದಿ ನೇತೃತ್ವದ ಸರಕಾರ ಮಾಡಿದೆ. ಅಂತಹ ಸಾಧನೆಯ ವಿವರಗಳನ್ನು ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸುರೇಶ ಅಕ್ಕಿವಾಟ, ಆನಂದ ಕಂಪು, ರಾಜು ಅಂಬಲಿ, ಈರಣ್ಣ ಚಿಂಚಖಂಡಿ, ಶಿವಾನಂದ ಬುದ್ನಿ, ಕುಮಾರ ಕದಂ, ರಮೇಶ ಮಂಡಿ, ಶ್ರೀಶೈಲ ಬೀಳಗಿ, ಗೌರಿ ಮಿಳ್ಳಿ, ಪ್ರವೀಣ ದಭಾಡಿ ಸೇರಿದಂತೆ ಅನೇಕರು ಇದ್ದರು.
- FOR ADVERTISEMENT CONTACT -
9902523698

Social Plugin