ವರದಿ : ಕೆ. ಎಸ್. ರಂಗಸ್ವಾಮಿ 
ಚಿತ್ರದಲ್ಲಿ : ತೇರದಾಳದ ವಿಶೇಷ ತಹಶಿಲದಾರ ಕೆ.ಮೆಹಬೂಬಿಯವರು ಬೆಂಗಳೂರಿಗೆ ವರ್ಗಾವಣೆಗೊಂಡ ನಿಮಿತ್ಯ ರಬಕವಿ ಬನಹಟ್ಟಿ ತಾಲ್ಲೂಕಾಡಳಿತಾಧಾಕಾರಿ ಪ್ರಶಾಂತ ಚನಗೊಂಡ ಗ್ರೇಡಟು ತಹಶಿಲ್ದಾರ ಎಸ್.ಬಿ.ಕಾಂಬಳೆ, ತೇರದಾಳ ಉಪತಹಶೀಲ್ದಾರ ಎಸ್.ಬಿ.ಮಾಯನ್ನವರ,ಕಂದಾಯ ನೀರಿಕ್ಷಕರಾದ ಬಸವರಾಜ ತಾಳಿಕೋಟಿ,ಗ್ರಾಮಲೆಕ್ಕಾಧಿಕಾರಿ ಪಿ.ಮಠಪತಿ, ಮಲ್ಲಿಕಾರ್ಜುನ ಖವಟಕೊಪ್ಪ ಎ.ತಾಂಬೋಳಿ ಇನ್ನೂಳಿದ ಗ್ರಾಮಲೆಕ್ಕಾಧಿಕಾರಿಗಳು,ಹಾಗೂ ಸಿಬ್ಬಂದಿ ವರ್ಗದವರು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.
ತೇರದಾಳದ ತಾಲ್ಲೂಕ ಹೋರಾಟ ಸಮೀತಿಯ ಸದಸ್ಯರು ಬೆಂಗಳೂರಿಗೆ ವರ್ಗಾವಣೆಗೊಂಡ ವಿಶೇಷತಹಶಿಲ್ದಾರ ಕೆ.ಮೆಹಬೂಬಿಯವರನ್ನು ಸನ್ಮಾನಿಸಿ ಬೀಳ್ಕೊಟ್ಟರು.           

ತೇರದಾಳ: ತೇರದಾಳ ಪಟ್ಟಣದ ವಿಶೇಷ ತಹಶೀಲ್ದಾರರಾದ ಕೆ.ಎ.ಎಸ್ ಅಧಿಕಾರಿ ಕೆ.ಮಹೆಬೂಬಿ ಅವರು ತೇರದಾಳದಿಂದ ಬೆಂಗಳೂರಿಗೆ ವರ್ಗಾವಣೆಯಾದರು. ಕೆ.ಎ.ಎಸ್ ಅಧಿಕಾರಿಯಾದ ಮಹೆಬೂಬಿಯವರು ತೇರದಾಳ ಪಟ್ಟಣಕ್ಕೆ ಅಧಿಕಾರಿಯಾಗಿ ಬಂದ ಮೇಲೆ ಬಿಡುವಿಲ್ಲದೆ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದರು. ಅವರ ಅವೀರತ ಸೇವೆಯನ್ನು ನಾವು ಎಂದು ಮರೆಯಲು ಸಾಧ್ಯವಿಲ್ಲ.ತೇರದಾಳ ಪಟ್ಟಣದ ಮೇಲೆ ಅವರು ಇಟ್ಟಿರುವ ಅಭಿಮಾನ ಹೇಳಲಸಾಧ್ಯ. ತೇರದಾಳ ಪಟ್ಟಣಕ್ಕೆ ವಿಶೇಷ ತಹಶಿಲ್ದಾರರಾಗಿ ನಿಯುಕ್ತಿಗೊಳ್ಳುವದಕ್ಕಿಂತ ಮುಂಚೆ ಮಾನ್ಯ ಕರ್ನಾಟಕ ಸರ್ಕಾರವು ತೇರದಾಳ ಪಟ್ಟಣವನ್ನು ಹೊಸದಾಗಿ ತಾಲ್ಲೂಕನ್ನಾಗಿ ಘೋಷಣೆ ಮಾಡಿತು.ಇದರಿಂದ ಈಡಿ ಪಟ್ಟಣದ ಜನತೆ ಕುಣಿದು ಕುಪ್ಪಳಿಸಿತು.ಅಲ್ಲದೆ ಇಡಿ ಕಚೇರಿಯನ್ನು ತೊಳೆದು ಸ್ವಚ್ಛಮಾಡಿದರು. ಇದೇ ಸಂದರ್ಭದಲ್ಲಿ ಸರಕಾರವು ಮೆಹಬೂಬಿಮೆಡಮ್‍ರವರನ್ನು ತೇರದಾಳಕ್ಕೆ ವಿಶೇಷತಹಶಿಲ್ದಾರರಾಗಿ ನಿಯುಕ್ತಿಗೊಳಿಸಿತು. ಆದರೆ ಈ ಸಂದರ್ಭದಲ್ಲಿ ಮೆಹಬೂಬಿಯವರು ಅನಾರೋಗ್ಯಕ್ಕಿಡಾಗಿ ಆಸ್ಪತ್ರೆಯಲ್ಲಿ ದಾಖಲಾಗಿ ಬರುವ ಸ್ಥಿತಿಯಲ್ಲಿರಲಿಲ್ಲ.ಆದರೆ ಹೊಸ ತಾಲ್ಲೂಕಾದ ಕಾರಣ ಖುಷಿಯಲ್ಲಿದ್ದ ಜನತೆ ಅಧಿಕಾರಿಗಳ ಸ್ವಾಗತಕ್ಕೆ ಎಲ್ಲ ತಯಾರಿಮಾಡಿಕೊಂಡು ಅಧಿಕಾರಿಗಳ ಬರುವಿಕೆಗಾಗಿ ಕಾಯತೊಡಗಿದರು.ಈ ಸುದ್ದಿ ತಿಳಿದು ತಮ್ಮ ಆರೋಗ್ಯದ ಪರಿವೆಯೇ ಇಲ್ಲದೆ ತೇರದಾಳಕ್ಕೆ ಬಂದು ಜನತೆಯಿಂದ ಆತ್ಮೀಯ ಸನ್ಮಾನ ಸ್ವಿಕರಿಸಿದರು. ಇದರಿಂದ ಮೆಹಬೂಬಿ ಮೆಡಮರವರು ತೇರದಾಳ ಜನತೆಯ ಮನಸ್ಸಿನಲ್ಲಿ ಒಬ್ಬ ಅಧಿಕಾರಿಯಾಗದೆ ವಿಶೇಷ ಸಹೋದರಿಯಾಗಿ ಉಳಿದುಕೊಂಡರು. ಅವರು ತೇರದಾಳಕ್ಕೆ ಬಂದ ತಕ್ಷಣವೇ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆತ್ಮೀಯತೆಯಿಂದ ಕೆಲಸ ನಿರ್ವಹಿಸಿ   ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆಯನ್ನು ಗಳಿಸಿದರು. ಅವರು ಎಂದೂ ಜಾತಿ, ಧರ್ಮ,ಪಕ್ಷ ಎನ್ನದೆ ಕಾನೂನಿನ ಅಡಿಯಲ್ಲಿ ಕೆಲಸ ಮಾಡಿ ಕಾನೂನನ್ನು ಎತ್ತಿ ಹಿಡಿದ ದಿಟ್ಟ ಅಧಿಕಾರಿ ಎನ್ನಬಹುದು. ಕಚೇರಿಯಲ್ಲಿದ್ದ ಸಂದರ್ಭದಲ್ಲಿ ಅವರು ಯಾವಾಗಲೂ ಮಾತೃಭಾಷೆಯಲ್ಲಿಯೇ ಮಾತನಾಡುತ್ತಿದ್ದರು,ಅಲ್ಲದೆ ಬೇರೆ ಯಾರೇ ಬಂದರೂ ಕನ್ನಡದಲ್ಲಿಯೇ ಮಾತನಾಡಿ ಎಂದು ಕಡ್ಡಾಯವಾಗಿ  ಹೇಳಿ ಮಾತೃಭಾಷೆಗೆ ಗೌರವ ನೀಡಿದ ಮಾತೆ ಎನ್ನಬಹುದು. ಅವರು ಎಂದೂ ಸುಮ್ಮನೆ ಕುಳಿತು ಕೊಳ್ಳುವ ಪ್ರವೃತ್ತಿ ಇವರದಾಗಿರಲಿಲ್ಲ.ಇತ್ತೀಚೆಗೆ ನಮ್ಮ ಉತ್ತರಕರ್ನಾಟಕ್ಕೆ ಮರೆಯಲಾಗದ ನೆರೆ ಹಾವಳಿ ಬಂದಾಗ ಹಗಲು ರಾತ್ರಿ ಎನ್ನದೆ ಕೆಲಸಮಾಡಿದರು.ನದಿಯಲ್ಲಿ ಸಿಲುಕಿರುವ ಜನರ ರಕ್ಷಣೆಗಾಗಿ ತಮ್ಮ ಜೀವದ ಹಂಗು ತೊರೆದು ಫ್ಲಡ್‍ಬೋಟದಲ್ಲಿ ತೆರಳಿ ಜನರ ರಕ್ಷಣೆಮಾಡಿದರು. ಹೀಗೆ ಮಹೆಬೂಬಿ ಮೆಡಮ್‍ರವರು ಒಬ್ಬ ಕೆ.ಎ.ಎಸ್. ಅಧಿಕಾರಿಯಾಗಿದ್ದರೂ ಸಹ ಅತೀ ಸರಳವಾಗಿ      ಜನಸಾಮಾನ್ಯರೊಂದಿಗೆ ಬೆರೆತು ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ಮನೋಭಾವವುಳ್ಳ ಇವರು ಗೊತ್ತಾಗದ ಹಾಗೆ ಇಲ್ಲಿಯ ಜನತೆಯ ಮನಸ್ಸಿನಲ್ಲಿ ಮರೆಯಲಾಗದ ಅಚ್ಚನ್ನು ಮೂಡಿಸಿದ್ದಾರೆ ಎನ್ನಬಹುದು. ಇಂತಹ ಕರ್ತವ್ಯನಿಷ್ಠ  ದಿಟ್ಟ ಅಧಿಕಾರಿ ನಮ್ಮ ತೇರದಾಳಕ್ಕೆ ಬಂದಿದ್ದು ನಮ್ಮ ಸುದೈವ ಎಂದು ಹೇಳಲು ನಮಗೆ ಹೆಮ್ಮೆ ಎನಿಸುತ್ತದೆ. ಭವಿಷ್ಯದಲ್ಲಿ ಅವರು ಇನ್ನೂ ಹೆಚ್ಚಿನ ರೀತಿಯಲ್ಲಿ   ಉನ್ನತ ಸ್ಥಾನಮಾನಗಳಿಗೆ ಏರಲಿ ಅಂತಾ ತೇರದಾಳ ಜನತೆಯ ಪರವಾಗಿ ನಮ್ಮ ಸ್ವರೂಪಸಂದರ್ಶನ ವಾಹಿನಿಯು ಹಾಗೂ ಪತ್ರಿಕಾಬಳಗ ಈ ಮೂಲಕ ಅವರಿಗೆ ಶುಭ ಹಾರೈಸುತ್ತದೆ.


- FOR ADVERTISEMENT CONTACT -
               9902523698