ತೇರದಾಳ ಪಟ್ಟಣದ ಪ್ರತಿಷ್ಠಿತ ಎಸ್.ಡಿ.ಎಂ ಟ್ರಸ್ಟಿನ ಡಾ.ಸಿದ್ಧಾಂತ ದಾನಿಗೊಂಡ ಸೆಂಟ್ರಲ್ ಶಾಲೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮ ಜ್ಯೋತಿ ಬೆಳಗಿಸುವ ಮೂಲಕ ಡಾ.ಎಮ್.ಎಸ್.ದಾನಿಗೊಂಡ ಚಾಲನೆ ನೀಡಿದರು.
ತೇರದಾಳ ಪಟ್ಟಣದ ಪ್ರತಿಷ್ಠಿತ ಎಸ್.ಡಿ.ಎಂ ಟ್ರಸ್ಟಿನ ಡಾ.ಸಿದ್ಧಾಂತ ದಾನಿಗೊಂಡ ಸೆಂಟ್ರಲ್ ಶಾಲೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ನಿಮಿತ್ಯ ಹಮ್ಮಿಕೊಂಡ ಕರ್ಯಕ್ರಮದಲ್ಲಿ ದಾನಿಗಳು ರಕ್ತ ದಾನ ಮಾಡಿದರು.
ತೇರದಾಳ : ಪಟ್ಟಣದ ಪ್ರತಿಷ್ಠಿತ ಎಸ್.ಡಿ.ಎಂ ಟ್ರಸ್ಟಿನ ಡಾ.ಸಿದ್ಧಾಂತ ದಾನಿಗೊಂಡ ಸೆಂಟ್ರಲ್ ಶಾಲೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಖ್ಯಾತ ವೈದ್ಯರು ಎಸ್.ಡಿ.ಎಂ ಟ್ರಸ್ಟಿನ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಡಾ.ಮಹಾವೀರ.ಎಸ್.ದಾನಿಗೊಂಡ ರಕ್ತದಾನ ಮಾಡುವುದರಿಂದ ರಕ್ತ ಮತ್ತೆ ಉತ್ಪತ್ತಿಯಾಗುತ್ತದೆ. ಇದರಿಂದ ಆರೋಗ್ಯಯುತವಾಗಿರಬಹುದು. ಅಪಘಾತವಾದಾಗ ರೋಗಿಗೆ ರಕ್ತ ನೀಡುವುದರಿಂದ ಆತನ ಜೀವ ಉಳಸಿದ ಪುಣ್ಯ ನಿಮ್ಮದಾಗುತ್ತದೆಂದು ಹೇಳಿದರು.
ಅತಿಥಿಗಳಾಗಿ ಎಸ್.ಡಿ.ಎಂ ಟ್ರಸ್ಟಿನ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಯ ಮ್ಯಾನೆಜಿಂಗ್ ಟ್ರಸ್ಟಿಯಾದ ಪ್ರತಿಭಾ.ಎಂ.ದಾನಿಗೊಂಡ, ಪ್ರಾಚಾರ್ಯ ಡಾ.ಸುನಿಲ.ಎನ್.ಜೇಮ್ಸ್, ದಾನಿಗೊಂಡ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಪಿ.ಬಿ. ಅಪರಾಜ, ಹಾಗೂ ಮುಧೋಳ ನಗರದ ರಾಮನಗೌಡ ಹಾಸ್ಪಿಟಲ್ ಬ್ಲಡ್ ಬ್ಯಾಂಕಿನಿಂದ ಮಹಾದೇವ ಪೂಜೇರಿ ಆಗಮಿಸಿದ್ದರು. 28 ಜನ ರಕ್ತದಾನಿಗಳಿಗೆ ರಾಮನಗೌಡ ಹಾಸ್ಪಿಟಲ್ ಬ್ಲಡ್ ಬ್ಯಾಂಕಿನ ವತಿಯಿಂದ ರಕ್ತ ದಾನಿಗಳ ಪ್ರಮಾಣ ಪತ್ರವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಪದ್ಮಾ ಆಯುರ್ವೇದಿಕ್ ಹಾಸ್ಪಿಟಲ್, ದಾನಿಗೊಂಡ ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಪದ್ಮಾ ಇಂಡೆನ್ ಗ್ಯಾಸ್ ಸರ್ವಿಸ್ ತೇರದಾಳ, ರತ್ನಾತ್ರಯ ಅಲ್ಪಸಂಖ್ಯಾತರ ಸೌಹಾರ್ದ ಸಹಕಾರಿ ನಿಯಮಿತ ತೇರದಾಳ, ರತ್ನಾತ್ರಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ನಿಯಮಿತ ತೇರದಾಳದ ಸಿಬ್ಬಂದಿಯವರು ವಿದ್ಯಾರ್ಥಿಗಳ ಪಾಲಕರು ಭಾಗವಹಿಸಿದ್ದರು. ಶಿಕ್ಷಕ ಅನಿಲಕುಮಾರ ನಿರೂಪಿಸಿದರು.
- FOR ADVERTISEMENT CONTACT -
- 9902523698 -

Social Plugin